Saturday, January 7, 2012

'ಬಾಲ ಭಾರತ್ ಸೃಜನೋತ್ಸವ' ಪ್ರಗತಿ ಪರಿಶೀಲನಾ ಸಭೆ,ಚೆಕ್ ಹಸ್ತಾಂತರ

ಮಂಗಳೂರು,ಜನವರಿ.07:ರಾಜ್ಯ ಬಾಲ ಭವನ ಸೊಸೈಟಿ ಜ.22 ರಿಂದ 25ರ ವರೆಗೆ ಪಿಲಿಕುಳ ನಿಸರ್ಗ ಧಾಮದಲ್ಲಿ ಸಂಘಟಿಸಲಿರುವ `ಬಾಲ್ ಭಾರತ್ ಸೃಜನೋತ್ಸವ'ಕ್ಕಾಗಿ ದ್ವಿತೀಯ ಕಂತಿನ ಅನುದಾನ ರೂ.67.69 ಲಕ್ಷದ ಚೆಕ್ಕನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ್ ಅವರು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರಿಗೆ ಹಸ್ತಾಂತರಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿದ ಸಚಿವರು,ಬಾಲ ಭಾರತ್ ಸೃಜ ನೋತ್ಸ ವದ ವೆಬ್ ಸೈಟಿಗೆ ಚಾಲನೆ ನೀಡಿದರು.ಈ ಸಂದ ರ್ಭದಲ್ಲಿ ಮಾತ ನಾಡಿದ ಅವರು ದೇಶದ 20 ರಾಜ್ಯಗಳ 28 ತಂಡ ಗಳಾಗಿ ಸುಮಾರು 2000 ಮಕ್ಕಳು ಉತ್ಸವ ದಲ್ಲಿ ಭಾಗ ವಹಿ ಸುವರು. ದಕ್ಷಿಣ ಕನ್ನಡ ಜಿಲ್ಲೆಯ 1,000 ಮಕ್ಕಳು ಕೂಡಾ ಪಾಲ್ಗೊಳ್ಳುವರು. ಇಂತಹ ಸಂದರ್ಭದಲ್ಲಿ ಊಟ, ವಸತಿ ಮತ್ತು ರಕ್ಷಣೆಗೆ ಹೆಚ್ಚಿನ ಒತ್ತು ನೀಡ ಬೇಕು ಎಂದು ಸಚಿವರು ಸೂಚನೆ ನೀಡಿದರು. ರೂ.1 ಲಕ್ಷವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮತ್ತೆ ರೂ.25 ಲಕ್ಷ ಅನುದಾನವನ್ನು ನೀಡಲಾಗುವುದು ಎಂದರು.ಯುವ ಜನೋ ತ್ಸವ ಮುಗಿದ ಬಳಿಕ ಪಿಲಿ ಕುಳ ದಲ್ಲಿ ಇ ನ್ನೊಂದು ಸಭೆ ನಡೆಸಿ ಅಂತಿಮ ಸಿದ್ಧ ತೆಗ ಳನ್ನು ಪರಿ ಶೀಲಿಸು ವುದಾಗಿ ಪಾಟೀಲ್ ತಿಳಿಸಿದರು.
ಸಭೆ ಯಲ್ಲಿ ಭಾಗವ ಹಿಸಿದ ಸಚಿವ ಕೃಷ್ಣ ಪಾಲೆಮಾರ್ ಯುವಜನೋತ್ಸವ ಮತ್ತು ಬಾಲ ಭಾರತ್ ಸೃಜನೋತ್ಸವಕ್ಕಾಗಿ ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವ ಕೆಲಸ ಭರದಿಂದ ಸಾಗಿದೆ. ಎರಡೂ ಉತ್ಸವಗಳನ್ನು ಜಿಲ್ಲೆಗೆ ಸಿಕ್ಕಿದ ಅವಕಾಶವೆಂದು ತಿಳಿದು ಅಚ್ಚು ಕಟ್ಟಾಗಿ ಸಂಘಟಿಸಲಾಗುವುದು ಎಂದರು.
ಬಾಲ ಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಭಟ್ ಅವರು ಮಾತನಾಡಿ ಬಾಲ ಭಾರತ್ ಸೃಜನೋತ್ಸವ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ಮತ್ತು ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಉಪಸ್ಥಿತರಿದ್ದರು.