ಮಂಗಳೂರು,ಏಪ್ರಿಲ್,09: ರಾಜ್ಯದ ಸಮಗ್ರ ಅಭಿವೃದ್ದಿಗೆ ಪಾರದರ್ಶಕ ಆಡಳಿತ ನೀಡುತ್ತಿದ್ದು, ಈ ಬಾರಿ ಮಂಡಿಸಿದ ಬಜೆಟನ್ನು ಎಲ್ಲರೂ ಪ್ರಶಂಸಿಸಿದ್ದಾರೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ. ಸದಾನ0ದ ಗೌಡ ಹೇಳಿದರು. ಇಂದು ಸಾರ್ವಜನಿಕ ಮತ್ತು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಅವರು ಸುಳ್ಯದ ಮಲೆನಾಡು ಹೈಸ್ಕೂಲ್ ಮೈದಾನಿನಲ್ಲಿ ಸುದ್ದಿಗಾರರೊ0ದಿಗೆ ಮಾತನಾಡಿದರು.ರಾಜ್ಯ ದಲ್ಲಿನ ಬರ ಪೀಡಿತ ಪ್ರದೇ ಶಗಳ ಪರಿ ಸ್ಥಿತಿ ಯನ್ನು ಅಧ್ಯಾ ಯನ ಮಾಡಲು ಇ0ದಿ ನಿ0ದ 17 ಸಚಿ ವರ ಮೂರು ತ0ಡ ಗಳು ಬರ ಪೀಡಿತ ಪ್ರದೇ ಶಗ ಳಿಗೆ ಭೇಟಿ ನೀಡು ತ್ತಿದ್ದು,ಸಮಗ್ರ ವಾಗಿ ಸಮೀಕ್ಷೆ ನಡೆ ಸಲಾ ಗುತ್ತಿದೆ.ಗುಲ್ಬರ್ಗಾ,ಬಿಜಾ ಪುರ, ಬೆಳ ಗಾವಿ,ಚಿತ್ರ ದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಾನೇ ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಥಿಯನ್ನು ಅವಲೋಕಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ನುಡಿದರು.ಮಂಗ ಳೂರಿಗೆ ಕುಡಿ ಯುವ ನೀರು ಅಭಾ ವದ ಬಗ್ಗೆ ಗಮ ನಕ್ಕೆ ಬ0 ದಿದ್ದು, ನಗ ರಕ್ಕೆ ನೀರು ಸರಬ ರಾಜು ಮಾಡಲು ತುಂಬೆ ಯಲ್ಲಿ ನೂತನ ವಾಗಿ ನಿರ್ಮಾ ಣವಾ ಗುತ್ತಿ ರುವ ಅಣೆಕ ಟ್ಟಿನ ಕಾಮಾ ಗಾರಿಗೆ ವೇಗ ವನ್ನು ನೀಡಲು ಜಿಲ್ಲಾ ಡಳಿ ತಕ್ಕೆ ಸೂಚನೆ ನೀಡ ಲಾಗಿದೆ ಎಂದರು.
ಇ0ಧನ ಬೆಲೆ ಕುರಿತಾಗಿ ಪ್ರತಿಕ್ರೀಯಿಸಿದ ಮುಖ್ಯಮಂತ್ರಿಗಳು ಸಾರ್ವಜನಿಕರ ಕೋರಿಕೆಯಂತೆ ಇ0ಧನದಲ್ಲಿ ಶೇಕಡ 1.25 ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಡಿ ಕಾನ ಮಲ್ಲಿ ಕಾರ್ಜುನ ದೇವಾ ಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಬಳಿಕ ಮಾತ ನಾಡಿದ ಮುಖ್ಯ ಮಂತ್ರಿ ಗಳು ಸುಳ್ಯ, ಪುತ್ತೂರು ಪ್ರದೇಶ ಗಳ ಅಭಿ ವೃದ್ದಿಗೆ ಒಟ್ಟು 79 ಕೋಟಿ ರೂಪಾ ಯಿಗಳ ಅನು ದಾನ ವನ್ನು ಈ ಬಾರಿಯ ಬಜೆಟಿ ನಲ್ಲಿ ಮೀಸ ಲಿಡ ಲಾಗಿದೆ. ಅದರಲ್ಲಿ ಅರ0ತೋಡು- ತೋಡಿಕಾನ ರಸ್ತೆಗೆ 4 ಕೋಟಿ ರೂ.ಸೇತುವೆಗೆ 3 ಕೋಟಿ,ಸುಳ್ಯ-ಮಂಡೆಕೋಲು ರಸ್ತೆಗೆ 4 ಕೋಟಿ, ಸುಬ್ರಹ್ಮಣ್ಯ ರಸ್ತೆಗೆ 26 ಲಕ್ಷ ರೂಪಾಯಿಗಳು,ಶಾಂತಿ ಮೊಗರು ರಸ್ತೆಗೆ 9 ಕೋಟಿ ರೂಪಾಯಿಗಳನ್ನು ರಸ್ತೆಗಳ ಅಭಿವೃದ್ದಿಗೆ ಮೀಸಲಿಡಲಾಗಿದೆ ಎಂದರು.
ಹಳದಿ ರೋಗಕ್ಕೆ ತುತ್ತಾದ ಅಡಿಕೆ ತೋಟಗಳ ಬೆಳೆಗಾರರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ವಿಶೇಷ ಪ್ಯಾಕೆಜನ್ನು ನೀಡಲಾಗುವುದು. ಅಡಿಕೆ ಮತ್ತು ಬರಪರಿಸ್ಥಿಯ ಸಮಗ್ರ ವರದಿ ಸಿದ್ದವಾದ ಬಳಿಕ ಇದೇ ತಿ0ಗಳ ಮೂರನೇ ವಾರದಲ್ಲಿ ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊ0ಡು ಹೋಗಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು. ಸುಳ್ಯ ಶಾಸಕರಾದ ಅಂಗಾರ,ಸ್ಥಳಿಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು,ಜಿ.ಪಂ.ಸಿಇಓ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು, ಮತ್ತು ಪಕ್ಷದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಸ್ವಾಗತಿಸಿದರು.