ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದ ಸಚಿವರು ಕಾರ್ಯಕ್ರಮದ ಉದ್ಘಾಟನೆ ಮತ್ತು ಸಮಾರೋಪದ ದಿನದಂದು ತಾನು ಖುದ್ದಾಗಿ ಹಾಜರಿದ್ದು ಯಾವುದೇ ಸಮಸ್ಯೆಗಳು ಬಂದರೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ನುಡಿದರು. ಸೃಜನೋತ್ಸವಕ್ಕೆ ಹೊರ ರಾಜ್ಯಗಳಿಂದ ಆಗಮಿಸುವ ಮಕ್ಕಳ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ಉಳಿದ ರಾಜ್ಯಗಳಿಗೆ ಪಸರಿಸಲು ಸಾಧ್ಯವೆಂದ ಅವರು ಈ ಮೂಲಕ ಸ್ಥಳಿಯ ಕಲೆ,ಸಂಸ್ಕೃತಿ ಮಕ್ಕಳ ಮೂಲಕ ಎಲ್ಲರಿಗೂ ತಿಳಿಯಲಿದೆ ಎಂದರು.
ಶಿಕ್ಷಣ ಇಲಾಖಾ ವತಿಯಿಂದ ಎಂಟು ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆಹಾರದ ಬಗ್ಗೆ ಅತೀ ಹೆಚ್ಚು ಮುನ್ನಚ್ಚರಿಕೆ ವಹಿಸಿದ್ದು, ಆಹಾರ ಸರಬರಾಜು ಮಾಡುವ ಮುನ್ನ ಆರೋಗ್ಯ ಇಲಾಖೆಯ ಮೂಲಕ ಪರಿಶೀಲಿಸಿ ಬಡಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿದೆ ಎಂದರು. ಯಾವುದೇ ಅಧಿಕಾರಿಗಳು ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡದೆ ಸೃಜನೋತ್ಸವದ ಯಶಸ್ಸಿಗೆ ಸಹಕರಿಸಬೇಕೆಂದರು.
ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಈಗಾಗಲೇ ರೂ. 69 ಲಕ್ಷಗಳನ್ನು ಬಿಡುಗಡೆ ಮಾಡಿದ್ದು,ಇನ್ನೆರಡು ದಿನಗಳಲ್ಲಿ ರು.25 ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ ಎಂದರು. ಮಕ್ಕಳ ಸಾರಿಗೆ ಸಂಪರ್ಕಕ್ಕೆ 30 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಮುದ್ರ ತೀರದಲ್ಲಿ ನಡೆಯುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಲಾಶಿಕ್ಷಕರ ಬಳಕೆ ಮತ್ತು ಮೇಲುಸ್ತುವರಿಗೆ 57 ಜನ ಅಧಿಕಾರಿಗಳಿದ್ದು, ತಮ್ಮ ಇಲಾಖೆಯಿಂದ ಎಲ್ಲಾ ನೆರವು ಮತ್ತು ಸಹಕಾರ ನೀಡಲಾಗುವುದು ಎಂದು ಸಚಿವರು ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಜಿಲ್ಲಾಧಿಕಾರಿ ಡಾ, ಎನ್,ಎಸ್, ಚನ್ನಪ್ಪ ಗೌಡ, ಸಿ.ಇ.ಒ. ಡಾ. ವಿಜಯ ಪ್ರಕಾಶ್, ಬಾಲ್ ಭವನ ಸೊಸೈಟಿ ಅಧ್ಯಕ್ಷೆ ಶ್ರಿಮತಿ ಸುಲೋಚನ ಭಟ್ ಸೆರಿದಂತೆ ಜಿಲ್ಲೆಯ ಎಲ್ಲಕಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.