ಮಂಗಳೂರು,ಏಪ್ರಿಲ್.05: ಪರಿಸರ ಸಂರಕ್ಷಣೆ ದೃಷ್ಠಿಯಿಂದ ಕರ್ನಾಟಕ ಸರ್ಕಾರ 01-4-2000ಕ್ಕಿಂತ ಮುಂಚೆ ನೋಂದಣಿಯಾದ 2ಸ್ಟ್ರೋಕ್ ಆಟೋರಿಕ್ಷಾಗಳನ್ನು ಪಟ್ರೋಲಿನಿಂದ ಎಲ್.ಪಿ.ಜಿ.ಗೆ ಪರಿವರ್ತಿಸಲು ಮುಂದೆ ಬರುವವರಿಗೆ ಪ್ರೋತ್ಸಾಹಕವಾಗಿ ರೂ.15000/ಗಳ ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 46 ಆಟೋ ಮಾಲೀಕರು ತಮ್ಮ ಹೆಸರನ್ನು ನೋಂದಾಯಿಸಿಕೊಡಿದ್ದು, 39ಜನರಿಗೆ ತಲಾ ರೂ.15000/-ರೂ.5,85,000/-ಮಂಜೂರಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.ಅವರು ಇಂದು ಮೂರು ವರ್ಷ ಗಳ ಬಳಿಕ ಮೊದಲ ಬಾರಿಗೆ ತಮ್ಮ ಕಛೇ ರಿಯಲ್ಲಿ ನಡೆದ ಸಾರಿಗೆ ಅದಾ ಲತ್ ನಲ್ಲಿ ಈ ವಿಷಯ ತಿಳಿ ಸಿದರು. ಇಂದಿನ ಸಾರಿಗೆ ಅದಾ ಲತ್ ನಲ್ಲಿ ಒಟ್ಟು 3 ಜನ ರಿಗೆ ಈ ಸಂಬಂಧ ತಲಾ ರೂ.15 000/-ಗಳ ಚೆಕ್ಕನ್ನು ಜಂಟಿ ಸಾರಿಗೆ ಆಯುಕ್ತ ವಿಜಯ ವಿಕ್ರಮ್ ಅವರು ವಿತರಿ ಸಿದರು.
ಮಂಗಳೂರು ನಗರ ಹಾಗೂ ಗ್ರಾಮಾಂತರ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಮೀಸಲಿರುವ ಆಸನಗಳಲ್ಲಿ ಯುವಕ-ಯುವತಿಯರು ಕುಳಿತಿರುತ್ತಾರೆ, ಕನಿಷ್ಟ ಸೌಜನ್ಯವೂ ಇಲ್ಲದಂತೆ ಅವರು ಅಶಕ್ತರು ಮಹಿಳೆಯರಿಗೆ ಆಸನ ಕೊಡುವುದಿಲ್ಲ, ಇದರಿಂದ ತುಂಬಾ ತೊಂದರೆ ಆಗುತ್ತಿದೆ ಇದನ್ನು ಸರಿ ಪಡಿಸುವಂತೆ ಬಾಲಕೃಷ್ಣರಾವ್ ಅವರು ತಮ್ಮ ಅಹವಾಲು ಮಂಡಿಸಿದರು. ಇದಕ್ಕೆ ಉತ್ತರಿಸಿದ ಅರ್,ಟಿ.ಒ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ನಗರ ದಲ್ಲಿ ಈಗಾಗಲೇ ಎರಡು ಪ್ರೀ ಪೇಯ್ಡ್ ಆಟೋ ನಿಲ್ದಾಣ ಗಳು ಉತ್ತಮ ವಾಗಿ ಕಾರ್ಯಾ ಚರಿ ಸುತ್ತಿದ್ದು ಶೀಘ್ರ ದಲ್ಲೇ ಕಂಕ ನಾಡಿ ಯಲ್ಲಿ ಒಂದು ಪ್ರೀ ಪೇಯ್ಡ್ ಆಟೋ ನಿಲ್ದಾಣ ಚಾಲ ನೆಗೆ ಬರ ಲಿದೆ ಎಂದರು.ನಗರದ ದೆರೆಬೈಲ್ ಲ್ಯಾಂಡ್ ಲಿಂಕ್ಸ್ ನಿಂದ ಸ್ಟೇಟ್ ಬ್ಯಾಂಕ್ ವರೆಗೆ ಇರುವ ಸಾರಿಗೆ ಬಸ್ಸಿನಲ್ಲಿ ತೊಂದರೆಗಳಿದ್ದು ಇದರಿಂದ ಮಹಿಳೆಯರು, ವೃದ್ದರಿಗೆ ಪ್ರಯಾಣಿಸುವುದು ಪ್ರಾಯಾಸವಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಅರ್ ಟಿ ಓ ಅವರನ್ನು ವಿನಂತಿಸಿದ ಮೇರೆಗೆ ಅವರು ಇದಕ್ಕೆ ಸ್ಪಂದಿಸಿ ಕೂಡಲೇ ತಪಾಸಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತೊಕ್ಕೊಟ್ಟು ರಸ್ತೆ ಚತುರ್ಮುಖ ರಸ್ತೆಯಾಗಿ ಪರಿವರ್ತಿತವಾಗುತ್ತಿರುವ ಕಾರಣ ಆ ಮಾರ್ಗದಲ್ಲಿ ಸದ್ಯಕ್ಕೆ ಹೊಸ ಬಸ್ಸುಗಳಿಗೆ ಪರವಾನಿಗೆಯನ್ನು ನೀಡಲಾಗುವುದಿಲ್ಲ ಎಂದು ಅವರು ಸಾರ್ವಜನಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಆಟೋಚಾಲಕರ ವಿಮೆ ಸಂಬಂಧಿಸಿದಂತೆ ತಮ್ಮ ಕಛೇರಿಯಲ್ಲಿ ಸೂಕ್ತ ವ್ಯವಸ್ತೆ ಕಲ್ಪಿಸುವುದಾಗಿ ತಿಳಿಸಿದರು. ಮುಂದಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿರುವಂತೆ ಖಾಸಗಿ ಬಸ್ಸುಗಳಲ್ಲಿಯೂ ಹಿರಿಯ ನಾಗರಿಕರಿಗೆ ರಿಯಾಯ್ತಿ ದೊರಕಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.