
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ಎಲ್ಲಾ ಸೌಲಭ್ಯಗಳು ಮತ್ತು ಯೋಜನೆಗಳು ಗ್ರಾಮ ಪಂಚಾಯತ್ ಮೂಲಕ ಜಾರಿಯಾಗುವ ದಿನಗಳು ಹತ್ತಿರವಾಗುತ್ತಿವೆ. ಅಂತಹ ಸಂದರ್ಭದಲ್ಲಿ ಸುಸಜ್ಜಿತ ಸ್ಥಳಾವಕಾಶ ಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಎಲ್ಲಾ ಗ್ರಾಮ ಪಂಚಾಯತುಗಳಿಗೆ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಮಂಜೂರು ಮಾಡಿದೆ ಎಂದರು.
ಗ್ರಾಮ ಪಂಚಾಯತುಗಳು ಆಯಾ ಪ್ರದೇಶದ ಹಿರಿಯರ ಅನುಭವವನ್ನು ಪಡೆದುಕೊಂಡು ಯುವಕರ ಶಕ್ತಿಯನ್ನು ಬಳಸಿಕೊಂಡು ಹಳ್ಳಿಗಳ ಅಭಿವೃದ್ಧಿ ಸಾಧಿಸ ಬೇಕು ಎಂದು ಶಾಸಕರು ಕರೆ ನೀಡಿದರು.
ಜಿಲ್ಲಾ ಪಂಚಾಯತು ಸದಸ್ಯ ಸಂತೋಷ್ಕುಮಾರ್ ರೈ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ,ತಾ.ಪಂ. ಸದಸ್ಯರಾದ ಪುಷ್ಪಲತಾ ಕರ್ಕೇರ, ಫಾತಿಮಾ ಹೈದರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಕಾರಿ ಅಭಿಯಂತರ ಎಂ.ಶಿವಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಬಂಟ್ವಾಳ ತಾಲೂಕಿನ 47 ಗ್ರಾಮ ಪಂಚಾಯತುಗಳ ಪೈಕಿ ರಾಜೀವ ಗಾಂಧಿ ಸೇವಾ ಕೇಂದ್ರದ ಕಾಮಗಾರಿಯನ್ನು ಪೂರ್ತಿಗೊಳಿಸ ಉದ್ಘಾಟಿಸಿದ ಐದನೇ ಗ್ರಾಮ ಪಂಚಾಯತು ಬಾಳೆಪುಣಿ. ಆರು ಗ್ರಾಮ ಪಂಚಾಯತುಗಳಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಶಿವಮೂರ್ತಿ ವಿವರಿಸಿದರು.
ಎಪಿಎಂಸಿ ಸದಸ್ಯ ಉಮ್ಮರ್ ಫಜೀರು, ಮಾಜಿ ಮಂಡಲ ಪ್ರಧಾನ ಎಚ್.ವಿಶ್ವನಾಥ ಕೊಂಡೆ, ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ತಿಲಕ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಕರ ಆಳ್ವ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಜನಾರ್ಧನ ಗಟ್ಟಿ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಬಶೀರ್ ಮತ್ತು ಸದಸ್ಯೆ ಶೋಭಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.