
ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಜಿಲ್ಲಾ ಉಸ್ತು ವಾರಿ ಕಾರ್ಯ ದರ್ಶಿ ಬಿ ಎಸ್ ರಾಮ್ ಪ್ರಸಾದ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಪ್ರಗತಿ ಪರಿ ಶೀಲನಾ ಸಭೆ ಯಲ್ಲಿ ಜಿಲ್ಲೆ ಯಲ್ಲಿ ಆದ್ಯತೆ ಮೇರೆಗೆ ಆಗ ಬೇಕಿ ರುವ ಯೋಜನೆ ಗಳ ಬಗ್ಗೆ ವಿಸ್ತೃತ ಚರ್ಚೆ ನಡೆ ಯಿತು.
ಕೊರ ಗರ ಅಭಿವೃದ್ಧಿ ಸಭೆಯಲ್ಲಿ ಮನೆ ಹಾಗೂ ನಿವೇಶನದ ಕುರಿತೇ ಚರ್ಚೆ ನಡೆದು ಇನ್ನಾವುದೇ ಇತರ ವಿಷಯಗಳ ಚರ್ಚೆ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳ ಗಮನ ಸೆಳೆದರು.
ಈಗಾಗಲೇ ಜಿಲ್ಲಾ ಪಂಚಾಯತ್ ಈ ಸಂಬಂಧ ಸಮಗ್ರ ಸಮೀಕ್ಷೆ ನಡೆಸಿದ್ದು, ಮಂಗಳೂರಿನಲ್ಲಿ 205, ಬಂಟ್ವಾಳದಲ್ಲಿ 83, ಪುತ್ತೂರಿನಲ್ಲಿ 56, ಬೆಳ್ತಂಗಡಿಯಲ್ಲಿ 80, ಸುಳ್ಯದಲ್ಲಿ 22 ಕುಟುಂಬಗಳೂ ಸ್ವಂತ ನಿವೇಶನದಲ್ಲಿದೆ. ಅದೇ ರೀತಿ 1 ಮಂಗಳೂರಿನಲ್ಲಿ 89, ಬಂಟ್ವಾಳ 65,ಪುತ್ತೂರು 31,ಬೆಳ್ತಂಗಡಿ 12, ಸುಳ್ಯ 8 ಕುಟುಂಬಗಳು ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಇದ್ದಾರೆ. ಅರಣ್ಯ ಪ್ರದೇಶದಲ್ಲಿ ಅನುಕ್ರಮವಾಗಿ 7, 0, 3, 0, 0 ಕುಟುಂಬಗಳಿವೆ. ಇತರೆ ಪ್ರದೇಶದಲ್ಲಿ 102, 39, 10, 21, 2 ಕುಟುಂಬಗಳಿವೆ. ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಇರುವ 305 ಕುಟುಂಬಗಳಿಗೆ ಮನೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದ್ದು, ಇತರ 174 ಕುಟುಂಬಗಳು ಸರ್ಕಾರ ತೋರಿಸಿದ ಜಾಗದಲ್ಲಿ ವಾಸ್ತವ್ಯ ಮಾಡುವುದಿದ್ದರೆ ಅವರಿಗೂ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ವಸತಿ ಒದಗಿಸುವ ಯೋಜನೆಗಳ ಪ್ರಗತಿ ಕುಂಠಿತವಾಗಿದ್ದು, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು.
ಬುಡಕಟ್ಟು ಜನಾಂಗದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ ಮೂರು ಕೋಟಿ ರೂ.ಗಳಲ್ಲಿ 1.87 ಕೋಟಿ ರೂ. ಮಾತ್ರ ಖರ್ಚಾಗಿದ್ದು, ಮೇ 15 ರೊಳಗೆ ಉಳಿದ ಹಣವನ್ನು ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕೆ ಬಳಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮವನ್ನೊಳಗೊಂಡಂತೆ ನಾಲ್ಕು ನಿಗಮಗಳ ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ತೃಪ್ತಿದಾಯಕವಾಗಿಲ್ಲ ಎಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬಾವಿಗಳಲ್ಲಿ ವಿದ್ಯುತ್ ಸಂಪರ್ಕ ಕೊಡದೆ ಹಲವು ನಿಷ್ಪ್ರಯೋಜಕವೆನಿಸಿದೆ. ಮೆಸ್ಕಾಂ ಮತ್ತು ನಿಗಮಗಳು ಪರಸ್ಪರ ಸಮನ್ವಯ ಸಾಧಿಸಿ ಯೋಜನೆಗಳ ಸದ್ಬಳಕೆಯಾಗಬೇಕಿದೆ ಎಂದರು.
ಇದೇ ಪರಿಸ್ಥಿತಿ ಮುಂದುವರಿದರೆ ಮೇ ತಿಂಗಳಲ್ಲಿ ನಗರಕ್ಕೆ ನೀರು ಪೂರೈಕೆ ಸವಾಲಾಗಲಿದೆ ಎಂದು ಮನಾಪ ಆಯುಕ್ತರು ಹೇಳಿದರು. ತುಂಬೆ ಅಣೆಕಟ್ಟು ಕಾಮಗಾರಿಯನ್ನು 2013 ಡಿಸೆಂಬರ್ ಒಳಗೆ ಸಂಪೂರ್ಣ ಗೊಳಿಸುವುದಾಗಿ ವಾಟರ್ ಬೋರ್ಡ್ ಅಧಿಕಾರಿ ಸಭೆಗೆ ತಿಳಿಸಿದರು. ಜೂನ್ ವರೆಗೆ ಅಣೆಕಟ್ಟಿನ ಕಾಮಗಾರಿ ಪ್ರಗತಿಯನ್ನು ಗಮನಿಸಿ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಕಾರ್ಯದರ್ಶಿಗಳು ನೀಡಿದರು,
ತುಂಬೆ ಅಣೆಕಟ್ಟು ನಿರ್ಮಾಣ ಕಾಮಗಾರಿ ವೆಚ್ಚ 45 ಕೋಟಿಯಿಂದ 75 ಕೋಟಿಗೆ ಹೆಚ್ಚಿದ್ದು, ಈಗಾಗಲೇ ಪಾಲಿಕೆ 11 ಕೋಟಿ ರೂ.ಗಳನ್ನು ನೀಡಿದ್ದು, 10 ಕೋಟಿ ರೂ.ಗಳ ಕಾಮಗಾರಿ ಮುಗಿದಿದ್ದು 15 ದಿನಗಳೊಳಗೆ ಒಂದು ಕೋಟಿ ರೂ. ಗಳ ಕಾಮಗಾರಿ ಮುಗಿಯಲಿದೆ ಎಂದರು. ಮೂರನೇ ಒಂದು ಭಾಗ ಪಾಲಿಕೆ, ಮತ್ತೆ ಮೂರನೇ ಒಂದು ಭಾಗ ಎಸ್ ಎಫ್ ಸಿ ಅನುದಾನ ಮತ್ತೆ ಉಳಿದದ್ದು ಹೆಚ್ಚುವರಿ ಅನುದಾನದಡಿ ನೀಡಲಾಗುವುದು.
ಸರ್ಕಾರಿ ಬೋರ್ ವೆಲ್ ನಿಂದ ವಾಣಿಜ್ಯ ಬಳಕೆಗೆ ನೀರೆತ್ತದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದೂ ಅವರು ನಿರ್ದೇಶನ ನೀಡಿದರು. ಲೋಕೋಪಯೋಗಿ ರಸ್ತೆ, ಕೆ ಆರ್ ಡಿಸಿಎಲ್ ನ ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು, ತಮ್ಮ ಮುಂದಿನ ಅಭಿವೃದ್ಧಿ ಪರಿಶೀಲನಾ ಸಭೆ ಅಭಿವೃದ್ಧಿ ಕಾಮಗಾರಿ ನಡೆದ ಪ್ರದೇಶಕ್ಕೆ ಖುದ್ದು ತೆರಳಿ ನಡೆಸುವುದಾಗಿ ಹೇಳಿದರು.
'ಸಕಾಲ' ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನೋಡಲ್ ಅಧಿಕಾರಿಗಳು ಆಯಾಯ ದಿನಗಳಂದೆ ಅರ್ಜಿಗಳ ವಿಲೇ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಿ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಇಂದು ಪುನರುಚ್ಚರಿಸಿದರು. ಸಮಾಜ ಕಲ್ಯಾಣ ಇಲಾಖೆ ಪ್ರಗತಿ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು, ಪುತ್ತೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಉವರ್ಾ ಸ್ಟೋರ್ ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಬಗ್ಗೆ ವಿಚಾರಿಸಿದರು. ಆಹಾರ ಇಲಾಖೆಯಲ್ಲಿ 13.212ರವರೆಗೆ 42 206 ಪಡಿತರ ಅರ್ಜಿಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸಲಾಗಿದ್ದು, 1225 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂದು ಉಪನಿರ್ದೇಶಕರು ಹೇಳಿದರು.
ಇನ್ನು ಎಲ್ ಪಿ ಜಿ ಕನೆಕ್ಷನ್ ಗೆ ಸಂಬಂಧಿಸಿದಂತೆ 10,000 ಅರ್ಜಿಳು ಬಂದಿದ್ದು, 4,000 ಕನೆಕ್ಷನ್ ಕಡಿತಗೊಳಿಸಿದ್ದು, 20 ತಾರೀಖಿನವರೆಗೆ ಸೂಕ್ತ ದಾಖಲೆ ಒದಗಿಸಿ ಸಂಪರ್ಕ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಉಪನಿರ್ದೇಶಕರು ಹೇಳಿದರು.
ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನಿದ್ದು, ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಸುಫಲಾ ರಸಗೊಬ್ಬರ ಜಾಸ್ತಿ ಬೇಕು. 12-13 ನೇ ಸಾಲಿಗೆ ಮುಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಒಟ್ಟು 1750 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ನೀಡಲಾಗಿದ್ದು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸಿ ಯಾವುದೇ ಕೊರತೆಯಾಗದಂದತೆ ನೋಡಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪವರ್ ಟಿಲ್ಲರ್ ಗೆ ಹೆಚ್ಚಿನ ಬೇಡಿಕೆ ಇದ್ದು 68 ಪವರ್ ಟಿಲ್ಲರ್ ಗಳನ್ನು ಒದಗಿಸಲಾಗಿದ್ದು, ಇನ್ನು 17 ಪವರ್ ಟಿಲ್ಲರ್ ನ್ನು ಪೂರೈಸಬೇಕಿದೆ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ಆಸ್ತಿ ಜಫ್ತಿ ಮಾಡುವಂತಹ ಕ್ರಮವನ್ನು ಸಹಕಾರಿ ಬ್ಯಾಂಕ್ ಗಳು ಕೈಗೊಳ್ಳಬಾರದು ಎಂದು ರಾಮ್ ಪ್ರಸಾದ್ ಅವರು ನಿರ್ದೇಶನ ನೀಡಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತ ಕಿಂಡಿ ಅಣೆಕಟ್ಟುಗಳ ಕಾಮಗಾರಿಯನ್ನು ಮುಂದಿನ ಭೇಟಿಯ ವೇಳೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ನುಡಿದರು.
ಸಭೆಯಲ್ಲಿ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ ಎಸ್ ಬಾಲಕೃಷ್ಣ ಉಪಸ್ಥಿತರಿದ್ದರು.