
ಅವರು ಇಂದು ದ.ಕ ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ರಾಷ್ಟ್ರೀ ಯ ಪಂಚಾ ಯತ್ ರಾಜ್ ದಿವಸ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ಭಾರತದ ದುರ್ಬಲ ವರ್ಗ ದವರ ಆರ್ಥಿಕ ಚೈತನ್ಯ ಕಾರ್ಯ ಕ್ರಮ ಗಳ ಅನು ಷ್ಠಾನ ದಿಂದ ಮೊದ ಲ್ಗೊಂಡು ಹಳ್ಳಿ ಗಳ ಸರ್ವ ತೋಮುಖ ಅಭಿ ವೃದ್ಧಿ ಇಲಾಖೆ ಯ ಗುರಿ ಯಾಗಿ ರುವುದರಿಂದ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಜವಾಬ್ದಾರಿ ಇಂದಿನ ಜನಪ್ರತಿನಿಧಿಗಳಿಗಿದೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮುದಾಯದ ಹಿತಕ್ಕಾಗಿ ಕೆಲಸ ಮಾಡಿದಾಗ ಕಾಯ್ದೆ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನತೆಯ ಪಾಲ್ಗೊಳ್ಳುವಿಕೆಯು ಅತ್ಯಗತ್ಯ ಎಂದರು. ಪಂಚಾಯತ್ ರಾಜ್ ವ್ಯವಸ್ಥೆಯ ಸಾಫಲ್ಯ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕುವುದರಲ್ಲಿ ಅಡಗಿದೆ ಎಂದರು.

ಮುಖ್ಯ ಅತಿಥಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ದ.ಕ.ಜಿ.ಪಂ. ಕೆಲವು ಸಂಕಲ್ಪಗಳನ್ನು ಹೊಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆರವಿನೊಂದಿಗೆ ಮುಂದಿನ ಎಪ್ರಿಲ್ 24ರೊಳಗೆ ಕೆಲವು ಅಂಶಿಕ ಸಂಕಲ್ಪಗಳ ಈಡೇರಿಕೆಗೆ ಬದ್ಧವಾಗಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಯಶವಂತಿ ಆಳ್ವ ಮತ್ತು ಮಮತಾ ಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಝೀರ್ ಸ್ವಾಗತಿಸಿ, ಉಪ ಕಾರ್ಯದರ್ಶಿ ಕೆ. ಶಿವರಾಮೇ ಗೌಡ ವಂದಿಸಿದರು. ಗೀತಾ ದೇವದಾಸ್ ಕಾರ್ಯಕ್ರಮ ನಿರ್ವಹಿಸಿದರು.