Tuesday, April 10, 2012

ಸುಳ್ಯಕ್ಕೆ ಟಯರ್ ಫ್ಯಾಕ್ಟರಿ:ಉನ್ನತ ಅಧಿಕಾರಿಗಳ ಸಭೆ

ಮಂಗಳೂರು,ಏಪ್ರಿಲ್.10:ರಾಜ್ಯ ಬಜೆಟ್ ನಲ್ಲಿ ಘೋಷಿಸಿದಂತೆ ರೈತರ ಹಿತವನ್ನು ಗಮನದಲ್ಲಿರಿಸಿ 300 ರಿಂದ 400 ಕೋಟಿ ರೂ. ವೆಚ್ಚ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಂಡೆಕೋಲಿನಲ್ಲಿ ಟಯರ್ ಫ್ಯಾಕ್ಟರಿ ಆರಂಭಿಸುವ ನಿಟ್ಟಿನಲ್ಲಿ ಇಂದೇ ತಹಸೀಲ್ದಾರ್ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯದರ್ಶಿಗಳಾದ ರಾಜ್ ಕುಮಾರ್ ಕತ್ರಿ ಅವರು ತೆರಳಿ ಸ್ಥಳಪರಿಶೀಲನೆ ನಡೆಸುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದಗೌಡ ಸೂಚಿಸಿದರು.
ಈ ಸಂ ಬಂಧ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂ ಕಿನ ಮಂಡೆ ಕೋಲಿನ ಗ್ರಾಮ ಪಂಚಾ ಯಿತಿ ಕಟ್ಟಡ ದಲ್ಲಿ ನಡೆ ಸಿದ ಉನ್ನತ ಮಟ್ಟದ ಅಧಿ ಕಾರಿ ಗಳ ಸಭೆ ಯಲ್ಲಿ ಟಯರ್ ಉತ್ಪಾ ದನಾ ಘಟಕ ಆರಂ ಭಿಸಲು ಅಗತ್ಯ ವಿರುವ ಕ್ರಮ ಗಳನ್ನು ಕೈ ಗೊಳ್ಳಲು ಎಲ್ಲ ಅಧಿ ಕಾರಿ ಗಳಿಗೆ ಸೂಚಿಸಿ ದರ ಲ್ಲದೆ, 15 ಎಕರೆ ಯಷ್ಟು ಕಂದಾಯ ಇಲಾ ಖೆಯ ಜಮೀನು ಮತ್ತು 45 ಎಕರೆಯಷ್ಟು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಭೂಮಿ ಅಜ್ಜಾವರದಲ್ಲಿ ಲಭ್ಯವಿದ್ದು ಸ್ಥಳಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದರಿಂದ ಇಲ್ಲಿ ಶೇಕಡ 80ರಷ್ಟು ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆಯಲ್ಲದೆ, ದಕ್ಷಿಣ ಕನ್ನಡದಲ್ಲೇ 8000ದಿಂದ 12,000 ಟನ್ ರಬ್ಬರ್ ಲಭ್ಯವಿದ್ದು,ಸುಳ್ಯ, ಪುತ್ತೂರು, ಕೊಡಗು, ಚಿಕ್ಕಮಗಳೂರು ಹಾಗೂ ನೆರೆಯ ಕಾಸರಗೋಡಿನ ರಬ್ಬರ್ ಬೆಳೆಗಾರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದರು. ಜಿಲ್ಲಾಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಂಡು ಇತರರಿಗೆ ಮಾದರಿಯಾಗುವಂತೆ ಕಾರ್ಖಾನೆಯ ಪೇಪರ್ ವರ್ಕ್ ಗಳು ನಡೆಯಬೇಕೆಂದರು. ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಈ ಸಂಬಂಧ ಎಲ್ಲ ಪೂರಕ ನೆರವುಗಳನ್ನು ಸರ್ಕಾರ ನೀಡಲಿದೆ ಎಂದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಈ ಘಟಕ ಸ್ಥಾಪನೆ ಸಂಬಂಧ ಉಳಿದ ಕೆಲಸ ನಿರ್ವಹಿಸಲಿರುವರು ಎಂದರು. ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮತ್ತೆ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗುವುದು ಎಂದ ಮುಖ್ಯಮಂತ್ರಿಗಳು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೇದಾಂತ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.