ಮಂಗಳೂರು,ಏಪ್ರಿಲ್.23:ಜನಪರ ಆಡಳಿತಕ್ಕೆ ಶಿವಾಜಿ ಆಡಳಿತ ವ್ಯವಸ್ಥೆ ಮಾದರಿಯಾಗಿದ್ದು, ಛತ್ರಪತಿ ಶಿವಾಜಿ ಆಡಳಿತಾವಧಿಯ ಅಷ್ಟ ಪ್ರಧಾನ ವ್ಯವಸ್ಥೆಗಳು ಇಂದಿಗೂ ಪ್ರಸ್ತುತ ಎಂದು ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.
ಇಂದು ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾ ಟಕ ಕ್ಷತ್ರಿಯ ಮರಾಠ ಪರಿಷತ್ ಇವರ ಸಂಯು ಕ್ತಾಶ್ರ ಯದಲ್ಲಿ ಛತ್ರ ಪತಿ ಶಿವಾಜಿ ಮಹಾ ರಾಜರ 385ನೇ ಜಯಂ ತೋತ್ಸವ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.
ಶಿವಾಜಿಯ ಆಡಳಿತಾವಧಿಯಲ್ಲಿ ಕಾರ್ಯಾಂಗ ಮತ್ತು ರಕ್ಷಣಾ ವ್ಯವಸ್ಥೆಗಳು ಹಾಗೂ ಆರ್ಥಿಕ ವ್ಯವಸ್ಥೆಗಳು ಸಬಲ ಹಾಗೂ ಸದೃಢವಾಗಿದ್ದು ಇಂದಿಗೂ ನಮಗೆ ಮಾದರಿಯಾಗಿದೆ. ಆಧುನಿಕ ವ್ಯವಸ್ಥೆಯ ಗೆರಿಲ್ಲಾ ವಾರ್ ಗಳಿಗೂ ಶಿವಾಜಿಯೇ ಸ್ಫೂರ್ತಿ. ದೇಶದ ಆಂತರಿಕ ಭದ್ರತೆ, ಗುಪ್ತಚರ ವ್ಯವಸ್ಥೆಗಳ ಜೊತೆಗೆ ನಾಗರೀಕರ ಜವಾಬ್ದಾರಿಗಳ ಬಗ್ಗೆ, ಸಾಮರಸ್ಯದ ಬದುಕಿಗೆ ಇವರ ಆಡಳಿತಾವಧಿ ಉತ್ತಮ ಮಾದರಿಯನ್ನು ನೀಡಿದೆ ಎಂದು ಅವರು ಸ್ಮರಿಸಿದರು.
ಇಂತಹ ಮಹಾನ್ ದೇಶ ಭಕ್ತನ 385 ನೇ ಜನ್ಮ ದಿನಾಚ ರಣೆ ಯನ್ನು ಆಚ ರಿಸಲು ರಾಜ್ಯ ಸರ್ಕಾರ ಪ್ರಸಕ್ತ ಸಾಲಿ ನಿಂದ ಅಧಿ ಕೃತ ಸೂಚನೆ ಯನ್ನು ನೀಡಿದ್ದು, ಇಂತಹ ಆಚ ರಣೆಗ ಳಿಂದ ಇತಿ ಹಾಸ ಹಾಗೂ ಇತಿ ಹಾಸ ಕಾರರ ಸ್ಮರಣೆ ಸಾಧ್ಯ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾನ್ಯ ಜನರು ಮಹಾನ್ ವ್ಯಕ್ತಿಗಳಾಗಲು ಸಾಧ್ಯ ಎಂಬುದಕ್ಕೆ ಶಿವಾಜಿ ಮಹಾರಾಜನೇ ಸಾಕ್ಷಿ; ನಮ್ಮ ದೇಶಕ್ಕಿಂದು ಸಾವಿರ ಸಾವಿರ ಶಿವಾಜಿಗಳ ಅಗತ್ಯವಿದೆ. ಅಂದಿನ ಆಡಳಿತದ ಮಾದರಿಗಳು ಇಂದಿಗೂ ಉತ್ತಮ ಆಡಳಿತಕ್ಕೆ ಸ್ಫೂರ್ತಿಯಾಗಲಿದೆ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಪಾಲಿಕೆ ಮಹಾಪೌರರಾದ ಶ್ರೀಮತಿ ಗುಲ್ಜಾರ್ ಭಾನು ಮಾತನಾಡಿದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಛತ್ರ ಪತಿ ಶಿವಾಜಿ ಕುರಿತು ಮುಂಡೋಡು ಧರ್ಮಪಾಲ ರಾವ್ ಜಾಧವ್ ಮಾತ ನಾಡಿದರು. ಆರ್ಯ ಯಾನೆ ಮರಾಠ ಸಮಾಜ ಸಂಘ ಅಧ್ಯಕ್ಷ ರಾದ ದೇವೋಜಿ ರಾವ್ ಜಾಧವ್, ಕ.ಕ್ಷ. ಮ.ಪ. ಬೆಂಗ ಳೂರಿನ ಜಂಟಿ ಕಾರ್ಯ ದರ್ಶಿ ಸುರೇಶ್ ರಾವ್ ಕೆ ಲಾಡ್, ಜಿಲ್ಲಾಧ್ಯಕ್ಷ ಎ ವಿ ಸುರೇಶ್ ರಾವ್ ಕರ್ ಮೋರೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ ನಾಯಕ್ ಅವರು ಸ್ವಾಗತಿಸಿದರು. ಬಳಿಕ 'ಛತ್ರಪತಿ ಶಿವಾಜಿ ನಾಟಕ' ವನ್ನು ಆಯೋಜಿಸಲಾಗಿತ್ತು.