ಮಂಗಳೂರು,ಜನವರಿ.04:ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 142 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಹಾನಗರಪಾಲಿಕೆಗೆ 2ನೇ ಹಂತದಲ್ಲಿ 100 ಕೋಟಿ ಮಂಜೂರು ಮಾಡಿದ್ದು 66.50 ಕೋಟಿ ಅನುದಾನಕ್ಕೆ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದರು.ಇಂದು ನಗರದ ಸರ್ಕಿಟ್ ಹೌಸ್ ನಲ್ಲಿ ರಾಷ್ಟ್ರೀಯ ಯುವ ಜನೋ ತ್ಸವದ ಸಿದ್ಥತೆ ಯ ಪ್ರಗತಿ ಪರಿ ಶೀಲನೆ ಸಂದ ರ್ಭದಲ್ಲಿ ಮಾಧ್ಯ ಮದೊಂ ದಿಗೆ ಮಾತ ನಾಡಿದ ಅವರು, ಮಳ ವೂರು ವೆಂಟೆಡ್ ಡ್ಯಾಮ್ ಗೆ 22 ಕೋಟಿ, ಸುಲ್ತಾನ ಬತ್ತೇರಿ ಯಲ್ಲಿ ತೂಗು ಸೇತುವೆಗೆ 12 ಕೋಟಿ ಅನು ದಾನಕ್ಕೆ ಒಪ್ಪಿಗೆ ನೀಡ ಲಾಗಿದೆ ಎಂದರು.
ಯುವಜನೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರದಿಂದ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ ಅವರು ದಕ್ಷಿಣ ಕನ್ನಡದಲ್ಲಿ ನಡೆಯುವ ಯುವಜನೋತ್ಸವ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿರಬೇಕೆಂದರು.
ಸಭೆಯಲ್ಲಿ ಡಾ ವಿ ಎಸ್ ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು ಟಿ ಖಾದರ್, ಅಂಗಾರ ಅವರು ಉಪಸ್ಥಿತರಿದ್ದರು.