Saturday, January 28, 2012
ಪೋಲೀಸರಿಗೆ ಸೂಕ್ತ ವಸತಿ ಕಲ್ಪಿಸಲು ಹೆಚ್ಚುವರಿ ಅನುದಾನ:ಮುಖ್ಯಮಂತ್ರಿಗಳು
ಮಂಗಳೂರು,ಜನವರಿ.28: ರಾಜ್ಯದ ಪೋಲೀಸರು ತಮ್ಮ ಜೀವದ ಹಂಗು ತೊರೆದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರತರಾಗಿದ್ದು, ಅವರುಗಳಿಗೆ ಸೂಕ್ತ ವಸತಿ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಮಾಜದಿಂದ ಅನೇಕರು ಪ್ರತೀ ನಿತ್ಯ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಬಜೆಟ್ ನಲ್ಲಿ ಪೋಲೀಸ್ ವಸತಿ ಗೃಹಗಳ ನಿರ್ಮಾಣಕ್ಕಾಗಿ ಹೆಚ್ಚು ಅನುದಾನವನ್ನು ಮೀಸಲಿಡುವುದಾಗಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಇವರು ಹೇಳಿದ್ದಾರೆ.ಅವರು ಇಂದು ಮಂಗ ಳೂರು ನಗರ ದಲ್ಲಿ ನೂತ ನವಾಗಿ ನಿರ್ಮಾ ಣವಾ ಗಿರುವ ಪೋ ಲೀಸ್ ಆಯು ಕ್ತರ ಕಚೇರಿ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ನಗ ರದ ಪೋ ಲೀಸ್ ಆಯು ಕ್ತರ ಈ ಕಚೇ ರಿಯಲ್ಲಿ ಎಲ್ಲಾ ಆಧು ನಿಕ ತಂತ್ರ ಜ್ಞಾನ ಗಳನ್ನು ಅಳ ವಡಿ ಸಿದ್ದು,ಇದು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಉಪ ಯೋಗ ವಾಗ ಲಿದೆ ಯೆಂದು ಅವರು ತಿಳಿಸಿ ದರು.ರಾಜ್ಯ ದಲ್ಲಿ ವಿಶೇ ಷವಾಗಿ ಕರಾ ವಳಿ ಪ್ರದೇ ಶದಲ್ಲಿ ಭಯೋ ತ್ಪಾದ ಕರು ನುಸು ಳದಂತೆ ಕಟ್ಟೆ ಚ್ಚರ ವಹಿ ಸಲಾ ಗಿದ್ದು, ಕರಾ ವಳಿ ಪೋ ಲೀಸ್ ಪಡೆ ಹಗಲು ರಾತ್ರಿ ಇದ ಕ್ಕಾಗಿ ಶ್ರಮಿ ಸುತ್ತಿ ದೆಯೆಂದ ಅವರು, ಈಗಿ ರುವ 5 ಠಾಣೆ ಗಳ ಜೊತೆಗೆ 4 ಹೆಚ್ಚು ವರಿ ಠಾಣೆ ಗಳ ಪ್ರಸ್ತಾ ವನೆಯ ಬೇಡಿಕೆ ಯನ್ನು ಕೇಂದ್ರ ಸರ್ಕಾ ರಕ್ಕೆ ಈಗಾ ಗಲೇ ಸಲ್ಲಿಸ ಲಾಗಿ ದೆಯೆಂದು ಅವರು ತಿಳಿಸಿದರು.ಕರಾ ವಳಿ ಪ್ರದೇಶ ಶೈ ಕ್ಷಣಿಕ ಸಂಸ್ಥೆ ಗಳನ್ನು ಹಾಗೂ ವಿವಿಧ ಧರ್ಮ ಗಳ ಯಾತ್ರಾ ಸ್ಥಳ ಗಳನ್ನು ಹೊಂ ದಿದ್ದು ದೇಶದ ನಾನಾ ಭಾಗ ಗಳಿಂದ ಮತ್ತು ವಿದೇ ಶಿಯರು ಸಹ ಆಗ ಮಿಸು ತ್ತಿರು ತ್ತಾರೆ ಇವ ರೆಲ್ಲರ ರಕ್ಷಣೆ ಯು ಕರಾ ವಳಿಯ ಪೋಲೀ ಸರಿಗೆ ಸವಾ ಲಾಗಿ ಪರಿಣ ಮಿಸಿ ದ್ದರೂ ಸಹ ಸಮ ರ್ಪಕ ವಾಗಿ ಕಾರ್ಯ ನಿರ್ವ ಹಿಸು ತ್ತಿದ್ದಾ ರೆಂದು ಶ್ಲಾಘಿ ಸಿದರು.ಸಮಾ ರಂಭ ದಲ್ಲಿ ರಕ್ಷಣಾ ಹಾಗೂ ಸಾರಿಗೆ ಸಚಿವ ಆರ್. ಅ ಶೋಕ್, ವಿಧಾನ ಸಭಾ ಉಪ ಸಭಾ ಧ್ಯಕ್ಷ ರಾದ ಎನ್.ಯೋ ಗಿಶ್ ಭಟ್, ಉನ್ನತ ಶಿಕ್ಷಣ ಸಚಿವ ಡಾ ವಿ. ಎಸ್. ಆಚಾ ರ್ಯ, ಜಿಲ್ಲಾ ಉಸ್ತು ವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್, ಮೀನು ಗಾರಿಕಾ ಹಾಗೂ ತಂತ್ರ ಜ್ಞಾನ ಸಚಿವ ಆನಂದ ವಿ. ಅಸ್ನೋ ಟಿಕರ್,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಬಿ. ರಮನಾಥ ರೈ, ರಾಜ್ಯ ಪೋ ಲಿಸ್ ಮಹಾ ನಿರ್ದೇ ಶಕ ರಾದ ಶಂಕರ್ ಬಿದರಿ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ರಿಮತಿ ಕೆ.ಟಿ.ಶೈಲಜ ಭಟ್,ಕರಾ ವಳಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಪೋಲಿಸ್ ಹೌಸಿಂಗ್ ಕಾರ್ಪೋರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಎನ್.ರೆಡ್ಡಿ,ಐಜಿಪಿ ಪ್ರತಾಪ್ ರೆಡ್ಡಿ,ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಮತ್ತು ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.