ಮಂಗಳೂರು ಜನವರಿ.20: ಕೃಷಿಕರು ಅಧಿಕ ಲಾಭ ತರುವ ಆಡು ಸಾಕಾಣಿಕೆಯಲ್ಲಿ ಸ್ವ ಇಚ್ಚೆಯಿಂದ ತೊಡಗಬೇಕೆಂದು ಕರೆ ನೀಡಿದ್ದರೆ.ಅವರು ಗುರುವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಂಗಳೂರು ಇವರ ವತಿಯಿಂದ ಆತ್ಮ 2011-12 ನೇ ಸಾಲಿನ ಯೋಜನೆಯಡಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ರವರ ಸಹಯೋಗದಲ್ಲಿ ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ರೈತ ತರಬೇತಿ ಮತ್ತು ಮಾಹಿತಿ ಕೇಂದ್ರ, ಪಶುಆಸ್ಪತ್ರೆ ಆವರಣ ಇಲ್ಲಿ ಅಯೋಜಿಸಿದ್ದ ಆಡು ಮತ್ತು ಮೊಲ ಸಾಕಣೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾ ರಂಭದ ಅದ್ಯ ಕ್ಷತೆ ವಹಿ ಸಿದ್ದ ಸಿಂಡಿ ಕೇಟ್ ಬ್ಯಾಂ ಕಿನ ಪ್ರಾದೇ ಶಿಕ ಕಚೇರಿ ಉಪ ಮಹಾ ಪ್ರಭಂ ಧಕ ರಾದ ಶೀ ಜಿ.ಎಸ್. ಶೆಣೈ ಅವರು ಮಾತ ನಾಡಿ ರೈತರು ಪಡೆದ ಸಾಲ ವನ್ನು ಸಕಾ ಲದಲ್ಲಿ ಮರು ಪಾವತಿ ಮಾಡುವ ಪ್ರವೃ ತ್ತಿಯನ್ನು ಬೆಳೆಸಿ ಕೊಳ್ಳು ವಂತೆ ಕರೆ ನೀಡಿ ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸದಸ್ಯ ಕಾರ್ಯದರ್ಶಿ ದ.ಕ. ಜಿಲ್ಲಾ ಆತ್ಮ ಯೋಜನೆಯ ಚಾಲನ ಸಮಿತಿ ಹಾಗೂ ಜಂಟಿ ಕೃಷಿ ನಿರ್ದೇಶಕರಾದ ಡಾ| ಪದ್ಮಯ ನಾಯ್ಕ ಅವರು ಮಾತನಾಡಿ ಕೃಷಿಕರು ಸಮಗ್ರ ಕೃಷಿನೀತಯಂತೆ ತೆಂಗು,ಅಡಿಕೆ, ಬಾಳೆ, ಹೈನುಗಾರಿಕೆ, ಕೋಳಿ ಸಾಕಣೆ,ಆಡು ಕುರಿ ಸಾಕಣೆ ಮುಂತಾದ ಉಪ ಕಸುಬುಗಳನ್ನು ಕೈಗೊಂಡಾಗ ಮಾತ್ರ ಅವರು ಕೃಷಿಯಲ್ಲಿ ಲಕಾಭಗಳಿಸಲು ಸಾಧ್ಯ ಎಂದು ತಿಳಿಸಿ ರೈತರು ಆಡು ಸಾಕಾಣಿಕೆಯನ್ನು ಒಮ್ಮೆಲೇ ಬೃಹತ್ ಬಂಡವಾಳ ತೊಡಗಿಸುವುದಕ್ಕಿಂತ ಹಂತಹಂತವಾಗಿ ತೊಡಗಿಸುವಂತೆ ಕಿವಿ ಮಾತು ಹೇಳಿದರು.
ಪಶು ಪಾಲನಾ ಇಲಾಖೆ, ಮಂಗಳೂರು ಡಾ|ಅಶೋಕ್ ಅವರು ಮಾತನಾಡಿ 500 ಹಣ್ಣು ಮತ್ತು 25 ಗಂಡು ಆಡುಗಳನ್ನು ಸಾಕುವ ಒಂದು ಘಟಕಕ್ಕೆ ರೂ.25ಲಕ್ಷ ಸಾಲದ ನೆರವು ಹಾಗೂ ರೂ.6.25ಲಕ್ಷ ಸಹಾಯಧನ ದೊರಕುತ್ತದೆ ಅದರಂತೆ 40ಹೆಣ್ಣು ಮತ್ತು 4 ಗಂಡು ಆಡುಗಳ ಘಟಕ ಪ್ರಾರಬೀಸಲು ರೂ.1ಲಕ್ಷ ಸಾಲ ಹಾಗೂ 25ಸಾವಿರ ರೂಗಳ ಸಹಾಯದನ ದೊರಕುತ್ತದೆ ಎಂದು ತಿಳಿಸಿದರು.ಪಶುಪಾಲನಾ ಇಲಾಖೆ ಮಂಗಳೂರು. ಇಲ್ಲಿಯ ಉಪನಿರ್ದೇಶಕರಾದ ಡಾ| ಹಲಗಪ್ಪ ಕೆ.ವಿ ಅವರು ಸಮಾರಂಭಕ್ಕೆ ಎಲ್ಲರನ್ನೂ ಸ್ವಾಗತಿಸಿದರು.ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕಿನ ಜಿಲ್ಲಾ ಅಗ್ರಣೀಯ ಮುಖ್ಯ ಪ್ರಭಂಧಕರಾದ ಹೇಮಂತ ಭಿಡೆ, ನಬಾರ್ಡ ನ ಸಹಾಯಕ ಮಹಾ ಪ್ರಭಂಧಕರಾದ ಪ್ರಸಾದ್ ರಾವ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕಿನಿಂದ 60ಕ್ಕೂ ಹೆಚ್ಚು ರೈತರು ಹಾಗೂ ಜಿಲ್ಲೆಯ ಇತರೆ ತಾಲ್ಲೂಕು ಮತ್ತು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಂದಲೂ ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.