
ಮಂಗಳೂರು: ರಾಷ್ಟ್ರೀಯ ಯುವಜನೋತ್ಸವದಲ್ಲಿ ಇಡೀ ದೇಶದ ಎಲ್ಲಾ ಭಾಗಗಳ ಯುವಜನರು ಬಂದು ಭಾಗವಹಿಸಿ ಸಂತಸ ಪಟ್ಟಿದ್ದಾರೆ. ಇದು ಅತ್ಯಂತ ಚೆನ್ನಾಗಿ ಅದ ಯುವಜನೋತ್ಸವ .ಇದಕ್ಕಾಗಿ ಮಂಗಳೂರು ಜನಕ್ಕೆ ಅಭಿನಂದಿಸುತ್ತೇನೆ ಎಂದು ಡಿ.ಎಚ್.ಶಂಕರ ಮೂರ್ತಿ ಹೇಳಿದರು.ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾವು ಭಾರತೀಯರು ಎಂಬಂತ ಏಕತೆ ಮೂಡಿರುವಂತಹುದನ್ನು ಈ ಯುವಜನೋತ್ಸವ ಸಾಬೀತು ಪಡಿಸಿದೆ ಎಂದರು.