ಉಪ್ಪಿನಕಾಯಿಯು ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ಭಾರತವೇ ಉಪ್ಪಿನಕಾಯಿಗಳಿಗೆ ತವರು.. ವಿವಿಧ ಬಗೆಯ ರುಚಿಕರ ಉಪ್ಪಿನಕಾಯಿಗಳು ಇಲ್ಲಿ ಲಭ್ಯ. ಉಪ್ಪಿನಕಾಯಿ ಊಟದೊಂದಿಗಿದ್ದರೆ ರುಚಿಯು ಬಣ್ಣಿಸಲಸಾಧ್ಯ.
ವಿವಿಧ ಉಪ್ಪಿನಕಾಯಿಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವದ ಆಹಾರ ಮೇಳದಲ್ಲಿ ನಾವು ನೋಡಬಹುದು.
ಉತ್ತರ ಪದೇಶ ಪಂಜಾಬ್ ಹಾಗೂ ಸ್ಥಳೀಯ ಉಪ್ಪಿನಕಾಯಿ ದೊರೆಯುತ್ತದೆ. ನೆಲ್ಲಿ , ಮಾವಿನಕಾಯಿ , ವಿನೆಗರ್ , ಸುವರ್ಣ ಗೆಡ್ಢೆ , ಬೆಳ್ಳು ಹಾಗೂ ಹಲವು ಬಗೆಯ ಮಿಕ್ಸಿಡ್ ಉಪ್ಪಿನಕಾಯಿಗಳನ್ನು ನೋಡಬಹುದು.
ನಮ್ಮೂರಿನಲ್ಲಿರುವಂತೆ ಉತ್ತರಪ್ರದೇಶ ಪಂಜಾಬ್ ಹಾಗೂ ಇನ್ನಿತರ ರಾಜ್ಯದಲ್ಲಿ ಮಾವಿನಉಪ್ಪಿನಕಾಯಿ ಬಹಳ ಪ್ರಸಿದ್ಧ. ಊಟದ ಸಮಯದಲ್ಲಿ ಉಪ್ಪಿನಕಾಯಿಯನ್ನುಬಳಸುತ್ತಾರೆ. ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ದೊರೆಯುವ ಬೆಲೆಯಲ್ಲಿ ದೊರೆಯುತ್ತದೆ. ಉತ್ತರ ಭಾರತದಲ್ಲೂ ದೊರೆಯುತ್ತದೆ. ಉತ್ತರ ಭಾರತದ ಕಡೆ ಸಾಸಿವೆ ಎಣ್ಣೆ ಹೆಚ್ಚು ಉಪ್ಪಿನ ಕಾಯಿಯಲ್ಲಿ ಬಳಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಎಣ್ಣೆ ಬಳಸುವುದು ಬಹಳ ವಿರಳ.
ಉತ್ತರ ಪ್ರದೇಶದ ಉತ್ತರ ಗಡದಿಂದ ಬಂದಂತಹ ವ್ಯಾಪರಿಗ ಗುರುಕಿರಣ್ ಪ್ರಕಾರ ಕರಾವಳಿಯ ಜನ ತುಂಬಾ ಶಾಂತವಂತರು ನನಗೆ ವ್ಯಾಪಾರದಲ್ಲಿ ಸಂತೃಪ್ತಿ ಆಗಿದೆ. ಉಳಿದ ದಿನಗಳಲ್ಲಿ ಇನ್ನೂ ಒಳ್ಳೆಯ ವ್ಯಾಪಾರ ಆಗುವ ಲಕ್ಷಣವಿದೆ ಎಂದರು.
ಇನ್ನೊಬ್ಬ ವ್ಯಾಪಾರಿ ಲಕ್ಷಣ್ ಚಾ ಬಹುರಿಯವರು ವ್ಯಾಪಾರ ನಿರೀಕ್ಷೇಗಿಂತ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು.
ಆದಿತ್ಯ ಕೆ