
ಇದರಲ್ಲಿ 3 ಸಮುದಾಯಭವನ ನಿರ್ಮಾಣಕ್ಕಾಗಿ ರೂ. 30 ಲಕ್ಷ, ಕುಡಿಯುವ ನೀರು ಸರಬರಾಜಿಗಾಗಿ ರೂ. 31 ಲಕ್ಷ, 24 ಕೊರಗರ ಕುಟುಂಗಳಿಗೆ ಕೃಷಿ ಅಭಿವೃದ್ಧಿ, ನೀರಾವರಿ ಸೌಲಭ್ಯಗಳ ಕಲ್ಪಿಸಲು ರೂ. 82 ಲಕ್ಷ, 28 ಕುಟುಂಬಗಳಿಗೆ ಮನೆ ನಿರ್ಮಿಸಲು ರೂ. 22.64 ಲಕ್ಷ ಕೊರಗರಿಗೆ ಆರೋಗ್ಯ ಭಾಗ್ಯ ಒದಗಿಸಲು ಜನಜಾಗೃತಿ ಬೀದಿ ನಾಟಕ, ಆರೋಗ್ಯ ಶಿಬಿರ, ವೈದ್ಯಕೀಯ ವೆಚ್ಚ ಮರುಪಾವತಿ ಇನ್ನಿತರೆ ವೆಚ್ಚಗಳಿಗಾಗಿ ರೂ. 10.32 ಲಕ್ಷ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೊರಗ ವಿದ್ಯಾರ್ಥಿಗಳಿಗೆ ರಜಾ ಶಿಬಿರ, ಚಿಣ್ಣರ ಜಿಲ್ಲಾದರ್ಶನ, ವಿದ್ಯಾಭ್ಯಾಸ ವೆಚ್ಚ, ಟ್ಯೂಷನ್ ವೆಚ್ಚ ಹಾಗೂ ಇತ್ಯಾದಿಗಳ ವೆಚ್ಚಕ್ಕಾಗಿ ರೂ. 3.82 ಲಕ್ಷ ವೆಚ್ಚ ಮಾಡಲಾಗಿದೆ.
ಸ್ವ ಉದ್ಯೋಗ ಯೋಜನೆಯನ್ವಯ 30 ಕೊರಗರಿಗೆ ಕೈಮಗ್ಗ ಜವಳಿ ಇಲಾಖೆಯಿಂದ ತರಬೇತಿ, ಹೊಲಿಗೆ ಯಂತ್ರಗಳ ಉಚಿತ ವಿತರಣೆಗೆ 30 ಫಲಾನುಭವಿಗಳಿಗೆ 8.38 ಲಕ್ಷ, ಪಶುಸಂಗೋಪನಾ ಇಲಾಖೆಯಿಂದ 60 ಜನವರಿಗೆ ಹಟ್ಟಿ ನಿರ್ಮಾಣ, ಹಸು ಖರೀದಿ, ಕೋಳಿ, ಆಡು ಸಾಕಾಣಿಕೆಗಳಿಗಾಗಿ ಒಟ್ಟು 14.25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮಾಹಿತಿ ನೀಡಲಾಗಿದೆ.
ಮಂಗಳೂರು ತಾಲೂಕಿನ ಗುತ್ತಕಾಡ್ ಕೊರಗರ ಕಾಲೊನಿ, ಪುತ್ತೂರು ತಾಲೂಕಿನ ಕೊರಗರ ಕಾಲೊನಿ, ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಕೊರಗರ ಕಾಲೊನಿಗಳಲ್ಲಿ ಸಮುದಾಯಭವನಗಳನ್ನು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.