ಮಂಗಳೂರು,ಏಪ್ರಿಲ್. 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಸಂಗೋಪನೆಗೆ ಆದ್ಯತೆಯನ್ನು ನೀಡಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿಗಳು ಕೊಯ್ಲಾಕ್ಕೆ ಪಶುವೈದ್ಯಕೀಯ ಕಾಲೇಜನ್ನು ನೀಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು.
ಅವರು ಇಂದು ನಗರದಲ್ಲಿ ಜರಗಿದ ಪಶು ವೈದ್ಯ ಕೀಯ ದಿನಾ ಚರಣೆ ಯನ್ನು ಉದ್ಘಾ ಟಿಸಿ ಮಾತಾ ಡುತ್ತಿ ದ್ದರು. ಕೊಯ್ಲಾ ದಲ್ಲಿ ರೈತ ರಿಗೆ ಉಪ ಯುಕ್ತ ವಾಗು ವಂತೆ ಪಶು ವೈದ್ಯ ಕೀಯ ಕಾಲೇಜು ಮತ್ತು ಬಂಟ್ವಾಳದ ಕೇಪುವಿನಲ್ಲಿ ಆಡು ಸಾಕಾಣಿಕೆ ಕೇಂದ್ರ ಆರಂಭಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು.
ಪ್ರಾಚೀನ ಕಾಲದಿಂದಲೂ ಪಶು ಸಂಪತನ್ನು ಹೊಂದಿರುವ ನಮ್ಮ ಸಂಸ್ಕೃತಿಯಲ್ಲಿ ಎಲ್ಲ ಜೀವಿಗಳಿಗೂ ಮಹತ್ವವನ್ನು ನೀಡಿದ್ದೇವೆ; ಆದರೆ ನಾಗರೀಕತೆ ಬೆಳೆದಂತೆ ಹಲವು ಸವಾಲುಗಳು ನಮ್ಮ ಮುಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ತ್ಯಾಜ್ಯ ನಿರ್ವಹಣೆ ಇಂದು ಆಡಳಿತಕ್ಕೆ ಸವಾಲಾಗಿದೆ ಎಂದರು.
ಪರಿಸರದಲ್ಲಿ ಜೀವಜಾಲ ವೈವಿಧ್ಯತೆಯಲ್ಲಿ ಏರುಪೇರಾದರೆ, ತ್ಯಾಜ್ಯ ವಿಲೇ ತಪ್ಪಿದರೆ ಅನಾಹುತ ನಮ್ಮನ್ನು ಬಾಧಿಸಲಿದೆ ಎಂಬುದಕ್ಕೆ ಉಡುಪಿ ಜಿಲ್ಲೆಯ ಹೇನ್ ಬೇರುನಲ್ಲಿ ಜಾನುವಾರುಗಳು ಸಾವನ್ನಪ್ಪಿರುವುದು ಸಾಕ್ಷಿ ಎಂದರು.ಪಶುಗಳ ಪಾಲನೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆಗೂ ಆದ್ಗತೆ ನೀಡುವ ಮೂಲಕ ಜನ-ಜಾನುವಾರು ಕಲ್ಯಾಣವನ್ನು ಏಕ ಕಾಲದಲ್ಲಿ ಸಾಧಿಸ ಬಹುದು ಎಂದು ಅವರು ನುಡಿದರು.
ದಕ್ಷಿಣ ಕನ್ನಡದಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪಶುಸಂಗೋಪನೆಗಾಗಿ ಲೀಡ್ ಬ್ಯಾಂಕ್ ಮೂಲಕ ರೂ.100 ಕೋಟಿ ಸಾಲ ನೀಡುವ ಯೋಜನೆ ಸಿದ್ಧಗೊಂಡಿದೆ. ಅದೇ ರೀತಿ ಆಡು ಸಾಕಾಣೆಗಾಗಿಯೂ ಕ್ರಿಯಾ ಯೋಜನೆ ತಯಾರಾಗಿದೆ ಎಂದು ವಿಜಯಪ್ರಕಾಶ್ ಹೇಳಿದರು.
ಮುಖ್ಯಅತಿಥಿ ಸ್ಥಾನದಿಂದ ಮಾತನಾಡಿದ ಮಂಗಳೂರು ಕೆಎಂಎಫ್ ಆಡಳಿತ ನಿದರ್ೇಶಕ ರವಿ ಕುಮಾರ್ ಕಾಕಡೆ ಮಾತನಾಡಿ, 2020ನೇ ವರ್ಷಕ್ಕೆ ದೇಶದ ಹಾಲಿನ ಬೇಡಿಕೆ 200 ಮಿಲಿಯನ್ ಮೆಟ್ರಿಕ್ ಟನ್ ಗಳಿಗೆ ಹೆಚ್ಚಳವಾಗಲಿದೆ. ಪ್ರಸ್ತುತ ನಮ್ಮ ಉತ್ಪಾದನೆ 110 ಮಿಲಿಯನ್ ಮೆಟ್ರಿಕ್ ಟನ್ಗಳಿವೆ. 2020ರ ಗುರಿ ಸಾಧನೆಗೆ ನಮ್ಮ ಪಶು ವೈದ್ಯರು ಕಠಣ ಶ್ರಮ ಪಡ ಬೇಕಾಗಿದೆ ಎಂದರು.
ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ರೋಹಿಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಪಶು ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಕೆ.ವಿ.ಹಲಗಪ್ಪ ಸ್ವಾಗತಿಸಿದರು. ಪಶು ವೈದ್ಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ ವಂದಿಸಿದರು. ಬಳಿಕ ಜೈವಿಕ ನಿರೋಧಕ ತಡೆ -ದುಷ್ಪರಿಣಾಮಗಳು ಕುರಿತು ತಾಂತ್ರಿಕ ಸಮಾವೇಶ ನಡೆಯಿತು. ಪಶುವೈದ್ಯಕೀಯ ಇಲಾಖೆಯ ಎಲ್ಲ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕೆ ಎಂ ಎಫ್ ಅಧಿಕಾರಿಗಳು, ಕೊಯ್ಲಾ ಫಾರ್ಮಿನ ಉಪನಿರ್ದೇಶಕರಾದ ಡಾ ವೆಂಕಟೇಶ್ ಕಾರ್ಯಾಗಾರ ದಲ್ಲಿ ಭಾಗವಹಿಸಿದ್ದರು.