ಯುವಜನೋತ್ಸವಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ. ಉಳಿದಿರುವ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಅತ್ಯಂತ ಶಿಸ್ತುಬದ್ಧ ಹಾಗೂ ಅಷ್ಟೇ ವ್ಯವಸ್ಥಿತಿ ರೀತಿಯಲ್ಲಿ ಯುವಜನೋತ್ಸವ ಸಂಘಟನೆಮಾಡಬೇಕೆಂದು ಮುಖ್ಯಮಂತ್ರಿ ಆದೇಶಿಸಿದರು. ಮಂಗಳೂರು ನಗರ ಯುವಜನೋತ್ಸವಕ್ಕಾಗಿ ಸಿಂಗರಿಸಿಕೊಳ್ಳುವಂತೆ ಹಾಗೂ ಶುಚಿತ್ವದಿಂದ ಕೂಡಿರುವಂತೆ ಇರಬೇಕೆಂದು ತಿಳಿಸಿದರು.
ಯುವಜನೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಮಂಗಳಾ ಕ್ರೀಡಾಂಗಣ
ಯುವಜನೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಮಂಗಳಾ ಕ್ರೀಡಾಂಗಣ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಜೈರಾಜ್ ಅವರು ಯುವಜನೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಮಂಗಳಾ ಕ್ರೀಡಾಂಗಣವನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ವೇದಿಕೆಯ ವಿನ್ಯಾಸವನ್ನು ಲೋಕೋಪಯೋಗಿ ಇಲಾಖೆಯ ಸುಪರಿಂಡಿಂಡೆಂಟ್ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣ , ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲನಾಯ್ಕ್ , ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ ಜೊತೆಗಿದ್ದರು.