ಮಂಗಳೂರು,ಜನವರಿ.22: ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತ್ತಿಸಿ ಪ್ರೋತ್ಸಾಹಿಸಿದಾಗ ಅವರಲ್ಲಿರುವ ಪ್ರತಿಭಾ ವಿಕಸನಗೊಂಡು,ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.ಆ ಮೂಲಕ ಬಲಿಷ್ಠ ಭಾರತ ನಿರ್ಮಾಣದ ಗುರಿ ಸಾಕಾರಗೊಳ್ಳುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸಿ.ಸಿ. ಪಾಟೀಲ್ ಅವರು ಹೇಳಿದರು.ರಾಜ್ಯ ಬಾಲ ಭವನ ಸೊಸೈಟಿ ಹಾಗೂ ದ.ಕ. ಜಿಲ್ಲಾ ಡಳಿತ ಆಶ್ರ ಯದಲ್ಲಿ ಪಿಲಿ ಕುಳ ನಿಸ ರ್ಗಧಾ ಮದಲ್ಲಿ ಆಯೋ ಜಿಸಿ ರುವ ನಾಲ್ಕು ದಿನ ಗಳ 'ಬಾಲ ಭಾರತ ಸೃಜ ನೋತ್ಸವ'ವನ್ನು ಉದ್ಘಾ ಟಿಸಿ ಮಾತ ನಾ ಡಿದರು. ಕೇವಲ ಪಠ್ಯ ಕಲಿಕೆ ಮತ್ತು ಅಂಕ ಗಳಿಕೆ ಮಾತ್ರ ಮಕ್ಕಳ ಏಕೈಕ ಗುರಿ ಯಾಗಿ ರದೆ,ಶಿಕ್ಷಣ ಜತೆಗೆ ರಚನಾತ್ಮಕ ಚುಟವಟಿಕೆಗಳು, ಪಠ್ಯೇತರ ವಿಷಯಗಳಿಗೂ ವಿಶೇಷ ಒತ್ತು ನೀಡುವುದು ಅಗತ್ಯ. ಆಗ ಮಾತ್ರ ಎಳೆಯರಲ್ಲಿ ಸೃಜನಶೀಲ ಗುಣ ಬೆಳೆಯಲು ಸಾಧ್ಯವಾಗುತ್ತದೆ.ಕರ್ನಾಟಕದ ಜವಾಹರಲಾಲ ಬಾಲಭವನದ ಇತಿಹಾಸದಲ್ಲಿ ಈ ಸೃಜನೋತ್ಸವ ಒಂದು ಐತಿಹಾಸಿಕ ಘಟನೆಯಾಗಿದ್ದು,ಇದಕ್ಕೆ ಪಿಲಿಕುಳ ಗ್ರಾಮ ಸಾಕ್ಷಿಯಾಗುತ್ತಿದೆ ಎಂದರು.
ರಾಜ್ಯ ವಿಧಾನ ಸಭಾ ಉಪಾ ಧ್ಯಕ್ಷ ಎನ್. ಯೋ ಗೀಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲು,ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗ ರಾಜ ಶೆಟ್ಟಿ ಸಮಾ ರಂಭ ದಲ್ಲಿ ಎಳೆಯ ಮಕ್ಕಳಿಗೆ ಸ್ಪೂರ್ತಿ ದಾಯಕ ಮಾತು ಗಳ ನ್ನಾಡಿದರು.ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಮಾತನಾಡಿ ಮಕ್ಕಳು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಮಕ್ಕಳು ದಾರಿತಪ್ಪಿದರೆ ಮುಂದೆ ದೇಶ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.ಆದ್ದರಿಂದ ಎಳೆ ಮಕ್ಕಳಿಗೆ ಸಮರ್ಥ ಮಾರ್ಗದರ್ಶನ ಅತ್ಯಗತ್ಯ. ದೇಶದ ಸಂಸ್ಕೃತಿ, ಪರಂಪರೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ.ಬರುವ ಶೈಕ್ಷಣಿಕ ವರ್ಷದಲ್ಲಿ ತಾನು ಪ.ಪೂ. ಕಾಲೇಜೊಂದನ್ನು ಆರಂಭಿಸಲು ಉದ್ದೇಶಿಸಿದ್ದು ಇದರಲ್ಲಿ ಅರ್ಹರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು.
ಶಾಸಕಿ ಮಲ್ಲಿಕಾ ಪ್ರ ಸಾದ್, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈ ಲಜಾ ಭಟ್, ಜಿಲ್ಲಾ ಧಿಕಾರಿ ಡಾ| ಎನ್. ಎಸ್. ಚನ್ನಪ್ಪ ಗೌಡ, ಜಿ.ಪಂ.ಪೊ ಲೀಸ್ ಕಮೀ ಷನರ್ ಸೀ ಮಂತ್ ಕುಮಾರ್ ಸಿಂಗ್, ಸದಸ್ಯೆ ಯಶ ವಂತಿ ಆಳ್ವ, ಬಾಲ ಭವನ ಸದಸ್ಯೆ ಹಾಗೂ ನಟಿ ರೂಪಿಕಾ ಮುಂಬಯಿ ಎಸಿಪಿ, ಚಿಣ್ಣರ ಬಿಂಬದ ಅಧ್ಯಕ್ಷ ಪ್ರಕಾಶ್ ಭಂ ಡಾರಿ, ಪಿಲಿ ಕುಳ ನಿಸರ್ಗ ಧಾಮದ ಕಾರ್ಯ ನಿರ್ವಾಹಕ ನಿರ್ದೇ ಶಕ ಜೆ. ಆರ್. ಲೋಬೋ , ಮೀನು ಗಾರಿಕಾ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ಎಸ್. ರಮೇಶ್,ತಾ.ಪಂ. ಸದಸ್ಯ ಹರೀಶ್ ಕುಮಾರ್, ಗ್ರಾ,ಪಂ. ಅಧ್ಯಕ್ಷ ಉಮೇಶ್ ಅತಿಥಿಗಳಾಗಿದ್ದರು. ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಸ್ವಾಗತಿಸಿದರು. ಮನಪಾ ಆಯುಕ್ತ ಡಾ| ಕೆ.ಎನ್. ವಿಜಯಪ್ರಕಾಶ್ ವಂದಿಸಿದರು. ಉದ್ಘಾಟನಾ ಸಮಾರಂಭಕ್ಕೆ ಮುನ್ನ ವಾಮಂಜೂರಿನಿಂದ ಪಿಲಿಕುಳದವರೆಗೆ ವಿವಿಧ ಸಾಂಸ್ಕೃತಿಕ ತಂಡಗಳು ಹಾಗೂ ಟ್ಯಾಬ್ಲೊಗಳ ಸಹಿತ ಭವ್ಯ ಮೆರವಣಿಗೆ ನಡೆಯಿತು.ಸೃಜನೋತ್ಸವಕ್ಕೆ ದೇಶದ 19 ರಾಜ್ಯಗಳ ಬಾಲಭವನಗಳಿಂದ ಮಕ್ಕಳು ಆಗಮಿಸಿದ್ದು, ಒಟ್ಟು ಸುಮಾರು 3,000 ಮಕ್ಕಳು ಪಾಲ್ಗೊಳುತ್ತಿದ್ದಾರೆ. ವಿವಿಧ ರಾಜ್ಯಗಳ ನೃತ್ಯಗಳು, ಕಲೆಗಳು ಪ್ರದರ್ಶಿತಗೊಳ್ಳಲಿವೆ ಹಾಗೂ ಆಯ್ದ ವಿಭಾಗಳಲ್ಲಿ ಸ್ಪರ್ಧೆಗಳು ಜರಗಲಿವೆ.