ಮಂಗಳೂರು, : ವಿವಿಧ ರಾಜ್ಯಗಳ ಸಾಂಸ್ಕೃತಿಕ ಪ್ರಕಾರಗಳು ಸೇರಿ ,ಭಾರತವು ಶ್ರೀಮಂತ ಸಂಸ್ಕೃತಿಯೆನಿಸಿದೆ. ಯುವಕರು ತಮ್ಮ ಉತ್ಸಾಹಗಳನ್ನು ಕೇವಲ ಮನೋರಂಜನೆಗೆ ಮಾತ್ರ ಮೀಸಲಿರಿಸದೆ ರಾಷ್ಟ್ರದ ಅಭಿವೃದ್ದಾತ್ಮಕ ಕಾರ್ಯಗಳಲ್ಲಿ ಕೈ ಜೋಡಿಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಗೀತಾನಾಯಕ್ ನುಡಿದರು.
ಅವರು ಶುಕ್ರವಾರ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ಯುವಜನೋತ್ಸದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಯುವಜನತೆಯು ಬಹಳಷ್ಟು ಪ್ರತಿಭಾವಂತರಾಗಿದ್ದು ,ಸ್ವಾಮಿ ವಿವೇಕಾನಂದರು ಹಾಕಿ ಕೊಟ್ಟಿರುವ ಹಾದಿಯಲ್ಲಿ ನಡೆದು ಬದುಕನ್ನು ಹಸನುಗೊಳಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಬಿ ಆರ್.ಬಿ ಕಲಾ ಮತ್ತು ಕ್ರೀಡಾ ಸಂಘ ಅಶೋಕ್ ನಗರ ಧರ್ಮಸ್ಥಳದ ನೃತ್ಯ ಪ್ರದರ್ಶನ, ವಿವೇಕಾನಂದ ಕಲಾಕೇಂದ್ರ ತ್ಯಾಗರಾಜ ನಗರ ಬೆಂಗಳೂರು ಇವರು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಸಂತ ಅಲೋಶೀಷಿಯಸ್ ಹಾಗೂ ರೋಶನಿ ನಿಲಯದ ವಿದ್ಯಾರ್ಥಿಗಳ ನೃತ್ಯ, ಆಂಧ್ರಪ್ರದೇಶ ತಂಡದ ಮಾರ್ಷಲ್ ನೃತ್ಯ ಪ್ರಕಾರಗಳು ವೇದಿಕೆಯಲ್ಲಿ ನಡೆದವು ನಡೆಸಿಕೊಟ್ಟರು.
- ನವೀನ್