ಈ ಸಂದರ್ಭ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಪಿಲಿಕುಲ ನಿಸರ್ಗ ಧಾಮದಲ್ಲಿ ದತ್ತು ಪಡೆದಿರುವ ಹುಲಿ ಮತ್ತು ಚಿರತೆ ಮರಿಗಳ ನಿರ್ವಹಣೆಗಾಗಿ ನೀಡಿದ ಎರಡು ಲಕ್ಷ ರೂ.ಗಳ ಚೆಕ್ಕನ್ನು ಡಾ.ವಿ.ಎಸ್. ಆಚಾರ್ಯ ಅವರು ನಿಸರ್ಗಧಾಮದ ಕಾರ್ಯವಾಹಕ ನಿರ್ದೇಶಕ ಜೆ.ಆರ್.ಲೋಬೋಗೆ ಹಸ್ತಾಂತರಿಸಿದರು.
ಬಹುಮಾನ ವಿಜೇತರು:
ಸಮೂಹ ಚಿತ್ರಕಲೆಯಲ್ಲಿ ಮಂಡ್ಯದ ಎಂ.ಇ.ಸ್ಕೂಲ್ನ ಬಿ.ರಕ್ಷಿತ್ಕುಮಾರ್ ಪ್ರಥಮ, ಸಾಗರದ ರಾಘವೇಂದ್ರ ದ್ವಿತೀಯ ಹಾಗೂ ಮೂಡಬಿದ್ರೆಯ ಆದರ್ಶ್ ಜೈನ್ ತೃತೀಯ ಸ್ಥಾನ ಗಳಿಸಿದ್ದಾರೆ.
ಥರ್ಮೋ ಫೋಮ್ ನಲ್ಲಿ ಬೆಳಗಾಂನ ಆರಿಫ್ ಕೆ.ಮುಲ್ಲಾ ಪ್ರಥಮ, ಕನ್ಯಾನದ ನಿಶಾಂತ್ಕಮಾರ್ ದ್ವಿತೀಯ ಹಾಗೂ ಆಂಧ್ರಪ್ರದೇಶದ ನಿಶ್ಚಯ್ ತೃತೀಯ.
ಉಬ್ಬು ಶಿಲ್ಪದಲ್ಲಿ ಸುಳ್ಯದ ಸುದೀಪ್ ನಾರಾಯಣ್ ಪ್ರಥಮ, ಚಿಕ್ಕಬಳ್ಳಾಪುರದ ರಶ್ಮಿ ಎಸ್.,ಕೊಡಗಿನ ಉತ್ತಪ್ಪ ಎಂ.ಸಿ. ತೃತೀಯ.
ಕಾರ್ಟೂನ್ ರಚನೆಯಲ್ಲಿ ಹಾಸನದ ವಿ.ಕೆ.ಕಾರ್ತಿಕ್ ಪ್ರಥಮ, ಬೆಳಗಾವಿಯ ಅಕ್ಷಯ್ಎ.ಎಸ್. ದ್ವಿತೀಯ ಹಾಗೂ ಬಳ್ಳಾರಿಯ ವಿನಾಯಕ ತೃತೀಯ.
ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ಉಡುಪಿ ಕುಂದಾಪುರದ ಕಾರ್ತಿಕ್ ಆಚಾರ್ ಪ್ರಥಮ, ಚಿತ್ರದುರ್ಗದ ವಿಶ್ವಾಸ್ ದ್ವಿತೀಯ ಹಾಗೂ ಬಾಗಲಕೋಟೆಯ ನಾರಾಯಣತೃತೀಯ.
ಚಿತ್ರಕಲೆಕಿರಿಯ ವಿಭಾಗದಲ್ಲಿಅಂಕಿತಾ ಸಿ. ಪ್ರಥಮ, ಮೂಡಬಿದ್ರೆಯ ಪ್ರಥ್ವೀಸ್ ದ್ವಿತೀಯ, ಬೀದರ್ ನ ಅಜಯ ತೃತೀಯ.ಹಿರಿಯ ವಿಭಾಗದಲ್ಲಿ ಪುತ್ತೂರಿನ ಉಮೇಶ್ ಪ್ರಥಮ, ಮೈಸೂರಿನ ಗಣಶ್ರೀ ದ್ವಿತೀಯ ಹಾಗೂ ರೋಶನ್ ವಿ.ಅಣ್ವೇಕರ್ ತೃತೀಯ ಸ್ಥಾನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಬಾಲಭವನದ ಬೆಳ್ಳಿ ಹೆಜ್ಜೆಗಳ ಗುರುತಾದ `ಹೊಂಗನಸು' ಸ್ಮರಣ ಸಂಚಿಕೆ ಹಾಗೂ ಸೃಜನೋತ್ಸವದ ವಾರ್ತಾ ಪತ್ರ ಸಂದೇಶವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ರಾಜ್ಯದ ವಿವಿಧ ಬಾಲಭವನಗಳ ತಂಡದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸೈಂಟ್ ರೇಮಂಡ್ ಹೈಸ್ಕೂಲಿನ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಹಾಡಿದರು.ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ತಾ.ಪಂ. ಅಧ್ಯಕ್ಷೆ ಭವ್ಯಾಗಂಗಾಧರ್, ಜಿ.ಪಂ. ಸದಸ್ಯೆ ಯಶವಂತಿ ಆಳ್ವ, ಉಪ ಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮನಪಾ ಆಯುಕ್ತ ಡಾ. ಹರೀಶ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಳಾ, ಪಿಲಿಕುಲ ನಿಸರ್ಗಧಾಮದ ನಿರ್ದೇಶಕ ಜೆ.ಆರ್. ಲೋಬೋ ಮೊದಲಾದವರು ಉಪಸ್ಥಿತರಿದ್ದರು.