ಮಂಗಳೂರು, ಏಪ್ರಿಲ್.10:ಕುಗ್ರಾಮವೆಂದು ಗುರುತಿಸಲ್ಪಟ್ಟ ತನ್ನ ಸ್ವಗ್ರಾಮವನ್ನು ಸುಗ್ರಾಮವನ್ನಾಗಿಸುವ ಕನಸು ಇಂದು ನನಸಾಗಿದೆ ಎಂದು ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಹೇಳಿದರು.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂ ಕಿನ ಮಂಡೆ ಕೋಲಿನ ಶಾಲಾ ವಠಾ ರದಲ್ಲಿ 9.25 ಕೋಟಿ ರೂ.ಗಳ ವೆಚ್ಚ ದಲ್ಲಿ ವಿವಿಧ ಕಾಮ ಗಾರಿ ಗಳ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡಿ ದರು. ಸುಳ್ಯ ತಾಲೂಕಿನ ಸುಳ್ಯ -ಅಜ್ಜಾ ವರ-ಮಂಡೆ ಕೋಲು-ಅಡೂರು ಅಂತರ್ ರಾಜ್ಯ ರಸ್ತೆ ಅಭಿ ವೃದ್ಧಿಗೆ, ಜಾಲ್ಸೂರು-ಮುರೂರು-ಮಂಡೆ ಕೋಲು ರಸ್ತೆ ಯಲ್ಲಿ ಮುರೂರು ಎಂಬಲ್ಲಿ ಪಯ ಸ್ವಿನಿ ನದಿಗೆ ಸೇತುವೆ ನಿರ್ಮಾಣ,ಸುಳ್ಯ ತಾಲೂಕಿನ ಬೈತಡ್ಕ-ಮಂಡೆಕೋಲು ರಸ್ತೆ ಕಿ.ಮೀ 7ರಿಂದ 10.40 ಕಿ.ಮೀ ವರೆಗೆ ಅಭಿವೃದ್ಧಿ, ಸುಳ್ಯ ತಾಲೂಕಿನ ಬೈತಡ್ಕ -ಮಂಡೆಕೋಲು ರಸ್ತೆಯ ಮಾವಿನಪಳ್ಳ ಎಂಬಲ್ಲಿ ಸೇತುವೆ ರಚನೆ ಸೇರಿದಂತೆ ಎಲ್ಲ ಕಾಮಗಾರಿಗಳಿಗೆ ಸಮಯಮಿತಿ ನಿಗದಿಪಡಿಸಿರುವ ಮುಖ್ಯಮಂತ್ರಿಗಳು, 'ಸಕಾಲ' ನಾಗರೀಕ ಸೇವಾ ಖಾತರಿ ಯೋಜನೆ ಜಾರಿಗೊಂಡಿದ್ದು ರಾಷ್ಟ್ರಕ್ಕೇ ಮಾದರಿ ಎಂದರು.ರಾಜ ಕೀಯ ಇಚ್ಛಾ ಶಕ್ತಿಗಳು ಕೆಲ ಸದ ಮೂಲಕ ಗೋಚರ ವಾಗ ಬೇಕು ಎಂದ ಮುಖ್ಯ ಮಂತ್ರಿ ಗಳು, ಮಂಡೆ ಕೋಲಿ ನಲ್ಲಿ 7 ವೆಂಟೆಡ್ ಡ್ಯಾಮ್ 35 ಲಕ್ಷ ರೂ. ವೆಚ್ಚದಲ್ಲಿ, 25 ಲಕ್ಷ ರೂ., ವೆಚ್ಚದಲ್ಲಿ ಎಲ್ಲ ಕಚ್ಚಾ ರಸ್ತೆ ಗಳನ್ನು ಮೋಟ ರೇಬಲ್ ಮಾಡು ವುದಾ ಗಿಯೂ ಹೇಳಿ ದರು. ಇದ ಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನಿಯೋಗಕ್ಕೆ ಮೂಲಭೂತ ಸೌಕರ್ಯಕ್ಕೆ ಈಗಾಗಲೇ ಅನುದಾನ ಒದಗಿಸಲಾಗಿದೆ ಎಂದರು.
ಕಳೆದ ಎಂಟು ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪಾರದರ್ಶಕ ಆಡಳಿತ ನೀಡಲು, ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಲಾಗಿದ್ದು, ಇದನ್ನು ನನ್ನ ಕಚೇರಿಯಿಂದಲೇ ಆರಂಭಿಸಲು ಕ್ರಮಕೈಗೊಂಡಿದ್ದೇನೆ. ಪ್ರತಿನಿತ್ಯ 500ಕ್ಕೂ ಹೆಚ್ಚು ಕಡತಗಳನ್ನು ವಿಲೇ ಮಾಡುತ್ತಿದ್ದು, ಕಳೆದ 60 ವರ್ಷಗಳಲ್ಲಿ ಆಗದ ಜನಸ್ನೇಹಿ ಆಡಳಿತವನ್ನು ನೀಡಲಾಗಿದೆ. ಮುಂದಿನ 3 ತಿಂಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಕಾಲದಿಂದಾಗಿ ಆಡಳಿತದಲ್ಲಾಗಲಿದೆ ಎಂದರು.
ಹಿಂದುಳಿದ ವರ್ಗದವರಿಗೆ ಅಭೂತಪೂರ್ವ ನೆರವನ್ನು ಘೋಷಿಸಲಾಗಿದ್ದು, ತಮ್ಮ ಅವಧಿಯಲ್ಲಿ ಸ್ವಚ್ಛ ಆಡಳಿತಕ್ಕೆ ಆದ್ಯತೆ ಎಂದು ಪುನರುಚ್ಚರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದರು. ಶಾಸಕರಾದ ಅಂಗಾರ ಪ್ರಾಸ್ತಾವಿಕ ಹಾಗೂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಳಿಯ ಕೇಶವ ಭಟ್, ಮಂಡೆಕೋಲು ಗ್ರಾಮಪಂಚಾಯತ್ ಅಧ್ಯಕ್ಷರಾದ ಮಮತಾ, ಅಜ್ಜಾವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಕರುಣಾಕರ ಅಡಪಂಗಾಯ ಅವರನ್ನೊಳಗೊಂಡಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರಾಜ್ಯ ಬರ ಪರಿಸ್ಥಿತಿಯನ್ನೆದುರಿಸುವ ಸಂದರ್ಭದಲ್ಲಿ ಮಂಡೆಕೋಲು ವ್ಯವಸಾಯ ಸಹಕಾರಿ ಸಂಘದ ವತಿಯಿಂದ ಬರಪರಿಹಾರ ನಿಧಿಗೆ ಚೆಕ್ ನೀಡಿದರು. ಇದೇ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ಸಿಡಿಲು ಬಡಿದು ಮೃತಪಟ್ಟ ಗಿರಿಜಾ ಅವರ ಪತಿಗೆ 1 ಲಕ್ಷ ಹಾಗೂ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಹೋದ ಬಳಪದ ಲಿಂಗಪ್ಪ ಅವರ ಕುಟುಂಬಕ್ಕೆ 1.5 ಲಕ್ಷ ನೆರವಿನ ಚೆಕ್ಕನ್ನು ಮುಖ್ಯಮಂತ್ರಿಗಳು ನೀಡಿದರು.