ಮಂಗಳೂರು,ಜನವರಿ.09:ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಜ.12ರಿಂದ 16ರವರೆಗೆ ಮಂಗಳೂರಿನಲ್ಲಿ ನಡೆಯಲಿರುವ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರದ ಸಿದ್ಧತೆಗಳಾಗುತ್ತಿವೆ. ಈಗಾಗಲೇ ಶೇ.75ರಷ್ಟು ಕಾರ್ಯಗಳು ಪೂರ್ಣಗೊಂಡಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.ಭಾನು ವಾರ ಪತ್ರಿಕಾ ಗೋಷ್ಠಿ ಯಲ್ಲಿ ಮಾತ ನಾಡಿದ ಅವರು ಯುವ ಜನೋತ್ಸ ವದ ಅಂ ತಿಮ ಹಂ ತದ ಸಿದ್ಧತೆ ಗಳು ನಡೆ ಯುತ್ತಿವೆ. ಜ.12ರ ಸಂಜೆ 4.30ಕ್ಕೆ ಮುಖ್ಯ ಮಂತ್ರಿ ಡಿ.ವಿ. ಸದಾ ನಂದ ಗೌಡ ಯುವ ಜನೋ ತ್ಸವ ಉದ್ಘಾ ಟಿಸು ವರು. ಕೇಂದ್ರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅಜಯ್ ಮರನ್, ಕಾರ್ಪೋ ರೇಟ್ ಸಚಿವ ಎಂ.ವೀ ರಪ್ಪ ಮೋ ಯಿಲಿ, ಡಾ.ವೀ ರೇಂದ್ರ ಹೆಗ್ಗಡೆ ಮುಂ ತಾದ ಗಣ್ಯರು ಮುಖ್ಯ ಅತಿಥಿ ಗಳಾಗಿ ಪಾಲ್ಗೊ ಳ್ಳುವರು. ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಬಾರದ್ವಾಜ್ ಮತ್ತಿತರ ಗಣ್ಯರು ಪಾಲ್ಗೊಳ್ಳುವರು ಎಂದರು.ಉದ್ಘಾ ಟನೆ ಸಂದರ್ಭ ವಿಮಾನ ಮೂಲದ ಪುಷ್ಪ ವೃಷ್ಟಿ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ವಿಶೇಷ ಮೆರುಗು ನೀಡ ಲಾಗು ವುದು. ಆರಂ ಭದಲ್ಲಿ ಕೇಂದ್ರ ಮೈದಾನ ದಿಂದ ಮಂ ಗಳಾ ಕ್ರೀಡಾಂ ಗಣದ ವರೆಗೆ ಆಕ ರ್ಷಕ ಮೆರ ವಣಿಗೆ ಸಾಗಿ ಬರ ಲಿದೆ. ಅಲ್ಲದೆ ಯುವ ಜನೋ ತ್ಸವದ ಬ್ಯಾನರ್ ಅಳವ ಡಿಸಿಕೊಂ ಡಿರುವ 2ರಿಂದ 5 ವಿಮಾನಗಳು ಯುವಜನೋತ್ಸವದ ಪ್ರಚಾರ ಹಾರಾಟ ನೆಡೆಸಲಿವೆ ಎಂದು ಸಚಿವರು ಹೇಳಿದರು.ಸಾರ್ಕ್ ದೇಶ ಗಳ 28 ಮಂದಿ ವಿಶೇಷ ಪ್ರತಿ ನಿಧಿ ಗಳು ಸೇರಿ ದಂತೆ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾ ಡಳಿತ ಪ್ರದೇಶ ಗಳಿಂದ 5 ಸಾವಿರ ಪ್ರತಿ ನಿಧಿಗಳು ಪಾಲ್ಗೊ ಳ್ಳಲಿದ್ದು ಈಗಾ ಗಲೇ ವಿವಿಧ ರಾಜ್ಯ ಗಳ 2500 ಮಂದಿ ಹೆಸರು ನೋಂದಾ ಯಿಸಿ ಕೊಂಡಿ ದ್ದಾರೆ. ಇದರಲ್ಲಿ 1816 ಜನ ಪ್ರತಿ ನಿಧಿ ಗಳು ಸೇರಿ ದ್ದಾರೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು 1145 ಮಂದಿ ಹೆಸರು ನೋಂದಾಯಿಸಿದ್ದು, ಇದರಲ್ಲಿ 753 ಪುರುಷರು ಮತ್ತು 392 ಮಹಿಳೆಯರು ಸೇರಿದ್ದಾರೆ. ಸ್ಪರ್ಧಾ ರಹಿತ ವಿಭಾಗದಲ್ಲಿ 216 ಪುರುಷರು, 70 ಮಹಿಳೆಯರು, 228 ಸ್ವಯಂ ಸೇವಕರು ಇದುವರೆಗೆ ಹೆಸರು ನೋಂದಾಯಿಸಿದ್ದಾರೆ. ಬರುವ ಅತಿಥಿಗಳಿಗೆ ಆತಿಥ್ಯಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ. 22 ಶಿಕ್ಷಣ ಸಂಸ್ಥೆಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಎಂದರು. ತಾಲೂ ಕಿಗೆ 5 ಬಸ್ ಗಳಂ ತೆ ಪ್ರತಿ ತಾಲೂಕಿ ನಿಂದ ಜನ ರನ್ನು ಕರೆ ತರುವ ಕೆಲಸ ಮಾಡ ಲಾಗು ವುದು.ಎಲ್ಲಾ ಸಾಂ ಸ್ಕೃತಿಕ ಕಾರ್ಯ ಕ್ರಮ ಗಳು ಜ.13ರಿಂದ ಆರಂಭ ವಾಗ ಲಿವೆ. ಭರತ ನಾಟ್ಯ, ಒಡಿಸ್ಸಿ ಕಥಕ್ ನಂತಹ ಸಾಂಪ್ರ ದಾಯಿಕ ನೃತ್ಯ ಸ್ಪರ್ಧೆ ಗಳು ಕು ದ್ರೋಳಿ ಗೋಕರ್ಣ ನಾಥೇ ಶ್ವರ ದೇವಾ ಳದ ಸಭಾ ಭವನ ದಲ್ಲಿ ನಡೆ ಯಲಿವೆ. ಏಕ ಪಾತ್ರಾ ಭಿನಯ ಸ್ಪರ್ಧೆ ಪುರ ಭವನ ದಲ್ಲಿ, ಎಸ್ ಡಿ ಎಂ ಕಾಲೇ ಜಿನಲ್ಲಿ ಸಾಂಪ್ರ ದಾಯಿಕ ಸಂಗೀತ ವಾದ್ಯ ಸ್ಪರ್ಧೆಗಳು, ಜಾನಪದ ನೃತ್ಯಗಳ ಸ್ಪರ್ಧೆ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿವೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಸಭಾ ಉಪಾಧ್ಯಕ್ಷ ಎನ್ ಯೋಗೀಶ್ ಭಟ್, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ಉಪಸ್ಥಿತರಿದ್ದರು.