Saturday, January 14, 2012

ಗಮನ ಸೆಳೆದ ತಮಿಳು ನಾಡಿನ ನೃತ್ಯಗಳು

ಏನಿದು ಒಯಿಲಾಟಮ್ ಮಯಿಲಾಟಮ್ ಎಂದು ಚಿಂತಿಸುತ್ತಿದ್ದೀರಾ? ಇವು ನಮ್ಮ ನೆರೆಯ ರಾಜ್ಯ ತಮಿಳು ನಾಡಿನ ಜನಪದೀಯ ನೃತ್ಯಗಳು. 6ರಿಂದ 7 ಹೆಂಗಸರಿರುವ ಈ ನೃತ್ಯ ಗುಂಪಿನಲ್ಲಿ ವಾದ್ಯ ಬಾರಿಸಲು ಇಬ್ಬರು ಗಂಡಸರಿದ್ದರು. ಹೆಂಗಸರು ಸೀರೆ ಉಟ್ಟು ಕೈಯಲ್ಲಿ ಕರವಸ್ರ್ತ ಹಿಡಿದುಕೊಂಡು ಕುಣಿದರೆ ಗಂಡಸರು ಡೋಲು ಬಾರಿಸಿಕೊಂಡು ನಲಿದರು.

17ನೇ ರಾಷ್ರೀಯ ಯುವಜನೋತ್ಸವದ ಸಂದರ್ಭದಲ್ಲಿ ಲೂರ್ಡ್ಸ್ ಹೈ ಸ್ಕೂಲ್ನಲ್ಲಿ ನಡೆದ ಸಾಂಸ್ಕ್ರತೀಯ ಕಾರ್ಯಕ್ರಮದಲ್ಲಿ ತಮಿಳು ನಡಿನ ನವೀನ್ ಕುಮಾರ್ ತಂಡವು ಈ ನೃತ್ಯವನ್ನು ಮಾಡಿದರು.

ಒಯಿಲಾಟಮ್ ಎಂಬ ಜನಪದ ನೃತ್ಯವು ಜನಿಸಿದ್ದು ತೆನೆ ಉಳುವ ಸಂದರ್ಭದಲ್ಲಿ. ಇದರಲ್ಲಿ ಗದ್ದೆ ಉಲುವ ಸಂದರ್ಭದಿಂದ ಹಿಡಿದು ತೆನೆ ತೆಗೆಯುವವರೆಗಿನ ಚಿತ್ರಣ ನೀಡಲಾಗುತ್ತದೆ. ನಂತರ ಮಯಿಲಾಟಮ್ ಎಂಬ ನೃತ್ಯವು ಕಾವ್ವುಡಿ ಎಂಬ ನೃತ್ಯದ ಒಂದು ವಿಧವಾಗಿದೆ. ಈ ಕಾವ್ವುಡಿ ನೃತ್ಯವು 'ಮುರುಘನ್' ಎಂದರೆ ಸುಬ್ರ್ಮಣ್ಯ ದೇವನಿಗೆ ಸಂಭಂದಿಸಿದ್ದು. ಇದರಲ್ಲಿ ಹೆಂಗಸರು ನವಿಲು ಗರಿಗಳನ್ನು ಧರಿಸಿ ಕುಣಿಯುತ್ತಾರೆ. ಅಲ್ಲದೆ ಈ ನೃತ್ಯವು ತುಂಬಾ ಪಾರಂಪರೀಯವಾದುದು. ತಮಿಳರು ಡಿಸೆಂಬರ್ ತಿಂಗಳಲ್ಲಿ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಅದ್ದೂರಿಯಾಗಿ ಈ ನೃತ್ಯವನ್ನು ಮಾಡುತ್ತಾರೆ.ಸೂಮಾರು 10 ಜನರಿದ್ದ ಈ ನೃತ್ಯ ಗುಂಪಿನ ನಾಯಕನಾದ ನವೀನ್ ಕುಮಾರ್ ಮಂಗಳೂರಿನ ಜನರು ತುಂಬಾ ಆತ್ಮೀಯರು ಎಂದಿದ್ದಾರೆ.

-ನೇಹಾ.ಪಿ.ಎನ್