ಮಂಗಳೂರು,ಏಪ್ರಿಲ್.10:ಕರಾವಳಿ ಜಿಲ್ಲೆಗಳಲ್ಲಿ ಸೌಭಾಗ್ಯ ಸಂಜೀವಿನಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಪ್ರವಾಸಿ ಸಂಪರ್ಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದಗೌಡ ಅವರು ಹೇಳಿದ್ದಾರೆ.ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಮಹಾ ಲಿಂಗೇ ಶ್ವರ ದೇವ ಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯ ಮದೊಂ ದಿಗೆ ಮಾತ ನಾಡಿದ ಅವರು, ಸೌಭಾಗ್ಯ ಸಂಜೀ ವಿನಿ ಯೋಜನೆ ಯಡಿ ಕರಾ ವಳಿ ಭಾಗದ 3 ಜಿಲ್ಲೆ ಗಳಲ್ಲಿ ಕಿಂಡಿ ಅಣೆ ಕಟ್ಟು ಮತ್ತು ಕಾಲು ಸೇತುವೆ ನಿರ್ಮಾಣ ಮಾಡ ಲಾಗು ವುದು ಎಂದರು.ಕೊಲ್ಲೂ ರಿನಿಂದ ಸುಬ್ರ ಹ್ಮಣ್ಯ ದವ ರೆಗೆ ಕರಾ ವಳಿಯ 320 ಕಿ.ಮೀ ರಸ್ತೆ ಯನ್ನು ಪ್ರವಾಸಿ ಸಂಪರ್ಕ ರಸ್ತೆ ಯನ್ನಾಗಿ ಅಭಿ ವೃದ್ಧಿ ಪಡಿ ಸಲಾಗು ವುದು ಎಂದ ಅವರು ದೇಶದ ಅತಿ ದೊಡ್ಡ ರಾಜ್ಯ ಗಳ ಬಜೆಟ್ ಗಾತ್ರ ವನ್ನೇ ರಾಜ್ಯವು ಮಂಡಿ ಸಿದ್ದು, ರಾಜ್ಯದ ಸರ್ವ ತೋಮುಖ ಅಭಿ ವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಶಾಸಕರಾದ ಶ್ರೀಮತಿ ಮಲ್ಲಿಕಾಪ್ರಸಾದ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಡಿ ಶಂಭು ಭಟ್, ಪುರಸಭಾ ಅಧ್ಯಕ್ಷರಾದ ಶ್ರೀಮತಿ ಕಮಲಾ ಆನಂದ್ ಉಪಸ್ಥಿತರಿದ್ದರು.