ಮಂಗಳೂರು.ಏಪ್ರಿಲ್.02:ಕಳೆದ ಮಾರ್ಚ್ ಒಂದರಿಂದ ಪುತ್ತೂರು ತಾಲ್ಲೂಕಿನಲ್ಲಿ ಜಾರಿಗೆ ಬಂದಿರುವ ಕರ್ನಾಟಕ ನಾಗರೀಕ ಸೇವೆಗಳ ಖಾತರಿ 2011 ಅಧಿನಿಯಮ ಸಕಾಲ ದಡಿ ಒಟ್ಟು 5540 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 4748 ಅರ್ಜಿಗಳನ್ನು ವಿಲೆಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.ಅವರು ಇಂದು ದ.ಕ.ಜಿಲ್ಲಾ ಪಂಚಾ ಯತ್ ನಲ್ಲಿ ಕರ್ನಾ ಟಕ ನಾಗ ರೀಕ ಸೇವಾ ಖಾತರಿ ಕಾಯ್ದೆ 2011 ಸೇವೆ ಗಳ ಜಾರಿಯ ಉದ್ಘಾ ಟನಾ ಸಮಾ ರಂಭ ದಲ್ಲಿ ಭಾಗ ವಹಿಸಿ ಮಾತ ನಾಡಿದರು. ಪ್ರಾದೇ ಶಿಕ ರಸ್ತೆ ಸಾರಿಗೆ ಇಲಾಖೆ ಯಲ್ಲಿ ಒಟ್ಟು ಸ್ವೀಕ ರಿಸಿದ್ದ 3750 ಅರ್ಜಿಗಳಲ್ಲಿ 3049 ಅರ್ಜಿ ಗಳನ್ನು ಈ ಅವಧಿಯಲ್ಲಿ ವಿಲೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕ.ಟಿ.ಶೈಲಜಾ ಭಟ್ ಅವರು ಮಾತನಾಡಿ ಹೇಳಿದ ಸಮಯಕ್ಕೆ ಸರಿಯಾಗಿ ಜನ ಸಾಮಾನ್ಯರ ಕೆಲಸಗಳು ಆದಾಗಲೇ ಜನ ಸರ್ಕಾರದಲ್ಲಿ ವಿಶ್ವಾಸ ಹೊಂದುತ್ತಾರೆ ಎಂದು ತಿಳಿಸಿದರು.
ಅಧ್ಯಕ್ಷ ತೆಯನ್ನು ವಿಧಾ ನಸಭೆ ಉಪ ಸಭಾ ಪತಿ ಎನ್. ಯೋಗೀಶ್ ಭಟ್ ವಹಿ ಸಿದ್ದರು. ಮುಖ್ಯ ಅತಿ ಥಿಗ ಳಾಗಿ ಸಂಸ ದರಾದ ನಳಿನ್ ಕುಮಾರ್ ಕಟೀಲ್, ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ.ನಾಗ ರಾಜ ಶೆಟ್ಟಿ, ಮೀನು ಗಾರಿಕೆ ಅಭಿ ವೃದ್ದಿ ನಿಗ ಮದ ಅಧ್ಯಕ್ಷ ರಾದ ನಿತಿನ್ ಕುಮಾರ್, ಅಲ್ಪ ಸಂಖ್ಯಾ ತರ ಅಭಿ ವೃದ್ದಿ ನಿಗ ಮದ ಅಧ್ಯಕ್ಷ ರಾದ ಎನ್.ಬಿ.ಅಬೂ ಬಕರ್, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ|ಕೆ.ಎನ್. ವಿಜಯ ಪ್ರಕಾಶ್, ಹೆಚ್ಚು ವರಿ ಜಿಲ್ಲಾ ಧಿಕಾರಿ ದಯಾ ನಂದ, ಪೋಲೀಸ್ ಕಮಿಷ ನರ್ ಸೀಮಂತ್ ಕುಮಾರ್, ಪೋಲೀಸ್ ಅಧೀಕ್ಷಕರಾದ ಅಭಿಷೇಕ್ ಗೋಯೆಲ್ ಮುಂತಾದವರು ಭಾಗವಹಿಸಿದ್ದರು.