ಮಂಗಳೂರು,ಏಪ್ರಿಲ್.03:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಪರಿಶಿಷ್ಟ ವರ್ಗಗಳ ಕಾಲೊನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು 192 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜ ಭಟ್ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಬಂಟ್ವಾಳದ ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿ ಬೀಜತಡಕದ ರಸ್ತೆ, ವಿಟ್ಲ ಗ್ರಾ.ಪಂ ವ್ಯಾಪ್ತಿಯ ಅಲಂಗಾಯ ಕೊರಗ ಕಾಲೊನಿ ರಸ್ತೆಗೆ 10ಲಕ್ಷ ರೂ., ಮಂಚಿ ಗ್ರಾಮದ ನಿರ್ಬಯಲು ಪ.ಪಂ. ಕಾಲನಿ ರಸ್ತೆಗೆ, ವೀರಕಂಬ ಗ್ರಾಮ ಪ.ಪಂ. ಕಾಲನಿ ರಸ್ತೆ (ಮಜಿಶಾಲಾ), ಶಂಭೂರು ಸಣ್ಣ ಕುಕ್ಕು ಕಂದಯ ಮೂಲೆ ಪ.ಪಂ. ಕಾಲನಿರಸ್ತೆಗೆ ಹಾಗೂ ಬಾಳೆಪುಣಿ ಪ.ಪಂ. ಕಾಲನಿ ರಸ್ತೆಗೆ ತಲಾ ಆರು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಮಂಗಳೂರು ತಾಲೂಕಿನ ಬಡಗಎಡಪದವು-ಕರೆಂಕಿ ಕಾಲೊನೆ ಕುಡಿಯುವ ನೀರು ಪೂರೈಕೆಗೆ, ಕೊಂಪದವರು ಬೊಟ್ಲಾಯಿ-ರಸ್ತೆ, ಚರಂಡಿ, ಮುತ್ತೂರು ಕುಡಿಯುವ ನೀರು ಪೂರೈಕೆ, ಮೊಗರು ಪಾಕಬೆಟ್ಟು ರಸ್ತೆ, ಚರಂಡಿ ಅಭಿವೃದ್ಧಿಗೆ ತಲಾ ಆರು ಲಕ್ಷ ರೂ., ಕಲ್ಲಮುಂಡ್ಕೂರು ಗ್ರಾಮ ಕಳಸಬೈಲು ಪ.ಪಂ. ಕಾಲೊನಿ ಸಮುದಾಯಭವನಕ್ಕೆ ಹತ್ತು ಲಕ್ಷ ರೂ., ಕವತ್ತಾರು ಪ.ಪಂ. ಕಾಲೊನಿ ಕುಡಿಯುವ ನೀರು, ಎಡಪದವರು ಗ್ರಾಮ ಕುದರ್ಲು ಪ.ಪಂ. ಕಾಲೊನಿ ಕುಡಿಯುವ ನೀರು, ಇರುವೈಲು ಗ್ರಾಮ ಪೂರಿವೇಲು ಪ.ಪಂ. ಕಾಲೊನಿ ಕುಡಿಯುವ ನೀರಿಗೆ, ಕವತ್ತಾರು ಗ್ರಮ ಪ.ಪಂ. ಕಾಲೊನಿ ರಸ್ತೆ,ಚರಂಡಿಗೆ, ಕೋಟೆಕಾರು ನಡಾರ್ ಪ.ಪಂ. ಕಾಲೊನಿ ರಸ್ತೆ, ಚರಂಡಿಗೆ ತಲಾ ಆರು ಲಕ್ಷ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
ಪುತ್ತೂರಿನ ಮುಂಡಾರು ಗ್ರಾಮದ ಉದಯಗಿರಿ ಅಜಲಾಡಿ ರಸ್ತೆ/ಚರಂಡಿ ಹತ್ತು ಲಕ್ಷ ರೂ., ಬಲ್ನಾಡು ಅಜ್ಜಿಕಲಾ ರಸ್ತೆ/ಚರಂಡಿಗೆ ಆರು ಲಕ್ಷ ರೂ., ಕುರಿಯ ಗ್ರಾಮ ಅಮ್ಮುಂಜೆ ಪ.ಪಂ. ಕಾಲೊನಿ ರಸ್ತೆ/ಚರಂಡಿಗೆ, ಪುತ್ತೂರು ನಗರ ಸಮುದಾಯ ಭವನಕ್ಕೆ ತಲಾ ಹತ್ತು ಲಕ್ಷ ರೂ., ಬೆಳ್ತಂಗಡಿಯ ಕಲ್ಲಮಂಜ ಪ.ಪಂ. ಕಾಲೊನಿ ರಸ್ತೆ/ಚರಂಡಿಗೆ ಆರು ಲಕ್ಷ ರೂ., ಸುಳ್ಯದ ಕೋಡಿಯಾಲ ಗ್ರಾಮ ಬಚ್ಚೋಡಿ ಹರವರ ಗುತ್ತಿ ಮಜಲು ಗಾಣದ ಮೂಲೆ ರಸ್ತೆ, ಬೆದ್ರಾಡಿ-ಪುತ್ಯ, ಸಂಪ-ಮಂಚಿಕಟ್ಟೆ ರಸ್ತೆ, ಅಜ್ಜಾವರ ಪ.ಪಂ. ಕಾಲೊನಿ ರಸ್ತೆ, ಜಾಲ್ಸೂರು ಪ.ಪಂ. ಕಾಲೊನಿ ರಸ್ತೆಗೆ ತಲಾ ಆರು ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೂ.45 ಲಕ್ಷ ವಿಶೇಷ ಅನುದಾನ:ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮಪಂಚಾಯತ್ನ ಶ್ರೀ ಶಿಶಿಲೇಶ್ವರ ದೇವಸ್ಥಾನದ ರಸ್ತೆಗೆ ಅಡ್ಡವಾಗಿ ಕಪಿಲಾ ನದಿ ಹರಿಯುತ್ತಿದೆ. ಇದರ ಪಕ್ಕದಲ್ಲಿ 2 ಬೃಹತ್ ತೋಡುಗಳಿಂದ ನೀರು ಕಪಿಲ ನದಿಗೆ ಸೇರುತ್ತಿದ್ದು, ಈ ಜಾಗದಲ್ಲಿ ಒಂದು ಚಿಕ್ಕ ಸಂಪರ್ಕ ಸೇತುವೆ ಕಳೆದ ಬಾರಿ ಸುರಿದ ಭಾರೀ ಮಳೆಯಿಂದ ಕೊಚ್ಚಿ ಹೋಗಿದ್ದು, ಕೊಳಕೆ ಬೈಲು ಜನವಸತಿ ಪ್ರದೇಶಕ್ಕೆ ಮತ್ತು ಶ್ರೀ ಶಿಶಿಲೇಶ್ವರ ದೇವಾಲಯಕ್ಕೆ ಸಂಪರ್ಕ ಕಡಿದುಹೋಗಿರುತ್ತದೆ.
ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಪರ್ಕ ಯೋಗ್ಯವಾದ ಒಂದು ಶಾಶ್ವತ ಕಿರು ಸೇತುವೆ ನಿರ್ಮಿಸಲು ಮತ್ತು 2 ಬೃಹತ್ ಕೋಡುಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ನಿರಂತರ ಜಲಮೂಲವನ್ನು ಕಲ್ಪಿಸಲು ರಾಜ್ಯ ಸರ್ಕಾರ ಸಸ್ಟೇನೆಬಿಲಿಟಿ ಕಾರ್ಯಕ್ರಮದಡಿ ರೂ. 45 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.