ಮಂಗಳೂರು,ಏಪ್ರಿಲ್.04: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನಲ್ಲಿ ಕಳೆದ ತಿಂಗಳು ಜಾರಿಗೆ ಬಂದಿರುವ ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಯೋಜನೆಯನ್ವಯ ಒಟ್ಟು 5700 ಅರ್ಜಿಗಳನ್ನು ಸ್ವೀಕರಿಸಿ 4500 ಅರ್ಜಿಗಳನ್ನು ವಿಲೆ ಮಾಡಲಾಗಿದ್ದು, ಏಪ್ರಿಲ್ 2ರಿಂದ ಜಿಲ್ಲೆಯಾದ್ಯಂತ ಜಾರಿಗೆ ಬಂದಿರುವ ಸಕಾಲ ಯೋಜನೆಯಡಿ 1511 ಅರ್ಜಿಗಳನ್ನು ಸ್ವೀಕರಿಸಿ ಒಂದೂವರೆ ದಿನದಲ್ಲಿ 726 ಅರ್ಜಿಗಳನ್ನು ವಿಲೆ ಮಾಡುವ ಮೂಲಕ ರಾಜ್ಯದಲ್ಲೆ ಪ್ರಥಮ ಸ್ಥಾನ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಂಗಳವಾರ ಸಂಜೆ ನಡೆದ ವಿಡಿಯೋಕಾನ್ಫರೆನ್ಸ್ ನಲ್ಲಿ ತಿಳಿಸಿದರು.ಸಕಾಲ, ಕುಡಿ ಯುವ ನೀರು ಹಾಗೂ ಅಂಗನ ವಾಡಿಗೆ ಆಹಾರ ಪೂರೈಕೆ ಸಂ ಬಂಧ ಕೈ ಗೊಂಡಿ ರುವ ಕ್ರಮ ಗಳು ಹಾಗೂ ಪೂರ್ವ ಭಾವಿ ಸಿದ್ಧತೆ ಗಳನ್ನು ಪರಿಶೀ ಲಿಸಿದ ಮುಖ್ಯ ಮಂತ್ರಿ ಗಳು ಅಧಿಕಾ ರಿಗಳ ಕರ್ತವ್ಯ ಪರತೆ ಯನ್ನು ಶ್ಲಾಘಿ ಸಿದರು. ಮುಂದಿನ ಎರಡು ತಿಂಗಳು ಕುಡಿ ಯುವ ನೀರು ಪೂರೈಕೆ, ಗುಳೇ ಹೋಗುವ ಸವಾಲು, ಸಾಂಕ್ರಾ ಮಿಕ ರೋಗ ಭೀತಿ ಗಳಂತಹ ಸವಾಲು ಗಳನ್ನು ಇನ್ನಷ್ಟು ಜವಾ ಬ್ದಾರಿಯು ತವಾಗಿ ಹೊಣೆ ಗಾರಿಕೆ ಅರಿತು ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಸೂಚಿಸಿದರು. ಜಿಲ್ಲೆ ಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ಎದು ರಿಸಲು ಹಾಗೂ ತುರ್ತು ಕಾಮಗಾ ರಿಗ ಳನ್ನು ಕೈ ಗೊಳ್ಳಲು ರೂ.2 ಕೋಟಿ ವಿಶೇಷ ಅನು ದಾನ ವನ್ನು ಮಂಜೂರು ಮಾಡು ವಂತೆ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಗಳು ಮುಖ್ಯ ಮಂತ್ರಿ ಗಳನ್ನು ಕೋರಿ ದ್ದಾರೆ. ಇದಕ್ಕೆ ಧನಾ ತ್ಮಕ ಪ್ರತಿಕ್ರಿಯೆ ಮುಖ್ಯ ಮಂತ್ರಿ ಗಳಿಂದ ವ್ಯಕ್ತ ವಾಯಿತು.
ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದ ಮುಖ್ಯಮಂತ್ರಿಗಳು, ಸಮನ್ವಯ ಸಾಧಿಸಿ ಜನಪರ ಕೆಲಸ ಮಾಡಿ ಎಂದರು.
ಮಂಗಳೂರು ತಾಲ್ಲೂಕಿನ ಉಳ್ಳಾಲ,ಮುಲ್ಕಿ, ಹಾಗೂ ಬಂಟ್ವಾಳ ತಾಲ್ಲೂಕಿನ ಕೆಲವೆಡೆಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು,ನರಿಂಗಾಣ,ವಗ್ಗ,ಪಜೀರ್ ಮತ್ತು ಕೊಲ್ನಾಡು ಗ್ರಾಮಗಳು ಕುಡಿಯುವ ನೀರು ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಮಗಳು ಎಂದು ಅವರು ತಿಳಿಸಿದರು. ಜಿಲ್ಲೆಯ ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕ್ಷೀಣಿಸುತ್ತಿದೆ ಎಂಬ ಅಂಶವನ್ನು ಮುಖ್ಯ ಮಂತ್ರಿಗಳಲ್ಲಿ ನಿವೇದಿಸಿಕೊಂಡರು.ಜಿಲ್ಲೆ ಯಲ್ಲಿ ಅಂಗನ ವಾಡಿ ಮಕ್ಕ ಳಿಗೆ ಪೌಷ್ಠಿಕ ಆಹಾರ ಸರಬ ರಾಜು ಮಾಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿ ಕಾರಿ ಗಳ ಸಮಿತಿ ರಚಿಸ ಲಾಗಿದೆ,ಈ ತಿಂಗಳ 15 ರಿಂದ ಆಹಾರ ಸರಬ ರಾಜು ಮಾಡ ಲಾಗು ವುದೆಂದು ಅವರು ಮಾನ್ಯ ಮುಖ್ಯ ಮಂತ್ರಿ ಗಳ ಅವ ಗಾಹ ನೆಗೆ ತಂದರು.
ವಿಡಿಯೋಕಾನ್ಫರೆನ್ಸ್ ನಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.