ಮಂಗಳೂರು,ಜನವರಿ.21: ಸುರತ್ಕಲ್ ಹೋಬಳಿಯ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 12 ಗ್ರಾಮಗಳ 33 ಫಲಾನುಭವಿಗಳಿಗೆ ಒಟ್ಟು ರೂ.3.30ಲಕ್ಷ ಗಳನ್ನು ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿಯಲ್ಲಿ ಇಂದು ಕಾವೂರಿನಲ್ಲಿ ನಡೆದ ಸುರತ್ಕಲ್ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ವಿತರಿಸಿದರು.ಹಿಂದೆ ಜನ ಸರ್ಕಾ ರದ ಬಳಿಗೆ ತಮ್ಮ ಕೆಲಸ ಕಾರ್ಯ ಗಳಿ ಗಾಗಿ ಹೋಗ ಬೇಕಿತ್ತು .ಆದರೆ ಇಂದು ಸರ್ಕಾ ರವೇ ಜನರ ಬಳಿಗೆ ಬಂದು ಅವರ ಸಮಸ್ಯೆ ಗಳನ್ನು ಪರಿ ಹರಿ ಸುತ್ತಿದೆ. ಜನ ಸ್ಪಂದನ ಕಾರ್ಯ ಕ್ರಮಗಳಿಂದ ಗ್ರಾಮೀಣ ಜನರ ಕಷ್ಟಗಳು ತಕ್ಕಮಟ್ಟಿಗೆ ಪರಿಹಾರ ಕಾಣುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.ಸುರತ್ಕಲ್ ಹೋಬಳಿ ಪ್ರದೇಶದಲ್ಲಿ ಸರ್ಕಾರ 29000 ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ವಯ ಸೌಲಭ್ಯ ಪಡೆಯುತ್ತಿದ್ದಾರೆ, ಬಡತನ ರೇಖೆಗಿಂತ ಕೆಳಗಿರುವ 404 ಜನರಿಗೆ ಬಿಪಿಎಲ್ ಕಾರ್ಡ್ ಹಾಗೂ 37501 ಕುಟುಂಬಗಳಿಗೆ ಎ.ಪಿ.ಎಲ್ ಕಾರ್ಡುಗಳನ್ನು ವಿತರಿಸಲಾಗಿದೆ ಎಂದ ಸಚಿವರು ಬಿಪಿಎಲ್ ಕಾರ್ಡುಗಳಿಗಾಗಿ ಅರ್ಜಿ ನಮೂನೆಗಳನ್ನು ನೀಡಲಾಗುತ್ತಿದೆ ಎಂದರು.
ಇನ್ನು ಮುಂದೆ ಜನಸ್ಪಂದನ ಕಾರ್ಯಕ್ರಮಗಳಲ್ಲಿ ವಿವಿದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.ನಗರ ಪ್ರದೇಶದವರು ಮಹಾನಗರಪಾಲಿಕೆ ಖಾತೆ ಹೊಂದಿದ್ದಲ್ಲಿ, ಅಂತಹವರು ಅರ್.ಟಿ.ಸಿ. ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ನಡೆದ ಜನಸ್ಪಂದನ ಸಭೆಯಲ್ಲಿ ಅರ್.ಟಿ.ಸಿ., ಶೌಚಾಲಯ, ಚರಂಡಿ, ರಸ್ತೆ ಇವೇ ಮೊದಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು, ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ತಹಸೀಲ್ದಾರ್ ರವಿಚಂದ್ರ ನಾಯಕ್ ಪರಿಹಾರ ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತ, ದೀಪಕ್, ಮಧುಕಿರಣ್, ಸಂತೋಷ್ ಕುಮಾರ್, ಶರತ್ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಮುಂತಾದವರು ಹಾಜರಿದ್ದರು.