ಮಂಗಳೂರು:ವೈವಿಧ್ಯಮಯ ತಿಂಡಿ ತಿನಿಸುಗಳನ್ನೊಳಗೊಂಡ ಆಹಾರೋತ್ಸವದಲ್ಲಿ ಸವಿ ಸವಿಯುವುದೇ ತಮ್ಮ ಲೋಕವಾದರೆ ಮಹಿಳಾಮಣಿಗಳಿಗೆ ಕರಕುಶಲಮಳಿಗೆಗಳೇ ಅವರ ಇಷ್ಟದ ಜಾಗ . ಬಾಗಲಕೋಟೇಯಿಂದ ಬಣ್ಣ ಬಣ್ಣದ ಕೈಮಗ್ಗ ಸೀರೆಗಳು, ದೆಹಲಿಯಿಂದ ಜೂಟ್ ಬ್ಯಾಗ್ಗಳು, ಹ್ಯಾಂಡ್ ಮೇಡ್ ಪೋಟೋ ಪ್ರೇಮ್ಗಳು, ಚಮಕ್ ಚಮಕ್ ಎನ್ನುವ ಬಳೆಗಳು,ಓಲೆಗಳು,ಮುದ್ದು ಮುದ್ದಾದ ಕೀ ಚೈನ್ಗಳು, ಸುಂದರವಾದ ಪೈಂಟಿಂಗಳು.
ಚಿತ್ತೂರಿನ ಶುದ್ಧ ರೇಷ್ಮೇ ಸೀರೆ ಮಹಿಳೆಯರನ್ನು ನಿರಂತರ ಆಕರ್ಷಿಸುತ್ತಿವೆ. ಇನ್ನು ಪಂಜಾಬಿನ ರವಿಕುಮಾರ್ ಮತ್ತು ಜಸ್ಪಾಲ್ ಸಿಂಘ್ ನವರ 3ಡಿ ಥರ್ಮಾಕಾಲ್ ಪೈಂಟಿಂಗಳು ಕಲಾಭಿಮಾನಿಗಳ ಮನ ಸೆಳೆಯುವಲ್ಲಿ ಯಶಸ್ವಿಯಾದವು. ಯುವಜನತೆಯಿಂದ ಹಿಡಿದು ವೃದ್ಧರ ತನಕ "ಆರ್ಟ್ ಆಫ್ ಲಿವಿಂಗ್"ನ ಮಾಹಿತಿಪೂರ್ಣ ಮಳಿಗೆ ಆಕರ್ಷಣೆಗೆ ಪಾತ್ರವಾಯಿತು.
ಮುಖ್ಯವಾಗಿ ಯುವಜನತೆಯನ್ನು ಮದ್ಯ ಸೇವನೆ,ಮಾದಕ ವ್ಯಸನಗಳಿಂದ ದೂರವಿಡಲು ಮತ್ತು ಎಚ್ಚರಿಸಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರ ಮಳಿಗೆಗಳು ಇದ್ದವು. ಯುವಜನರ ಬೆಳವಣಿಗೆಗೆ ರಾಜೀವ್ ಗಾಂಧಿ ರಾಷ್ಟ್ರೀಯ ಯುವಕರ ಅಭಿವೃಧಿ ಸಂಸ್ಥೆ ವತಿಯಿಂದ ಎಜುಕೇಶನ್ ಬೇಸ್ಸ್ಡ್ ಮಳಿಗೆಗಳು ಮಾಹಿತಿ ನೀಡುವಲ್ಲಿ ಯಶಸ್ವಿಯಾದವು.ಭಾರತದಲ್ಲಿ ಅಪರೂಪವಾದಂತಹ ಸ್ನಾತಕೋತ್ತರ ಪದವಿಯ ಕುರಿತಾದ ಮಾಹಿತಿಗಳು ಈ ಮಳಿಗೆಯಲ್ಲಿದ್ದವು.
ಹೊಟ್ಟೆಗೆ ರುಚಿ ರುಚಿಯಾದ ಆಹಾರ, ಕಣ್ಣಿಗೆ ಹಬ್ಬ ನೀಡುವ ಮಳಿಗೆಗಳು, ಜಗಮಗಿಸುವ ಅತ್ಯಾಕರ್ಷಕ ವಸ್ತು ವೈವಿಧ್ಯಗಳನ್ನೊಳಗೊಂಡ ಮಳಿಗೆಗಳು ಆಸಕ್ತರಿಗಾಗಿ ಕಾಯುತ್ತಿವೆ...
ವರದಿ: ನೇಹಾ.ಪಿ.ಎನ್
ಚಿತ್ರ : ಹರೀಶ್ ಕೆ.ಆದೂರು