ಮಂಗಳೂರು, ಏಪ್ರಿಲ್. 30: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ಪ್ರವೇಶಾತಿ ಕುರಿತು ವೇಳಾಪಟ್ಟಿ ಹಾಗೂ ಇತರ ನಿಯಮಗಳ ಸಮರ್ಪಕ ಅನುಷ್ಠಾನ ಮಾಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಲ್ಲ ಶಾಲೆಗಳ ಸಂಚಾಲಕರ ಮತ್ತು ಶಿಕ್ಷಣಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ದಾಖಲಾತಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸುತ್ತೋಲೆಗಳನ್ನು ಎಲ್ಲಾ ಶಾಲೆಗಳ ವ್ಯವಸ್ಥಾಪಕ ಮಂಡಳಿಗಳಿಗೆ ಕಳುಹಿಸಿದ್ದು, ಗೆಜೆಟ್ ನೋಟಿಫಿಕೇಶನ್, ಶಿಕ್ಷಣ ವಾರ್ತೆಗಳಲ್ಲಿ, ಪತ್ರಿಕೆಗಳ ಮೂಲಕ ನಿಯಮ ಅಳವಡಿಸಲು ಸಾಕಷ್ಟು ಮಾಹಿತಿಗಳನ್ನು ನೀಡಲಾಗಿದೆ ಎಂದರು.
ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಂಬಂಧ ಸಭೆ ನಡೆಸಿ ಸರ್ಕಾರದ ನಿಯಮಗಳ ಪಾಲನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು; ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಪ್ರವೇಶ ಪ್ರಕ್ರಿಯೆಗಳು ಪೂರ್ಣವಾಗಿರಬೇಕು ಎಂದು ಸೂಚಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಹಿನ್ನಲೆಯಲ್ಲಿ ರಚಿತವಾದ ಕರ್ನಾಟಕ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ (classification, regulation and prescription of curricula, etc) Rule 199 ಮತ್ತು ಸರ್ಕಾರದ ಅಧಿಸೂಚನೆ ಇವುಗಳಲ್ಲದರ ಉಲ್ಲೇಖದಡಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಪಾರದರ್ಶಕತೆಯಿಲ್ಲದಿರುವುದು ಮತ್ತು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ವಿಷಯ ವಿವಿಧ ವೇದಿಕೆಗಳಲ್ಲಿ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ಈ ಸಂಬಂಧ ಸರ್ಕಾರ/ಇಲಾಖೆ ಖಚಿತ ನಿರ್ದೇಶನವನ್ನು ನೀಡಿದೆ. ಆದಾಗ್ಯೂ ಅಲ್ಲಲ್ಲಿ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಪ್ರವೇಶಾತಿ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅನುದಾನಿತ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳಲ್ಲಿ ವಸೂಲಿ ಮಾಡಬಹುದಾದ ಗರಿಷ್ಠ ಶುಲ್ಕ ವಿವರ ಮತ್ತು ಕ್ರಮಗಳ ಬಗ್ಗೆ ಸುತ್ತೋಲೆಯನ್ನು ಹೊರಡಿಸಿತ್ತು. ಈ ನಿಯಮಗಳನ್ನು ಅನುಷ್ಠಾನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿಗಳು ವ್ಯವಸ್ಥಾಪನ ಮಂಡಳಿಯ ಸಂಚಾಲಕರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಸಾರ್ವಜನಿಕ ಶಿಕ್ಷಣಾಧಿಕಾರಿ ಮೋಸೆಸ್ ಜಯಶೇಖರ್ ಉಪಸ್ಥಿತರಿದ್ದರು.
Monday, April 30, 2012
ಸಂಸದರ ನಿಧಿಯಿಂದ 5ಕಾಮಗಾರಿಗೆ ಅನುದಾನ ಬಿಡುಗಡೆ
ಮಂಗಳೂರು, ಎಪ್ರಿಲ್.30:ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಲೋಕ ಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರ 2009-10 ನೇ ಸಾಲಿನ ಅನುದಾನದಿಂದ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ತಾಲೂಕು ಪಡುಕೋಡಿ ಗ್ರಾಮದ ಪಂಜಿಮೊಗರು ಎಂಬಲ್ಲಿ ಮೊಗೇರ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.1.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ. 75 ಸಾವಿರಗಳನ್ನು ಬಿಡುಗಡೆ ಮಾಡಲಾಗಿದೆ.
2010-11 ನೇ ಸಾಲಿನ ಅನುದಾನದಿಂದ ದಕ್ಷಿಣಕನ್ನಡ ಜಿಲ್ಲಾ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ-ಸಾಲಿಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.3.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.2.25 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಆದ್ಯಪಾಡಿ ಗ್ರಾಮದ ಬೀಬಿಲಚ್ಚಿಲ್ ದೇವಸ್ಥಾನದ ಬಳಿ ರಸ್ತೆ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.3.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.2.25 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
2010-11 ನೇ ಸಾಲಿನ ಅನುದಾನದಿಂದ ದಕ್ಷಿಣಕನ್ನಡ ಜಿಲ್ಲಾ ಮಂಗಳೂರು ತಾಲೂಕು ಪಡುಪೆರಾರು ಗ್ರಾಮದ ಮರೋಳಿಪದವುನಿಂದ ಪೆಜತ್ತಾಯ ಮನೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.2.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.1.50 ಲಕ್ಷಗಳನ್ನು , ಕಿಲೆಂಜಾರು ಗ್ರಾಮದ ಕಲ್ಲಾಡಿ ನಾಗೋಜಿಬೈಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದ ಒಟ್ಟು ರೂ.2.00 ಲಕ್ಷಗಳಲ್ಲಿ ಇದೀಗ ಶೇಕಡಾ 75 ಅಂದರೆ ರೂ.1.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Sunday, April 29, 2012
ಬಾಲಭವನ ವಿಸ್ತರಿತ ಕಾಮಗಾರಿಗಳ ಉದ್ಘಾಟನೆ
ಮಂಗಳೂರು,ಏಪ್ರಿಲ್.29: ರಾಜ್ಯ ಬಾಲಭವನ ಸೊಸೈಟಿ,ಜಿಲ್ಲಾ ಬಾಲಭವನ ಸಮಿತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪೊಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಬಾಲಭವನದ ವಿಸ್ತರಿತ ಕಟ್ಟಡಗಳ ಮತ್ತು ಪರಗೋಲದ ಉದ್ಘಾಟನೆ ಇಂದು ನಡೆಯಿತು. ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಜಿ.ಕೆ.ಭಟ್. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ. ಶೈಲಜಾ ಭಟ್, ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ, ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರಿಮತಿ ಶಕುಂತಲಾ ಎಂ, ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮತ್ತಿತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Saturday, April 28, 2012
ವಿಶ್ವ ಪಶು ವೈದ್ಯಕೀಯ ದಿನಾಚರಣೆ
ಮಂಗಳೂರು,ಏಪ್ರಿಲ್. 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಸಂಗೋಪನೆಗೆ ಆದ್ಯತೆಯನ್ನು ನೀಡಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿಗಳು ಕೊಯ್ಲಾಕ್ಕೆ ಪಶುವೈದ್ಯಕೀಯ ಕಾಲೇಜನ್ನು ನೀಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು.
ಅವರು ಇಂದು ನಗರದಲ್ಲಿ ಜರಗಿದ ಪಶು ವೈದ್ಯ ಕೀಯ ದಿನಾ ಚರಣೆ ಯನ್ನು ಉದ್ಘಾ ಟಿಸಿ ಮಾತಾ ಡುತ್ತಿ ದ್ದರು. ಕೊಯ್ಲಾ ದಲ್ಲಿ ರೈತ ರಿಗೆ ಉಪ ಯುಕ್ತ ವಾಗು ವಂತೆ ಪಶು ವೈದ್ಯ ಕೀಯ ಕಾಲೇಜು ಮತ್ತು ಬಂಟ್ವಾಳದ ಕೇಪುವಿನಲ್ಲಿ ಆಡು ಸಾಕಾಣಿಕೆ ಕೇಂದ್ರ ಆರಂಭಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು.
ಪ್ರಾಚೀನ ಕಾಲದಿಂದಲೂ ಪಶು ಸಂಪತನ್ನು ಹೊಂದಿರುವ ನಮ್ಮ ಸಂಸ್ಕೃತಿಯಲ್ಲಿ ಎಲ್ಲ ಜೀವಿಗಳಿಗೂ ಮಹತ್ವವನ್ನು ನೀಡಿದ್ದೇವೆ; ಆದರೆ ನಾಗರೀಕತೆ ಬೆಳೆದಂತೆ ಹಲವು ಸವಾಲುಗಳು ನಮ್ಮ ಮುಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ತ್ಯಾಜ್ಯ ನಿರ್ವಹಣೆ ಇಂದು ಆಡಳಿತಕ್ಕೆ ಸವಾಲಾಗಿದೆ ಎಂದರು.
ಪರಿಸರದಲ್ಲಿ ಜೀವಜಾಲ ವೈವಿಧ್ಯತೆಯಲ್ಲಿ ಏರುಪೇರಾದರೆ, ತ್ಯಾಜ್ಯ ವಿಲೇ ತಪ್ಪಿದರೆ ಅನಾಹುತ ನಮ್ಮನ್ನು ಬಾಧಿಸಲಿದೆ ಎಂಬುದಕ್ಕೆ ಉಡುಪಿ ಜಿಲ್ಲೆಯ ಹೇನ್ ಬೇರುನಲ್ಲಿ ಜಾನುವಾರುಗಳು ಸಾವನ್ನಪ್ಪಿರುವುದು ಸಾಕ್ಷಿ ಎಂದರು.ಪಶುಗಳ ಪಾಲನೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆಗೂ ಆದ್ಗತೆ ನೀಡುವ ಮೂಲಕ ಜನ-ಜಾನುವಾರು ಕಲ್ಯಾಣವನ್ನು ಏಕ ಕಾಲದಲ್ಲಿ ಸಾಧಿಸ ಬಹುದು ಎಂದು ಅವರು ನುಡಿದರು.
ದಕ್ಷಿಣ ಕನ್ನಡದಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪಶುಸಂಗೋಪನೆಗಾಗಿ ಲೀಡ್ ಬ್ಯಾಂಕ್ ಮೂಲಕ ರೂ.100 ಕೋಟಿ ಸಾಲ ನೀಡುವ ಯೋಜನೆ ಸಿದ್ಧಗೊಂಡಿದೆ. ಅದೇ ರೀತಿ ಆಡು ಸಾಕಾಣೆಗಾಗಿಯೂ ಕ್ರಿಯಾ ಯೋಜನೆ ತಯಾರಾಗಿದೆ ಎಂದು ವಿಜಯಪ್ರಕಾಶ್ ಹೇಳಿದರು.
ಮುಖ್ಯಅತಿಥಿ ಸ್ಥಾನದಿಂದ ಮಾತನಾಡಿದ ಮಂಗಳೂರು ಕೆಎಂಎಫ್ ಆಡಳಿತ ನಿದರ್ೇಶಕ ರವಿ ಕುಮಾರ್ ಕಾಕಡೆ ಮಾತನಾಡಿ, 2020ನೇ ವರ್ಷಕ್ಕೆ ದೇಶದ ಹಾಲಿನ ಬೇಡಿಕೆ 200 ಮಿಲಿಯನ್ ಮೆಟ್ರಿಕ್ ಟನ್ ಗಳಿಗೆ ಹೆಚ್ಚಳವಾಗಲಿದೆ. ಪ್ರಸ್ತುತ ನಮ್ಮ ಉತ್ಪಾದನೆ 110 ಮಿಲಿಯನ್ ಮೆಟ್ರಿಕ್ ಟನ್ಗಳಿವೆ. 2020ರ ಗುರಿ ಸಾಧನೆಗೆ ನಮ್ಮ ಪಶು ವೈದ್ಯರು ಕಠಣ ಶ್ರಮ ಪಡ ಬೇಕಾಗಿದೆ ಎಂದರು.
ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ರೋಹಿಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಪಶು ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಕೆ.ವಿ.ಹಲಗಪ್ಪ ಸ್ವಾಗತಿಸಿದರು. ಪಶು ವೈದ್ಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ ವಂದಿಸಿದರು. ಬಳಿಕ ಜೈವಿಕ ನಿರೋಧಕ ತಡೆ -ದುಷ್ಪರಿಣಾಮಗಳು ಕುರಿತು ತಾಂತ್ರಿಕ ಸಮಾವೇಶ ನಡೆಯಿತು. ಪಶುವೈದ್ಯಕೀಯ ಇಲಾಖೆಯ ಎಲ್ಲ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕೆ ಎಂ ಎಫ್ ಅಧಿಕಾರಿಗಳು, ಕೊಯ್ಲಾ ಫಾರ್ಮಿನ ಉಪನಿರ್ದೇಶಕರಾದ ಡಾ ವೆಂಕಟೇಶ್ ಕಾರ್ಯಾಗಾರ ದಲ್ಲಿ ಭಾಗವಹಿಸಿದ್ದರು.

Thursday, April 26, 2012
ನಗರ ನೈರ್ಮಲೀಕರಣ ಕಾರ್ಯಪಡೆ ಸಭೆ
ಮಂಗಳೂರು ,ಏಪ್ರಿಲ್.26 :ಯೋಜನಾ ವರದಿಗಳು ಸಲಹೆಗಳಿಗಿಂತ ಮುಖ್ಯವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪೂರಕವಾಗಿರಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹೇಳಿದರು.
ಇಂದು ಮಹಾ ನಗರ ಪಾಲಿಕೆ ಯಲ್ಲಿ ನಡೆದ ರಾಷ್ಟ್ರೀಯ ನಗರ ನೈರ್ಮ ಲೀಕರಣ ಯೋಜನಾ ವರದಿ ಯನ್ನು ಅಂತಿಮ ಗೊಳಿಸಲು ಮಹಾ ನಗರ ಪಾಲಿಕೆ ಮಹಾ ಪೌರರ ಅಧ್ಯಕ್ಷ ತೆಯಲ್ಲಿ ನಡೆದ ಸಭೆ ಯಲ್ಲಿ ಪಾಲಿಕೆ ಆಯುಕ್ತರು ಮಾತ ನಾಡುತ್ತಿದ್ದರು. ಯೋಜನಾ ವರದಿ ಗಳನ್ನು ಅನುಷ್ಠಾನಕ್ಕೆ ತರುವ ಹೊಣೆ ಪಾಲಿಕೆಯ ಜೊತೆ ನಾಗರೀಕ ಸಮಾಜಕ್ಕೂ ಇದೆ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಮಂಗಳೂರು ನಗರದಲ್ಲಿ ನೈರ್ಮಲ್ಯದ ಬಗ್ಗೆ ಪಾಲಿಕೆಯಷ್ಟೇ ಹೊಣೆ ನಾಗರೀಕರದ್ದು; ಎಲ್ಲಿಯವರೆಗೆ ನಾಗರೀಕರಿಗೆ ಈ ಬಗ್ಗೆ ಅರಿವು ಮೂಡುವುದಿಲ್ಲ ಅಲ್ಲಿಯವರೆಗೆ ಸ್ವಚ್ಛ, ಸುಂದರ ನಗರ ನಿರ್ಮಾಣ ಕಷ್ಟ ಎಂದರು. ಒಬ್ಬ ಅಧಿಕಾರಿ ಆರುಲಕ್ಷ ನಾಗರೀಕರಿರುವ ನಗರದ ನೈರ್ಮಲ್ಯಕ್ಕೆ ಯೋಜನೆಗಳನ್ನು ನೀಡಿ ಅನುಷ್ಠಾನಕ್ಕೆ ತರಬಹುದು; ಆದರೆ ನಿರ್ವಹಣೆ ಮತ್ತು ಜವಾಬ್ದಾರಿ ಜನರಿಗಿರಿಬೇಕು. ನಮ್ಮ ಮನೆಯಷ್ಟೆ ಹಾದಿ ಬೀದಿಗಳನ್ನು ಸ್ವಚ್ಛವಾಗಿಡಬೇಕೆಂಬ ಜ್ಞಾನ ಜನರಲ್ಲೂ ಮೂಡಬೇಕು ಎಂದರು.
ಎಲ್ಲ ನಾಗರೀಕ ಪ್ರಜ್ಞೆ ಮತ್ತು ಕರ್ತವ್ಯಗಳನ್ನು ದಂಡ ವಿಧಿಸಿ ಜಾರಿಗೆ ತರುವುದು ಅಸಾಧ್ಯದ ಕೆಲಸ ಎಂದ ಅವರು, %50 ಸಿಬ್ಬಂದಿ ಕೊರತೆಯ ಹೊರತಾಗಿಯೂ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಪಾಲಿಕೆ ಅನುಷ್ಠಾನಕ್ಕೆ ತರುತ್ತಿದೆ ಎಂದರು.
ನಗರದ ಒಳಚರಂಡಿ ವ್ಯವಸ್ಥೆ, ಕೊಳಚೆ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಗಹನ ಚರ್ಚೆ ನಡೆಯಿತು. ಯೋಜನಾ ವರದಿಯ ಕರಡು ಪ್ರತಿಯನ್ನು ಆಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಶ್ರೀಮತಿ ವಾಸುಕಿ ನರಾಲಾ ಅವರು ಪ್ರಸ್ತುತಪಡಿಸಿದರು.
ಈ ವರದಿಯ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತಲ್ಲದೆ, ಅವರೊಂದಿಗೆ ನಾಳೆ ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಸದಸ್ಯರಿಗೆ ಆಯುಕ್ತರು ಸೂಚನೆ ನೀಡಿದರು.
ನಗರ ನೈರ್ಮಲೀಕರಣದಡಿ ನಗರ ಯೋಜನೆ, ಸಾರ್ವಜನಿಕ ಆರೋಗ್ಯ, ನೀರು ಮತ್ತು ನೈರ್ಮಲ್ಯ, ನೀರು ಶುದ್ದೀಕರಿಸಿ ಪುನರ್ ಬಳಕೆ ಮಾಡುವ ಬಗ್ಗೆ, ಇದೆಲ್ಲದರ ಪರಿಣಾಮ ಸಾರ್ವಜನಿಕ ಆರೋಗ್ಯ ಎಂಬುದರ ಕುರಿತು ಕರಡು ಯೋಜನೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಶಾಲೆಗಳಲ್ಲಿ ನಿರ್ಮಲ ಶೌಚಾಲಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವ ಕುರಿತ ಪ್ರಸ್ತಾಪಗಳು ಯೋಜನೆಯಲ್ಲಿ ಅಡಕವಾಗಿದೆ. ಈ ವರದಿ ಮಹಾನಗರಪಾಲಿಕೆಯಿಂದ ಒಂದೂವರೆ ವರ್ಷದ ಹಿಂದೆ ಪಡೆದ ಅಂಕಿ ಸಂಖ್ಯೆಗಳ ಮೇಲೆ ಅವಲಂಬಿತವಾಗಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸಬೇಕಿದೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಯೋಜನೆಯನ್ನು ಇನ್ನಷ್ಟು ಸ್ಥಳೀಯವಾಗಿಸುವ ಬಗ್ಗೆಯೂ ಸದಸ್ಯರು ಒತ್ತಾಯಿಸಿದರು. ಎಲ್ಲರ ಅಭಿಪ್ರಾಯ ಹಾಗೂ ಮಾಹಿತಿಗಳನ್ನು ವರದಿಯಲ್ಲಿ ಅಳವಡಿಸಿ ಪ್ರಸ್ತುತ ಪ್ರಡಿಸುವುದಾಗಿ ಶ್ರೀಮತಿ ವಾಸುಕಿಯವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮೇಯರ್ ಗುಲ್ಜಾರ್ ಭಾನು ವಹಿಸಿದ್ದರು. ಪಾಲಿಕೆ ಸದಸ್ಯ ಭಾಸ್ಕರ ಚಂದ್ರ ಉಪಸ್ಥಿತರಿದ್ದರು.

Wednesday, April 25, 2012
ಬಸವಣ್ಣನವರ ಚಿಂತನೆ,ಚೈತನ್ಯಗಳು ಇಂದಿಗೂ ಪ್ರಸ್ತುತ:ಎನ್.ಯೋಗಿಶ್ ಭಟ್
ಮಂಗಳೂರು,ಏಪ್ರಿಲ್.25: ಅರಿವು, ಆಚಾರ, ಅನುಭಾವ ಗಳಲ್ಲಿ ನಮ್ಮ ಜೀವನ ಸಾರವಡಗಿದೆ. ಬಸವಣ್ಣನವರ ಚಿಂತನೆ,ಚೈತನ್ಯಗಳು ಇಂದಿಗೂ ಪ್ರಸ್ತುತ. ಸಾಮಾಜಿಕ ಜೀವನ ಸದೃಢಗೊಳಿಸುವಲ್ಲಿ ಬಸವಣ್ಣನ ವಚನ ಸಾಹಿತ್ಯಗಳು ನೀಡಿದ ಕೊಡುಗೆ ಅನನ್ಯ ಎಂದು ಕರ್ನಾಟಕ ವಿಧಾನಸಭಾ ಉಪಸಭಾಧ್ಯಕ್ಷರಾದ ಶ್ರೀ ಎನ್ ಯೋಗೀಶ್ ಭಟ್ ಅವರು ಹೇಳಿದರು.ಅವರು ನಗರದ ಪುರ ಭವನ ದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಶತಮಾನೋತ್ಸವ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಬಿಜ್ಜಳನ ಆಡಳಿತ ದಲ್ಲಿ ಪ್ರಧಾನಿ ಗಳಾಗಿ ನೀಡಿದ ಆಡಳಿತ ವ್ಯವಸ್ಥೆ ಇಂದಿಗೂ ಮಾದರಿಯಾಗಿದ್ದು, ಅವರ ಒಂದೊಂದು ವಚನದಲ್ಲೂ ಜೀವನ ಚಿಲುಮೆಯಡಗಿದೆ. ಸಾಮಾಜಿಕ ಸಾಮರಸ್ಯ, ಸಮಾನತೆಗೆ ನೀಡಿದ ಆದ್ಯತೆ, ಅವರ ಜ್ಞಾನ, ಮಾನವತಾ ವಾದದಿಂದ ಇಂದಿಗೂ ಅವರು ಸ್ಮರಣೀಯರು ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು, ಬಸವಣ್ಣನವರು ತಮ್ಮ ವಚನಗಳಿಂದ,ಮಹಾಮಾನವತಾವಾದದಿಂದ ಇಂದಿಗೂ ಹಲವು ರೂಪಗಳಲ್ಲಿ ನಮ್ಮ ನಡುವೆ ಬದುಕಿದ್ದಾರೆ. ಮಾದರಿಯಾಗಿದ್ದಾರೆ;ಅವರ ವಚನ ಸಾಹಿತ್ಯ ವಿಶ್ವ ಮನ್ನಣೆ ಗಳಿಸಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಉಪನ್ಯಾಸ ನೀಡಿದ ಗೋಕರ್ಣನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ನರಸಿಂಹ ಮೂರ್ತಿ ಅವರು, ಶ್ರೇಷ್ಠರ ಮಾನವರ ಜಯಂತಿಗಳಂದು ಸಾರ್ವಜನಿಕ ರಜೆ ಘೋಷಿಸದೆ ಅವರ ಬಗ್ಗೆ ತಿಳಿಯುವ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು; ಕಾಯಕವೇ ಕೈಲಾಸವೆಂದ ಬಸವಣ್ಣನ ಜಯಂತಿಯಂದು ಕಾಯಕದ ಬಗ್ಗೆ ಯುವ ಜನಾಂಗಕ್ಕೆ ಮಾಹಿತಿ ನೀಡಿ, ಪ್ರೇರಪರಣೆ ನೀಡಿದರೆ ಅದೇ ನಾವು ಅವರಿಗೆ ಸಲ್ಲಿಸುವ ವಿಶೇಷ ನಮನ ಎಂದರು.
ಸಭಾ ಕಾರ್ಯಕ್ರಮದ ನಡುವೆ ವಚನಗಳನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಯಿತು. ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿದರು. ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ ಎಸ್ ಬಿ ಯಲಬುರ್ಗಿ, ಶಾರದ ಮಲ್ಲಪ್ಪ, ಶೋಭಾ ಮಲ್ಲಿಕಾರ್ಜುನ ಅಂಗಡಿ ಅವರು ವೇದಿಕೆಯಲ್ಲಿದ್ದರು. ಮಹಾನಗರಪಾಲಿಕೆ ಆಯುಕ್ತ ಹರೀಶ್ ಕುಮಾರ್, ಜಿ.ಪಂ. ಕಾರ್ಯದರ್ಶಿ ಶಿವರಾಮೇಗೌಡ ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು.

ದ.ಕ.ಜಿ.ಪಂ ಗೆ ಪಿಯಾಸ್ ಪ್ರಶಸ್ತಿಯ ಗರಿ
ಮಂಗಳೂರು,ಏಪ್ರಿಲ್.25: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಮತ್ತೊಂದು ಪ್ರಶಸ್ತಿಯಗರಿ. ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀ ಕರಣ ಮತ್ತುಉತ್ತರ ದಾಯಿತ್ವ ವನ್ನು ಪ್ರೋತ್ಸಾ ಹಿಸುವ ಯೋಜನೆ ಯಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಪ್ರಶಸ್ತಿ ಲಭಿಸಿದ್ದು,ನವ ದೆಹಲಿಯಲ್ಲಿ ನಿನ್ನೆ ನಡೆದ ಸಮಾ ರಂಭದಲ್ಲಿ ಕೇಂದ್ರದ ಗ್ರಾಮೀಣಭಿವೃದ್ಧಿ ಸಚಿವರಾದ ಶ್ರೀ ಜೈರಾಂ ರಮೇಶ್ಅವರು ಜಿಲ್ಲಾಪಂಚಾಯತ್ ಅಧ್ಯಕ್ಷೆಶ್ರೀಮತಿ ಕೆ.ಟಿ. ಶೈಲಜಾಭಟ್ ಅವರಿಗೆಪ್ರಶಸ್ತಿ ನೀಡಿದರು.ಕರ್ನಾಟಕ ಸರ್ಕಾರದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದಶ್ರೀ ಜಗದೀಶ್ಶೆಟ್ಟರ್, ಬುಡಕಟ್ಟು ವ್ಯವಹಾರಗಳು ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ವಿ.ಕಿಶೋರ್ ಚಂದ್ರದೇವ್ ಉಪಸ್ಥಿತರಿದ್ದರು. ಜಿಲ್ಲೆಯ ಲೈಲಾ ಗ್ರಾಮಪಂಚಾಯತಿಯೂ ಗೌರವ ಗ್ರಾಮಸಭೆ ಪ್ರಶಸ್ತಿಯನ್ನು ಪಡೆಯಿತು.
Tuesday, April 24, 2012
ದ.ಕ. ಜಿ.ಪಂ ನಲ್ಲಿ 'ಪಂಚಾಯತ್ ರಾಜ್ ' ದಿವಸ
ಮಂಗಳೂರು,ಏಪ್ರಿಲ್.24: ಪಂಚಾಯತ್ ರಾಜ್ ವ್ಯವಸ್ಥೆ ಕಾಯಿದೆ ಪುಸ್ತಕದಲ್ಲಿರುವಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ ಎಂಬ ಆತ್ಮವಿಮರ್ಶೆಗೆ ಇಂದು ಸಕಾಲ ಎಂದು ಜಿಲ್ಲಾ ಪಂಚಾಯತ್ ನ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ ಅವರು ಅಭಿಪ್ರಾಯಪಟ್ಟರು.
ಅವರು ಇಂದು ದ.ಕ ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ರಾಷ್ಟ್ರೀ ಯ ಪಂಚಾ ಯತ್ ರಾಜ್ ದಿವಸ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ಭಾರತದ ದುರ್ಬಲ ವರ್ಗ ದವರ ಆರ್ಥಿಕ ಚೈತನ್ಯ ಕಾರ್ಯ ಕ್ರಮ ಗಳ ಅನು ಷ್ಠಾನ ದಿಂದ ಮೊದ ಲ್ಗೊಂಡು ಹಳ್ಳಿ ಗಳ ಸರ್ವ ತೋಮುಖ ಅಭಿ ವೃದ್ಧಿ ಇಲಾಖೆ ಯ ಗುರಿ ಯಾಗಿ ರುವುದರಿಂದ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಜವಾಬ್ದಾರಿ ಇಂದಿನ ಜನಪ್ರತಿನಿಧಿಗಳಿಗಿದೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮುದಾಯದ ಹಿತಕ್ಕಾಗಿ ಕೆಲಸ ಮಾಡಿದಾಗ ಕಾಯ್ದೆ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನತೆಯ ಪಾಲ್ಗೊಳ್ಳುವಿಕೆಯು ಅತ್ಯಗತ್ಯ ಎಂದರು. ಪಂಚಾಯತ್ ರಾಜ್ ವ್ಯವಸ್ಥೆಯ ಸಾಫಲ್ಯ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕುವುದರಲ್ಲಿ ಅಡಗಿದೆ ಎಂದರು.ಪಂಚಾ ಯತ್ ರಾಜ್ ದಿವಸ ಕಾರ್ಯ ಕ್ರಮ ದಲ್ಲಿ ಪ್ರಧಾನ ಭಾಷಣ ಮಾಡಿದ ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ಅರ್ಥ ಶಾಸ್ತ್ರ ವಿಭಾ ಗದ ಪ್ರಾಧ್ಯಾ ಪಕ ಪ್ರೊ. ಶ್ರೀಪತಿ ಕಲ್ಲೂ ರಾಯ, ಭಾರ ತದ ಅಭಿ ವೃದ್ಧಿಗೆ ಪಂಚಾ ಯತ ರಾಜ್ ಇಲಾಖೆ ಕೊಡುಗೆ ಅನನ್ಯ ವಾಗಿದೆ. ಇತರ ಯಾವುದೇ ಸರ ಕಾರ ದಿಂದ ಲಭ್ಯವಾದ ಅನುದಾನವನ್ನು ಹೇಗಾದರೂ ಖರ್ಚು ಮಾಡಬೇಕೆಂಬ ಇರಾದೆ ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಇಲ್ಲ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ದೇಶದ ಗಮನ ಸೆಳೆದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಕಾರ್ಯವೈಖರಿ ಇತರ ಪಂಚಾಯತ್ ಗಳಿಗಿಂತ ಭಿನ್ನ ಎಂದರು.
ಮುಖ್ಯ ಅತಿಥಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ದ.ಕ.ಜಿ.ಪಂ. ಕೆಲವು ಸಂಕಲ್ಪಗಳನ್ನು ಹೊಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆರವಿನೊಂದಿಗೆ ಮುಂದಿನ ಎಪ್ರಿಲ್ 24ರೊಳಗೆ ಕೆಲವು ಅಂಶಿಕ ಸಂಕಲ್ಪಗಳ ಈಡೇರಿಕೆಗೆ ಬದ್ಧವಾಗಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಯಶವಂತಿ ಆಳ್ವ ಮತ್ತು ಮಮತಾ ಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಝೀರ್ ಸ್ವಾಗತಿಸಿ, ಉಪ ಕಾರ್ಯದರ್ಶಿ ಕೆ. ಶಿವರಾಮೇ ಗೌಡ ವಂದಿಸಿದರು. ಗೀತಾ ದೇವದಾಸ್ ಕಾರ್ಯಕ್ರಮ ನಿರ್ವಹಿಸಿದರು.

Monday, April 23, 2012
ಶಿವಾಜಿ ಆಡಳಿತ ವ್ಯವಸ್ಥೆ ಇಂದಿಗೂ ಪ್ರಸ್ತುತ: ಯೋಗೀಶ್ ಭಟ್
ಮಂಗಳೂರು,ಏಪ್ರಿಲ್.23:ಜನಪರ ಆಡಳಿತಕ್ಕೆ ಶಿವಾಜಿ ಆಡಳಿತ ವ್ಯವಸ್ಥೆ ಮಾದರಿಯಾಗಿದ್ದು, ಛತ್ರಪತಿ ಶಿವಾಜಿ ಆಡಳಿತಾವಧಿಯ ಅಷ್ಟ ಪ್ರಧಾನ ವ್ಯವಸ್ಥೆಗಳು ಇಂದಿಗೂ ಪ್ರಸ್ತುತ ಎಂದು ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.
ಇಂದು ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾ ಟಕ ಕ್ಷತ್ರಿಯ ಮರಾಠ ಪರಿಷತ್ ಇವರ ಸಂಯು ಕ್ತಾಶ್ರ ಯದಲ್ಲಿ ಛತ್ರ ಪತಿ ಶಿವಾಜಿ ಮಹಾ ರಾಜರ 385ನೇ ಜಯಂ ತೋತ್ಸವ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.
ಶಿವಾಜಿಯ ಆಡಳಿತಾವಧಿಯಲ್ಲಿ ಕಾರ್ಯಾಂಗ ಮತ್ತು ರಕ್ಷಣಾ ವ್ಯವಸ್ಥೆಗಳು ಹಾಗೂ ಆರ್ಥಿಕ ವ್ಯವಸ್ಥೆಗಳು ಸಬಲ ಹಾಗೂ ಸದೃಢವಾಗಿದ್ದು ಇಂದಿಗೂ ನಮಗೆ ಮಾದರಿಯಾಗಿದೆ. ಆಧುನಿಕ ವ್ಯವಸ್ಥೆಯ ಗೆರಿಲ್ಲಾ ವಾರ್ ಗಳಿಗೂ ಶಿವಾಜಿಯೇ ಸ್ಫೂರ್ತಿ. ದೇಶದ ಆಂತರಿಕ ಭದ್ರತೆ, ಗುಪ್ತಚರ ವ್ಯವಸ್ಥೆಗಳ ಜೊತೆಗೆ ನಾಗರೀಕರ ಜವಾಬ್ದಾರಿಗಳ ಬಗ್ಗೆ, ಸಾಮರಸ್ಯದ ಬದುಕಿಗೆ ಇವರ ಆಡಳಿತಾವಧಿ ಉತ್ತಮ ಮಾದರಿಯನ್ನು ನೀಡಿದೆ ಎಂದು ಅವರು ಸ್ಮರಿಸಿದರು.
ಇಂತಹ ಮಹಾನ್ ದೇಶ ಭಕ್ತನ 385 ನೇ ಜನ್ಮ ದಿನಾಚ ರಣೆ ಯನ್ನು ಆಚ ರಿಸಲು ರಾಜ್ಯ ಸರ್ಕಾರ ಪ್ರಸಕ್ತ ಸಾಲಿ ನಿಂದ ಅಧಿ ಕೃತ ಸೂಚನೆ ಯನ್ನು ನೀಡಿದ್ದು, ಇಂತಹ ಆಚ ರಣೆಗ ಳಿಂದ ಇತಿ ಹಾಸ ಹಾಗೂ ಇತಿ ಹಾಸ ಕಾರರ ಸ್ಮರಣೆ ಸಾಧ್ಯ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾನ್ಯ ಜನರು ಮಹಾನ್ ವ್ಯಕ್ತಿಗಳಾಗಲು ಸಾಧ್ಯ ಎಂಬುದಕ್ಕೆ ಶಿವಾಜಿ ಮಹಾರಾಜನೇ ಸಾಕ್ಷಿ; ನಮ್ಮ ದೇಶಕ್ಕಿಂದು ಸಾವಿರ ಸಾವಿರ ಶಿವಾಜಿಗಳ ಅಗತ್ಯವಿದೆ. ಅಂದಿನ ಆಡಳಿತದ ಮಾದರಿಗಳು ಇಂದಿಗೂ ಉತ್ತಮ ಆಡಳಿತಕ್ಕೆ ಸ್ಫೂರ್ತಿಯಾಗಲಿದೆ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಪಾಲಿಕೆ ಮಹಾಪೌರರಾದ ಶ್ರೀಮತಿ ಗುಲ್ಜಾರ್ ಭಾನು ಮಾತನಾಡಿದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಛತ್ರ ಪತಿ ಶಿವಾಜಿ ಕುರಿತು ಮುಂಡೋಡು ಧರ್ಮಪಾಲ ರಾವ್ ಜಾಧವ್ ಮಾತ ನಾಡಿದರು. ಆರ್ಯ ಯಾನೆ ಮರಾಠ ಸಮಾಜ ಸಂಘ ಅಧ್ಯಕ್ಷ ರಾದ ದೇವೋಜಿ ರಾವ್ ಜಾಧವ್, ಕ.ಕ್ಷ. ಮ.ಪ. ಬೆಂಗ ಳೂರಿನ ಜಂಟಿ ಕಾರ್ಯ ದರ್ಶಿ ಸುರೇಶ್ ರಾವ್ ಕೆ ಲಾಡ್, ಜಿಲ್ಲಾಧ್ಯಕ್ಷ ಎ ವಿ ಸುರೇಶ್ ರಾವ್ ಕರ್ ಮೋರೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ ನಾಯಕ್ ಅವರು ಸ್ವಾಗತಿಸಿದರು. ಬಳಿಕ 'ಛತ್ರಪತಿ ಶಿವಾಜಿ ನಾಟಕ' ವನ್ನು ಆಯೋಜಿಸಲಾಗಿತ್ತು.

Saturday, April 21, 2012
ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಅನುಷ್ಠಾನ ರಾಜ್ಯ ಪ್ರಥಮ: ಯೋಗೀಶ್ ಭಟ್
ಮಂಗಳೂರು,ಏಪ್ರಿಲ್.21:ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಸರಕಾರ ಹಿಂದೆಂದಿಗಿಂತಲೂ ಅಧಿಕ ಅನುದಾನ ಒದಗಿಸುತ್ತಿದೆ ಎಂದು ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್ ಹೇಳಿದ್ದಾರೆ.ಅವರು ಇಂದು ದ.ಕ.ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ನಡೆದ ರಾಜ್ಯ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗ ಮದ ಸೌಲಭ್ಯ ಗಳ ಚೆಕ್ ವಿತ ರಣಾ ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು.
ರಾಜ್ಯದ ಬಜೆಟ್ ರೂ.35 ಸಾವಿರ ಕೋಟಿ ಇದ್ದಾಗ ಕೇವಲ ರೂ. 35 ಕೋಟಿ ಮಾತ್ರ ಅಲ್ಪ ಸಂಖ್ಯಾ ತರ ಕಲ್ಯಾಣ ಕಾರ್ಯ ಕ್ರಮ ಗಳಿಗೆ ನಿಗದಿ ಯಾಗಿತ್ತು. ಬಜೆಟ್ ರೂ. 86 ಸಾವಿರ ಕೋಟಿ ಹೆಚ್ಚಾ ದಾಗ ನಿಗ ಮದ ಅನು ದಾನ ರೂ.376 ಕೋಟಿ ಗಳಿಗೆ ಹೆಚ್ಚಿದೆ. ರಾಜ್ಯದ ಈ ಸಾಲಿನ ಬಜೆಟ್ ರೂ.ಒಂದು ಲಕ್ಷ ಕೋಟಿಗೆ ತಲು ಪಿದ್ದು, ನಿಗ ಮದ ಅನು ದಾನ ವನ್ನು ರೂ.406 ಕೋಟಿ ಗಳಿಗೆ ಹೆಚ್ಚಿ ಸಲಾ ಗಿದೆ ಎಂದು ಯೋ ಗೀಶ್ ಭಟ್ ಅವರು ತಿಳಿ ಸಿದರು.
ರಾಜ್ಯದ ಅಲ್ಪ ಸಂಖ್ಯಾ ತರಿಗೆ ಆರ್ಥಿಕ ಚೈತನ್ಯ ನೀಡಲು, ಆರ್ಥಿಕ ಸ್ವಾವ ಲಂಬನೆ ಸಾಧಿಸಲು ಸರಕಾರ ಸಾಕಷ್ಟು ಅನುದಾನ ನೀಡಲು ಸಿದ್ಧವಿದೆ. ಜತೆಗೆ ಅಲ್ಪಸಂಖ್ಯಾತರು ಶಿಕ್ಷಣ ಕ್ಷೇತ್ರದಲ್ಲಿ ಸಬಲೀಕರಣ ಹೊಂದಲು ಸರಕಾರ ಬೆಂಬಲ ನೀಡಲಿದೆ. ಸಾಲ ಪಡೆದವರು ಅದನ್ನು ಸದ್ಬಳಕೆ ಮಾಡಲು ಸೂಕ್ತ ತರಬೇತಿ ನೀಡಬೇಕೆಂದರು.
ಮುಖ್ಯ ಅತಿಥಿ ಸ್ಥಾನ ದಿಂದ ಮಾತ ನಾಡಿದ ಶಾಸಕ ಯು.ಟಿ.ಖಾದರ್ ನಿಗ ಮದಿಂದ ದೊರ ಕುವ ಸೌಲಭ್ಯ ಗಳನ್ನು ಸದು ಪಯೋಗ ಪಡಿಸಿ ಕೊಂಡು ಚಾಕ ಚಕ್ಯತೆ ಯಿಂದ ಸ್ವಾವ ಲಂಬಿ ಬದುಕು ಸಾಗಿಸ ಬೇಕು ಎಂದರು. ಉದ್ದಿಮೆ ಯಾಗಿ ಅಭಿ ವೃದ್ಧಿ ಹೊಂದಲು ಇನ್ಫೊ ಸಿಸ್ ನಮಗೆ ಮಾದರಿ ಯಾಗಿದೆ ಎಂದೂ ಹೇಳಿದರು.ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಸದಸ್ಯ ಫ್ರಾಂಕ್ಲಿನ್ ಮೊಂತೆರೊ ಮಾತನಾಡಿದರು. ಕಾರ್ಯ ಕ್ರಮ ಉದ್ಘಾ ಟಿಸಿದ ಕರ್ನಾ ಟಕ ಮೀನು ಗಾರಿಕಾ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್ ಮಾತ ನಾಡಿ ರಾಜ್ಯ ಸರ ಕಾರ ಅಲ್ಪ ಸಂಖ್ಯಾ ತರಿ ಗಾಗಿ ಜಾರಿ ಗೊಳಿ ಸಿರುವ ಕಾರ್ಯ ಕ್ರಮ ಗಳು ಮಾದರಿ ಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ದ.ಕ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯ ಜೆರಾಲ್ಡ್ ಡಿಸೋಜ, ಪ್ರಧಾನ ಮಂತ್ರಿಗಳ 18 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸದಸ್ಯ ಅಶೋಕ್ ಗೋವಿಯಸ್ ಮುಖ್ಯ ಅತಿಥಿಗಳಾಗಿದ್ದರು.ರಾಜ್ಯದ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ಎನ್.ಬಿ.ಅಬೂ ಬಕ್ಕರ್ ಪ್ರಾಸ್ತಾ ವಿಕ ಭಾಷಣ ಮಾಡಿ ದರು. ನಿಗ ಮದ ಜಿಲ್ಲಾ ವ್ಯವ ಸ್ಥಾಪಕ ಎಸ್.ಡಿ.ಸೋ ಮಪ್ಪ ಸ್ವಾಗ ತಿಸಿ ದರು. ಉಡುಪಿ ಜಿಲ್ಲಾ ವ್ಯ ವಸ್ಥಾ ಪಕ ಶ್ರೀ ಧರ ಭಂಡಾರಿ ವಂದಿ ಸಿದರು.ಕಾರ್ಯ ಕ್ರಮದಲ್ಲಿ 825 ಫಲಾನುಭವಿಗಳಿಗೆ ರೂ.138.32 ಲಕ್ಷ ಸಾಲ ಮಂಜೂರಾತಿಯ ಚೆಕ್ ಗಳನ್ನು ನೀಡಲಾಯಿತು.

Friday, April 20, 2012
ಮನೆಗಳಲ್ಲಿ ಮಳೆಕೊಯ್ಲು ಅಗತ್ಯ:ಶೈಲಜಾ ಭಟ್
ಮಂಗಳೂರು,ಏಪ್ರಿಲ್.20: ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಮಳೆ ಕೊಯ್ಲು ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಅಭಿಪ್ರಾಯ ಪಟ್ಟಿದ್ದಾರೆ.ಅವರು ಗುರುವಾರ ಬಂಟ್ವಾಳ ತಾಲೂಕಿನ ಬಾಳೆಪುಣಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ನಮ್ಮ ಮನೆಯೂ ಸೇರಿ ದಂತೆ ಇಡ್ಕಿದು ಗ್ರಾಮ ಪಂಚಾ ಯತು ವ್ಯಾಪ್ತಿ ಯಲ್ಲಿ ಅನೇಕ ಮನೆ ಗಳಲ್ಲಿ ಮಳೆ ಕೊಯ್ಲು ಇದೆ. ಇದ ರಿಂದ ವಿದ್ಯುತ್ ಉಳಿ ತಾಯ ವಾಗುತ್ತದೆ. ಮನೆ ಯಲ್ಲಿ ವರ್ಷದ ಆರು ತಿಂಗಳು ಮಳೆ ನೀರನ್ನೇ ಉಪ ಯೋಗಿಸ ಲಾಗುತ್ತಿದೆ ಎಂದು ಶೈಲಜಾ ಭಟ್ ತಿಳಿಸಿದರು.ಕೊಳವೆ ಬಾವಿಯ ನೀರು ತಾತ್ಕಾ ಲಿಕ ವ್ಯವಸ್ಥೆ ಯಾಗಿದೆ. ಶಾಶ್ವತ ಕುಡಿ ಯುವ ನೀರಿನ ಸೌಲಭ್ಯ ಕ್ಕಾಗಿ ಬಹು ಗ್ರಾಮ ಕುಡಿ ಯುವ ನೀರಿನ ಯೋಜನೆ ಗಳನ್ನು ಸಿದ್ದ ಪಡಿಸಿ ಮಂಜೂ ರಾತಿ ಗಾಗಿ ಸರ ಕಾರಕ್ಕೆ ಕಳು ಹಿಸಿ ಕೊಡ ಲಾಗಿದೆ ಎಂದು ಭಟ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ಎಲ್ಲಾ ಸೌಲಭ್ಯಗಳು ಮತ್ತು ಯೋಜನೆಗಳು ಗ್ರಾಮ ಪಂಚಾಯತ್ ಮೂಲಕ ಜಾರಿಯಾಗುವ ದಿನಗಳು ಹತ್ತಿರವಾಗುತ್ತಿವೆ. ಅಂತಹ ಸಂದರ್ಭದಲ್ಲಿ ಸುಸಜ್ಜಿತ ಸ್ಥಳಾವಕಾಶ ಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಎಲ್ಲಾ ಗ್ರಾಮ ಪಂಚಾಯತುಗಳಿಗೆ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಮಂಜೂರು ಮಾಡಿದೆ ಎಂದರು.
ಗ್ರಾಮ ಪಂಚಾಯತುಗಳು ಆಯಾ ಪ್ರದೇಶದ ಹಿರಿಯರ ಅನುಭವವನ್ನು ಪಡೆದುಕೊಂಡು ಯುವಕರ ಶಕ್ತಿಯನ್ನು ಬಳಸಿಕೊಂಡು ಹಳ್ಳಿಗಳ ಅಭಿವೃದ್ಧಿ ಸಾಧಿಸ ಬೇಕು ಎಂದು ಶಾಸಕರು ಕರೆ ನೀಡಿದರು.
ಜಿಲ್ಲಾ ಪಂಚಾಯತು ಸದಸ್ಯ ಸಂತೋಷ್ಕುಮಾರ್ ರೈ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ,ತಾ.ಪಂ. ಸದಸ್ಯರಾದ ಪುಷ್ಪಲತಾ ಕರ್ಕೇರ, ಫಾತಿಮಾ ಹೈದರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಕಾರಿ ಅಭಿಯಂತರ ಎಂ.ಶಿವಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಬಂಟ್ವಾಳ ತಾಲೂಕಿನ 47 ಗ್ರಾಮ ಪಂಚಾಯತುಗಳ ಪೈಕಿ ರಾಜೀವ ಗಾಂಧಿ ಸೇವಾ ಕೇಂದ್ರದ ಕಾಮಗಾರಿಯನ್ನು ಪೂರ್ತಿಗೊಳಿಸ ಉದ್ಘಾಟಿಸಿದ ಐದನೇ ಗ್ರಾಮ ಪಂಚಾಯತು ಬಾಳೆಪುಣಿ. ಆರು ಗ್ರಾಮ ಪಂಚಾಯತುಗಳಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಶಿವಮೂರ್ತಿ ವಿವರಿಸಿದರು.
ಎಪಿಎಂಸಿ ಸದಸ್ಯ ಉಮ್ಮರ್ ಫಜೀರು, ಮಾಜಿ ಮಂಡಲ ಪ್ರಧಾನ ಎಚ್.ವಿಶ್ವನಾಥ ಕೊಂಡೆ, ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ತಿಲಕ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಕರ ಆಳ್ವ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಜನಾರ್ಧನ ಗಟ್ಟಿ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಬಶೀರ್ ಮತ್ತು ಸದಸ್ಯೆ ಶೋಭಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Wednesday, April 18, 2012
ಸಿಂಥೆಟಿಕ್ ಟ್ರ್ಯಾಕ್ ಗುಣಮಟ್ಟದಲ್ಲಿ ರಾಜಿ ಇಲ್ಲ: ಜಿಲ್ಲಾಧಿಕಾರಿ
ಮಂಗಳೂರು,ಏಪ್ರಿಲ್.18:ಮಂಗಳಾ ಕ್ರೀಡಾಂಗಣದಲ್ಲಿ ಅಳವಡಿಸುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಸ್ಪಷ್ಟಪಡಿಸಿದ್ದಾರೆ.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು, ಕಾರ್ಯಕ್ಷಮತೆ, ಸಿವಿಲ್ ಕಾಮಗಾರಿಗಳ ಬಗ್ಗೆ ಇಂಜಿನಿಯರ್ ಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ರಾಜ್ಯದ 2ನೇ ಸಿಂಥೆಟಿಕ್ ಟ್ಯ್ರಾಕ್ ಕ್ರೀಡಾಂಗಣ ಇದಾಗಿದ್ದು, ಅತ್ಯಂತ ಉತ್ಕೃಷ್ಟವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ತಾಂತ್ರಿಕ ಸಮಿತಿ ಮತ್ತು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ಕ್ಷೇತ್ರದಲ್ಲಿ ನೈಪುಣ್ಯ ಹೊಂದಿದವರು ಕಾಮಗಾರಿಯ ಬಗ್ಗೆ ಕಣ್ಣಿರಿಸಿದ್ದಾರೆ.'ಡಿ' ಆಕಾರ 23 ಮೀಟರ್ ಹೊಂದಿದ್ದು, ಡಿಸೈನ್ ನಲ್ಲಿ 20 ಮೀಟರ್ ಇತ್ತು. ಇದನ್ನು ಈಗಾಗಲೇ ಸರಿಪಡಿಸಲಾಗಿದೆ. ಕ್ರೀಡಾಂಗಣ ಹಾಗೂ ಕ್ರೀಡಾಳುಗಳ ಹಿತವನ್ನು ಗಮನದಲ್ಲಿರಿಸಲಾಗಿದೆ; ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ ಫೆಡರೇಷನ್ ನಿಯಮಾವಳಿಯಂತೆ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಒಟ್ಟು 1170.3 ಚದರ ಮೀಟರ್ ಗಳಿದ್ದು, ಡಿ ಏರಿಯಾ 23 ಮೀಟರ್ ಗಳಿದೆ. ಎಲ್ಲ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮಳೆಗಾಲದ ವೇಳೆ ಕಾಮಗಾರಿಯ ನಿರ್ವಹಣೆಗೆ ಅನುಕೂಲವಾಗುವಂತೆ ಸುವ್ಯವಸ್ಥಿತ ಚರಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಮಿತಿಯ ಅಧ್ಯಕ್ಷರಾದ ಎ ಮಂಜುನಾಥ್, ಕೃಷ್ಣ ಶೆಣೈ, ಅರುಣ್ ರಾವ್, ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪಾರ್ಶ್ವನಾಥ್ ಉಪಸ್ಥಿತರಿದ್ದರು.

2ನೇ ಸುತ್ತಿನ ಪಲ್ಸ್ ಪೊಲೀಯೋ % 98.10 ಸಾಧನೆ
ಮಂಗಳೂರು,ಎಪ್ರಿಲ್.18:ಪೊಲೀಯೋ ಮಾರಿಯನ್ನು ದೇಶದಿಂದ ಹೊರದೂಡುವ ರಾಷ್ಟ್ರೀಯ ಕಾರ್ಯಕ್ರಮ ಪಲ್ಸ್ ಪೊಲೀಯೋ ಕಾರ್ಯಕ್ರಮದನ್ವಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 15ರಿಂದ 17 ರ ವರೆಗೆ ಒಟ್ಟು 1,62,001 ಮಕ್ಕಳಿಗೆ ಪೊಲೀಯೋ ಲಸಿಕೆ ನೀಡುವ ಮೂಲಕಕ ಶೇಕಡಾ 98.10 ರಷ್ಟುಸಾಧನೆ ಮಾಡಲಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಓ.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.
ಎಪ್ರಿಲ್ 15 ರಂದು 1,40,576 ಮಕ್ಕಳಿಗೆ 16 ರ ಎರಡನೇ ದಿನ ಮನೆಮನೆಗೆ ಭೇಟಿ ನೀಡುವ ಮೂಲಕ 13544 ಹಾಗೂ ಎಪ್ರಿಲ್ 17 ರ ಮೂರನೇ ದಿನ 7881 ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿಯನ್ನು ನೀಡುವ ಮೂಲಕ ಒಟ್ಟಾರೆ ಶೇಕಡಾ 98.10 ಸಾಧನೆ ಸಾಧ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ವರ್ಷದೊಳಗಿನ 1,65,136 ಮಕ್ಕಳು ಇರುವ ಅಂದಾಜುಮಾಡಲಾಗಿತ್ತು.ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ 1,58,911 ಮನೆಗಳಿಗೆ ಭೇಟಿ ನೀಡಿ 6226 ಮಕ್ಕಳಿಗೆ ಬೂತ್ ಗಳಿಗೆ ಬಾರದವರಿಗೆ ಪಲ್ಸ್ ಪೊಲೀಯೋ ಹನಿ ನೀಡಲಾಗಿದೆ.

ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆ:ದ.ಕ.ಜಿಲ್ಲೆಗೆ ರೂ.59ಲಕ್ಷ
ಮಂಗಳೂರು,ಏಪ್ರಿಲ್.18: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯಡಿ ರೂ.59 ಲಕ್ಷ ಬಿಡುಗಡೆ ಅಗಿದ್ದು, ಈ ಹಣದಿಂದ ಮಕ್ಕಳ ಪುನರ್ವಸತಿ, ಶಿಕ್ಷಣ ಸೇರಿದಂತೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಸಂಜೆ ತಮ್ಮ ಕಛೇರಿಯಲ್ಲಿ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ನೀನಾ ನಾಯಕ್ ಅವರು ನಡೆಸಿದ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.ಜಿಲ್ಲೆಯಲ್ಲಿ ಕಂಡು ಬಂದಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ನಿಗಾ ವಹಿಸಲಾಗಿದ್ದು ಅಂತಹ ಮಕ್ಕಳ ಕುಟುಂಬಗಳಿಗೆ ಉತ್ತಮ ಪೌಷ್ಟಿಕ ಆಹಾರ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ತೀರಾ ಅಸ್ವಸ್ಥರಾಗಿದ್ದ 27 ಮಕ್ಕಳನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಿಶು ವೈದ್ಯರಿಂದ ವಿಶೇಷ ಕಾಳಜಿ ವಹಿಸಿ ಶೂಶ್ರುಷೆ ನೀಡಲಾಗುತ್ತಿದೆ, ಅಲ್ಲದೆ ಬಾಲ ಸಂಜೀವಿನಿ ಯೋಜನೆಯನ್ವಯ ಅವರ ಅರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲಿರುವ ಅಂಗನವಾಡಿಗಳು ಕಗ್ಗತ್ತಲಿನಲ್ಲಿವೆ ಎಂಬುದಾಗಿ ಸಾರ್ವಜನಿಕರೊಬ್ಬರು ದೂರಿದ ಬಗ್ಗೆ ಆಯೋಗದ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ಸಿ ಇ ಓ ರವರು ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯತ್ ಕ್ರಮ ಕೈಗೊಂಡಿದ್ದು ಇನ್ನು 3-4 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಾಜೀವ್ ಗಾಂಧಿ ಎನರ್ಜಿ ಯೋಜನೆಯನ್ವಯ ವಿದ್ಯುತ್ ಸಂಪರ್ಕಕಲ್ಪಿಸಲಾಗುವುದೆಂದು ಎಂದರು.
ಬಹುಮಹಡಿಗಳ ಕಟ್ಟಡಗಳ ಸಮೀಪ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ರಕ್ಷಣೆ ದೃಷ್ಟಿಯಿಂದ ಅಂತಹ ಸ್ಥಳಗಳಲ್ಲಿ ಅಂಗನವಾಡಿ ಅಥವಾ ಟೆಂಟ್ ಶಾಲೆಗಳನ್ನು ತರೆದು ಅವರಿಗೆ ರಕ್ಷಣೆ ಕೊಡುವುದಲ್ಲದೆ ಆಹಾರ ಸರಬರಾಜನ್ನು ಸಹ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ಶಿಕ್ಷಣ ಇಲಾಕೆ ಮುಂಜಾಗ್ರತೆ ವಹಿಸುವಂತೆ ಹಾಗೂ ಯಾವುದೇ ಖಾಸಗಿ ಶಾಲೆಗಳು ಏಪ್ರಿಲ್ 30ಕ್ಕೆ ಮುಂಚೆ ಶಾಲೆಗೆ ಪ್ರವೇಶಾತಿಯನ್ನು ಮಾಡಿಕೊಳ್ಳದಂತೆ ನೋಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿ ಡಾ. ಓ.ಶ್ರೀರಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್, ಮಕ್ಕಳ ನ್ಯಾಯ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾನಾಯಕ್ ಮುಂತಾದವರು ಹಾಜರಿದ್ದರು.

Tuesday, April 17, 2012
ಕಾಮಗಾರಿ ಪ್ರದೇಶದಲ್ಲೇ ಪ್ರಗತಿ ಪರಿಶೀಲನೆ: ರಾಮ್ ಪ್ರಸಾದ್
ಮಂಗಳೂರು, ಏಪ್ರಿಲ್.17: ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಕೊರಗರಿಗೆ ಆದ್ಯತೆಯ ನೆಲೆಯಲ್ಲಿ ಮನೆ ನೀಡುವ ಉದ್ದೇಶ ಜಿಲ್ಲಾಡಳಿತದಾಗಿದ್ದು, ಸರ್ಕಾರಿ ಭೂಮಿಯಲ್ಲಿ ವಾಸ್ತವ್ಯ ಇರುವ 305 ಕುಟುಂಬಗಳಿಗೆ ವಾಸ್ತವ್ಯ ಇರುವೆಡೆ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಜಿಲ್ಲಾ ಉಸ್ತು ವಾರಿ ಕಾರ್ಯ ದರ್ಶಿ ಬಿ ಎಸ್ ರಾಮ್ ಪ್ರಸಾದ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಪ್ರಗತಿ ಪರಿ ಶೀಲನಾ ಸಭೆ ಯಲ್ಲಿ ಜಿಲ್ಲೆ ಯಲ್ಲಿ ಆದ್ಯತೆ ಮೇರೆಗೆ ಆಗ ಬೇಕಿ ರುವ ಯೋಜನೆ ಗಳ ಬಗ್ಗೆ ವಿಸ್ತೃತ ಚರ್ಚೆ ನಡೆ ಯಿತು.
ಕೊರ ಗರ ಅಭಿವೃದ್ಧಿ ಸಭೆಯಲ್ಲಿ ಮನೆ ಹಾಗೂ ನಿವೇಶನದ ಕುರಿತೇ ಚರ್ಚೆ ನಡೆದು ಇನ್ನಾವುದೇ ಇತರ ವಿಷಯಗಳ ಚರ್ಚೆ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳ ಗಮನ ಸೆಳೆದರು.
ಈಗಾಗಲೇ ಜಿಲ್ಲಾ ಪಂಚಾಯತ್ ಈ ಸಂಬಂಧ ಸಮಗ್ರ ಸಮೀಕ್ಷೆ ನಡೆಸಿದ್ದು, ಮಂಗಳೂರಿನಲ್ಲಿ 205, ಬಂಟ್ವಾಳದಲ್ಲಿ 83, ಪುತ್ತೂರಿನಲ್ಲಿ 56, ಬೆಳ್ತಂಗಡಿಯಲ್ಲಿ 80, ಸುಳ್ಯದಲ್ಲಿ 22 ಕುಟುಂಬಗಳೂ ಸ್ವಂತ ನಿವೇಶನದಲ್ಲಿದೆ. ಅದೇ ರೀತಿ 1 ಮಂಗಳೂರಿನಲ್ಲಿ 89, ಬಂಟ್ವಾಳ 65,ಪುತ್ತೂರು 31,ಬೆಳ್ತಂಗಡಿ 12, ಸುಳ್ಯ 8 ಕುಟುಂಬಗಳು ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಇದ್ದಾರೆ. ಅರಣ್ಯ ಪ್ರದೇಶದಲ್ಲಿ ಅನುಕ್ರಮವಾಗಿ 7, 0, 3, 0, 0 ಕುಟುಂಬಗಳಿವೆ. ಇತರೆ ಪ್ರದೇಶದಲ್ಲಿ 102, 39, 10, 21, 2 ಕುಟುಂಬಗಳಿವೆ. ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಇರುವ 305 ಕುಟುಂಬಗಳಿಗೆ ಮನೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದ್ದು, ಇತರ 174 ಕುಟುಂಬಗಳು ಸರ್ಕಾರ ತೋರಿಸಿದ ಜಾಗದಲ್ಲಿ ವಾಸ್ತವ್ಯ ಮಾಡುವುದಿದ್ದರೆ ಅವರಿಗೂ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ವಸತಿ ಒದಗಿಸುವ ಯೋಜನೆಗಳ ಪ್ರಗತಿ ಕುಂಠಿತವಾಗಿದ್ದು, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು.
ಬುಡಕಟ್ಟು ಜನಾಂಗದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ ಮೂರು ಕೋಟಿ ರೂ.ಗಳಲ್ಲಿ 1.87 ಕೋಟಿ ರೂ. ಮಾತ್ರ ಖರ್ಚಾಗಿದ್ದು, ಮೇ 15 ರೊಳಗೆ ಉಳಿದ ಹಣವನ್ನು ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕೆ ಬಳಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮವನ್ನೊಳಗೊಂಡಂತೆ ನಾಲ್ಕು ನಿಗಮಗಳ ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ತೃಪ್ತಿದಾಯಕವಾಗಿಲ್ಲ ಎಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬಾವಿಗಳಲ್ಲಿ ವಿದ್ಯುತ್ ಸಂಪರ್ಕ ಕೊಡದೆ ಹಲವು ನಿಷ್ಪ್ರಯೋಜಕವೆನಿಸಿದೆ. ಮೆಸ್ಕಾಂ ಮತ್ತು ನಿಗಮಗಳು ಪರಸ್ಪರ ಸಮನ್ವಯ ಸಾಧಿಸಿ ಯೋಜನೆಗಳ ಸದ್ಬಳಕೆಯಾಗಬೇಕಿದೆ ಎಂದರು.ಕಲುಷಿ ತವ ಲ್ಲದ ಕುಡಿ ಯುವ ನೀರು ಪೂರೈಕೆ, ಶುದ್ಧ ನೀರಿನ ಮೂಲ ಗಳ ಸಂ ರಕ್ಷಣೆ ಹಾಗೂ ವಿತ ರಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸ ಬೇಕಿದೆ. ಮುಖ್ಯ ಮಂತ್ರಿ ಗಳು ವೈ ಯಕ್ತಿಕ ಜವಾ ಬ್ದಾರಿ ಯನ್ನು ಈ ಸಂ ಬಂಧ ನಿಗದಿ ಪಡಿ ಸಿದ್ದಾರೆ. ಹಾಗಾಗಿ ನೀರಿನ ಬಗ್ಗೆ ನಿಗಾ ವಹಿ ಸಲು ಅಧಿ ಕಾರಿ ಗಳಿಗೆ ಅವರು ಸೂಚನೆ ನೀಡಿ ದರು.
ಇದೇ ಪರಿಸ್ಥಿತಿ ಮುಂದುವರಿದರೆ ಮೇ ತಿಂಗಳಲ್ಲಿ ನಗರಕ್ಕೆ ನೀರು ಪೂರೈಕೆ ಸವಾಲಾಗಲಿದೆ ಎಂದು ಮನಾಪ ಆಯುಕ್ತರು ಹೇಳಿದರು. ತುಂಬೆ ಅಣೆಕಟ್ಟು ಕಾಮಗಾರಿಯನ್ನು 2013 ಡಿಸೆಂಬರ್ ಒಳಗೆ ಸಂಪೂರ್ಣ ಗೊಳಿಸುವುದಾಗಿ ವಾಟರ್ ಬೋರ್ಡ್ ಅಧಿಕಾರಿ ಸಭೆಗೆ ತಿಳಿಸಿದರು. ಜೂನ್ ವರೆಗೆ ಅಣೆಕಟ್ಟಿನ ಕಾಮಗಾರಿ ಪ್ರಗತಿಯನ್ನು ಗಮನಿಸಿ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಕಾರ್ಯದರ್ಶಿಗಳು ನೀಡಿದರು,
ತುಂಬೆ ಅಣೆಕಟ್ಟು ನಿರ್ಮಾಣ ಕಾಮಗಾರಿ ವೆಚ್ಚ 45 ಕೋಟಿಯಿಂದ 75 ಕೋಟಿಗೆ ಹೆಚ್ಚಿದ್ದು, ಈಗಾಗಲೇ ಪಾಲಿಕೆ 11 ಕೋಟಿ ರೂ.ಗಳನ್ನು ನೀಡಿದ್ದು, 10 ಕೋಟಿ ರೂ.ಗಳ ಕಾಮಗಾರಿ ಮುಗಿದಿದ್ದು 15 ದಿನಗಳೊಳಗೆ ಒಂದು ಕೋಟಿ ರೂ. ಗಳ ಕಾಮಗಾರಿ ಮುಗಿಯಲಿದೆ ಎಂದರು. ಮೂರನೇ ಒಂದು ಭಾಗ ಪಾಲಿಕೆ, ಮತ್ತೆ ಮೂರನೇ ಒಂದು ಭಾಗ ಎಸ್ ಎಫ್ ಸಿ ಅನುದಾನ ಮತ್ತೆ ಉಳಿದದ್ದು ಹೆಚ್ಚುವರಿ ಅನುದಾನದಡಿ ನೀಡಲಾಗುವುದು.
ಸರ್ಕಾರಿ ಬೋರ್ ವೆಲ್ ನಿಂದ ವಾಣಿಜ್ಯ ಬಳಕೆಗೆ ನೀರೆತ್ತದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದೂ ಅವರು ನಿರ್ದೇಶನ ನೀಡಿದರು. ಲೋಕೋಪಯೋಗಿ ರಸ್ತೆ, ಕೆ ಆರ್ ಡಿಸಿಎಲ್ ನ ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು, ತಮ್ಮ ಮುಂದಿನ ಅಭಿವೃದ್ಧಿ ಪರಿಶೀಲನಾ ಸಭೆ ಅಭಿವೃದ್ಧಿ ಕಾಮಗಾರಿ ನಡೆದ ಪ್ರದೇಶಕ್ಕೆ ಖುದ್ದು ತೆರಳಿ ನಡೆಸುವುದಾಗಿ ಹೇಳಿದರು.
'ಸಕಾಲ' ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನೋಡಲ್ ಅಧಿಕಾರಿಗಳು ಆಯಾಯ ದಿನಗಳಂದೆ ಅರ್ಜಿಗಳ ವಿಲೇ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಿ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಇಂದು ಪುನರುಚ್ಚರಿಸಿದರು. ಸಮಾಜ ಕಲ್ಯಾಣ ಇಲಾಖೆ ಪ್ರಗತಿ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು, ಪುತ್ತೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಉವರ್ಾ ಸ್ಟೋರ್ ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಬಗ್ಗೆ ವಿಚಾರಿಸಿದರು. ಆಹಾರ ಇಲಾಖೆಯಲ್ಲಿ 13.212ರವರೆಗೆ 42 206 ಪಡಿತರ ಅರ್ಜಿಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸಲಾಗಿದ್ದು, 1225 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂದು ಉಪನಿರ್ದೇಶಕರು ಹೇಳಿದರು.
ಇನ್ನು ಎಲ್ ಪಿ ಜಿ ಕನೆಕ್ಷನ್ ಗೆ ಸಂಬಂಧಿಸಿದಂತೆ 10,000 ಅರ್ಜಿಳು ಬಂದಿದ್ದು, 4,000 ಕನೆಕ್ಷನ್ ಕಡಿತಗೊಳಿಸಿದ್ದು, 20 ತಾರೀಖಿನವರೆಗೆ ಸೂಕ್ತ ದಾಖಲೆ ಒದಗಿಸಿ ಸಂಪರ್ಕ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಉಪನಿರ್ದೇಶಕರು ಹೇಳಿದರು.
ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನಿದ್ದು, ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಸುಫಲಾ ರಸಗೊಬ್ಬರ ಜಾಸ್ತಿ ಬೇಕು. 12-13 ನೇ ಸಾಲಿಗೆ ಮುಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಒಟ್ಟು 1750 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ನೀಡಲಾಗಿದ್ದು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸಿ ಯಾವುದೇ ಕೊರತೆಯಾಗದಂದತೆ ನೋಡಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪವರ್ ಟಿಲ್ಲರ್ ಗೆ ಹೆಚ್ಚಿನ ಬೇಡಿಕೆ ಇದ್ದು 68 ಪವರ್ ಟಿಲ್ಲರ್ ಗಳನ್ನು ಒದಗಿಸಲಾಗಿದ್ದು, ಇನ್ನು 17 ಪವರ್ ಟಿಲ್ಲರ್ ನ್ನು ಪೂರೈಸಬೇಕಿದೆ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ಆಸ್ತಿ ಜಫ್ತಿ ಮಾಡುವಂತಹ ಕ್ರಮವನ್ನು ಸಹಕಾರಿ ಬ್ಯಾಂಕ್ ಗಳು ಕೈಗೊಳ್ಳಬಾರದು ಎಂದು ರಾಮ್ ಪ್ರಸಾದ್ ಅವರು ನಿರ್ದೇಶನ ನೀಡಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತ ಕಿಂಡಿ ಅಣೆಕಟ್ಟುಗಳ ಕಾಮಗಾರಿಯನ್ನು ಮುಂದಿನ ಭೇಟಿಯ ವೇಳೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ನುಡಿದರು.
ಸಭೆಯಲ್ಲಿ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ ಎಸ್ ಬಾಲಕೃಷ್ಣ ಉಪಸ್ಥಿತರಿದ್ದರು.

Monday, April 16, 2012
ಎನ್ ಆರ್ ಡಿ ಪಿ ಯೋಜನೆ ಶೇ 98 ಸಾಧನೆ- ಕೆಡಿಪಿ ಸಭೆ
ಮಂಗಳೂರು,ಏಪ್ರಿಲ್.16:2011-12ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್ ಆರ್ ಡಿ ಪಿ) ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್ಗೆ ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆಯಾಗಿದ್ದ 39.17 ಕೋಟಿ ರೂ.ಗಳಲ್ಲಿ 39.06 ಕೋಟಿ ರೂ. ಗಳನ್ನು ಯೋಜನಾ ಅನುಷ್ಠಾನಗಳಿಗೆ ವ್ಯಯ ಮಾಡಲಾಗಿದೆ.ಇಂದು ಜಿಲ್ಲಾ ಪಂಚಾಯತ್ ನಲ್ಲಿ ಅಧ್ಯಕ್ಷ ರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕೆಡಿಪಿ ಸಭೆಗೆ ಪಂಚಾ ಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಸತ್ಯ ನಾರಾಯಣ ಅವರು ಈ ಮಾಹಿತಿಯನ್ನು ನೀಡಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್ ಆರ್ ಡಿ ಪಿ)ಯಡಿ ಒಟ್ಟು 1,442 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 39.17 ಕೋಟಿ ರೂ. ಅನುದಾನ ಬಂದಿತ್ತು. ಪೈಪ್ ವಾಟರ್ ಸಪ್ಲೈ ಸ್ಕೀಮ್, ಮಿನಿ ವಾಟರ್ ಸಪ್ಲೈ ಸ್ಕೀಮ್, ಸ್ಕೂಲ್ ವಾಟರ್ ಸಪ್ಲೈ ಸ್ಕೀಮ್ ಹಾಗೂ ಜಲಮೂಲ ನಿರಂತರತೆ ಕಾಪಾಡುವಿಕೆ ಯೋಜನೆಯಡಿ ಬಿಡುಗಡೆ ಯಾದ ಎಲ್ಲಾ ಕಾಮಗಾರಿಗಳನ್ನು ಆರಂಭಿಸಲಾಗಿದೆ.
781 ಕಾಮಗಾರಿಗಳು ಮುಂದುವರಿದ ಕಾಮಗಾರಿ ಹಾಗೂ 681 ಹೊಸ ಕಾಮಗಾರಿಗಳಲ್ಲಿ 5 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಜಲಮೂಲ ನಿರಂತರತೆ ಕಾಯ್ದು ಕೊಳ್ಳುವ ಯೋಜನೆಯಡಿಯಲ್ಲಿ 78 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಚೆಕ್ ಡ್ಯಾಮ್ ಮತ್ತು ವೆಂಟೆಡ್ ಡ್ಯಾಮ್ ಗಳು ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದರು.
ಬಂಟ್ವಾಳ ಮತ್ತು ಮಂಗಳೂರು ತಾಲೂಕು ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ನೀರಿನ ಕ್ಷಾಮ ಎದುರಿಸುತ್ತಿದ್ದು ಜಿಲ್ಲೆಯ ಜಲಮೂಲಗಳಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ನೀರು ನಿರ್ವಹಣೆ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸಿ ಸಮಗ್ರ, ಮಾದರಿ ಯೋಜನೆಗಳನ್ನು ನೀಡುವಂತಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇಒ ಗಳು ತಕ್ಷಣವೇ ಸ್ಪಂದಿಸಬೇಕು; ಮಾಧ್ಯಮಗಳ ವರದಿಗಳನ್ನು ನೋಡಿ ನೀರಿನ ಸಮಸ್ಯೆ ಬಗ್ಗೆ ಬಂದ ವರದಿಗಳು ಸಾರ್ವಜನಿಕರ ಸಮಸ್ಯೆಗಳೆಂಬುದನ್ನು ಅರ್ಥೈಸಿಕೊಂಡು ಸ್ಪಂದಿಸಬೇಕು ಎಂದು ಸೂಚಿಸಿದ ಸಿಇಒ ಅವರು, ಈಗಾಗಲೇ ಟಾಸ್ಕ್ ಫೋರ್ಸ್ ನಿಂದ ಬಿಡುಗಡೆ ಮಾಡಿರುವ ಹಣವನ್ನು ತುರ್ತು ನೀರು ಒದಗಿಸಲು ಉಪಯೋಗಿಸಿಕೊಳ್ಳಬೇಕೆಂದರು. ನೀರು ನಿರ್ವಹಣೆ ಮತ್ತು ಸಂಗ್ರಹಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು.ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಗಳು ನಡೆಯುವ ವೇಳೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವ ಹಿಸು ವುದರಿಂದ ಪರೀಕ್ಷಾ ಹಾಲ್ ನಲ್ಲಿ ಪರೀಕ್ಷೆ ಬರೆಯುವ ವೇಳೆ ಅನಾ ರೋಗ್ಯ ಪೀಡಿತ ಮಕ್ಕಳಿಗೆ ತಕ್ಷಣ ವೈದ್ಯಕೀಯ ನೆರವು ನೀಡ ಬಹುದು ಎಂಬ ಅಂಶವನ್ನು ಇಲಾಖೆಗಳು ಮನಗಾಣ ಬೇಕೆಂದು ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂದರ್ಭ ಲೇಡಿಹಿಲ್ ಶಾಲೆಯಲ್ಲಿ ನಡೆದ ಘಟನೆಯನ್ನು ಸಿಇಒ ಅವರು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 6ರಿಂದ 14 ವರ್ಷದವರೆಗಿನ ದೈಹಿಕ ವಿಕಲಚೇತನ ಮಕ್ಕಳನ್ನು ಗುರುತಿಸ ಲಾಗಿದ್ದು, ಈ ಮಕ್ಕಳಿಗೆ ಸಹಕಾರ ಸಂಘಗಳ ಉಪನಿಬಂಧಕರ ಸಹಕಾರ ಹಾಗೂ ವಿಶೇಷ ಮುತುವರ್ಜಿಯಿಂದ ಎಲ್ಲ ಮಕ್ಕಳನ್ನು ದತ್ತು ಸ್ವೀಕರಿಸಿ ಅವರನ್ನು ಸಬಲೀಕರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಇಂದು ಜಿಲ್ಲಾ ಪಂಚಾಯತ್ ನಲ್ಲಿ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೂಚಿಸಿದರು.
ಹಲವು ಬಾರಿ ಈ ಕುರಿತು ಅಧಿಕಾರಿಗಳಿಗೆ ಮೌಖಿಕ ಎಚ್ಚರಿಕೆ ನೀಡಿದ್ದರೂ, ಮಾಹಿತಿ ಇಲ್ಲದೆ ಸಭೆಗೆ ಹಾಜರಾಗುವುದು, ಅಧಿಕಾರಿಗಳು ಗೈರು ಹಾಜರಾಗುವುದು ಮುಂದುವರಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದ ಅಧ್ಯಕ್ಷರು, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಕುರಿತ ಸಭೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ವಿಚಾರಿಸಿದಾಗ ಉತ್ತರ ನೀಡಬೇಕಾದ ಬದ್ಧತೆ ತನಗಿದೆ; ಹಾಗಾಗಿ ಅಭಿವೃದ್ಧಿ ಕಾರ್ಯಗಳ ಸಮಗ್ರ ಮಾಹಿತಿ ತನಗೆ ಅಗತ್ಯವಾಗಿದೆ ಬೇಕಿದೆ ಎಂದರು.
ಮುಂದಿನ ಸಭೆಯಲ್ಲಿ ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳನ್ನು ನಿರ್ಧಾಕ್ಷಿಣ್ಯವಾಗಿ ಹೊರಗೆ ಕಳುಹಿಸಲಾಗುವುದು ಎಂದೂ ಅಧ್ಯಕ್ಷರು ಹೇಳಿದರು.
'ಸಕಾಲ' ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಕಾಲದ ಕುರಿತು ಸಮಗ್ರ ಮಾಹಿತಿಯೊಡನೆ ಸಭೆಗೆ ಹಾಜರಾಗಬೇಕು. ಮೊದಲಿಗೆ ಸಕಾಲದ ಮಾಹಿತಿಯನ್ನು ಸಭೆಗೆ ನೀಡಬೇಕೆಂದು ಸಿಇಒ ಅವರು ಹೇಳಿದರು.
ಇಂದಿರಾ ಆವಾಸ್ ಯೋಜನೆ ಪ್ರಗತಿ ಬಗ್ಗೆ, ಕೊರಗರ ಮನೆ ನೀಡುವ ಬಗ್ಗೆಗಿನ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರ್ಹರಿಗೆ ಸೌಲಭ್ಯಗಳು ದೊರಕಬೇಕೆಂದರು.
ಎಲ್ಲ ಗ್ರಾಮಪಂಚಾಯತ್ ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇಗೆ ಕೈಗೊಂಡಿರುವ ಕ್ರಮಗಳನ್ನು ತಕ್ಷಣವೇ ನೀಡಬೇಕೆಂದ ಸಿಇಒ ಅವರು ಲೋಕ್ ಅದಾಲತ್ ನಲ್ಲಿ ನಾವು ಉತ್ತರನೀಡಬೇಕಿದೆ. ತ್ಯಾಜ್ಯ ವಿಲೇಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಡಾ ಬಿ ಆರ್ ಅಂಬೇಡ್ಕರ್ ನಿಗಮವನ್ನೊಳಗೊಂಡಂತೆ ಒಟ್ಟು ನಾಲ್ಕು ನಿಗಮಗಳ ಸಭೆಯನ್ನು ತಕ್ಷಣವೇ ಕರೆದು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ಸಿಇಒ ಹೇಳಿದರು.
ಬಂಟ್ವಾಳದಲ್ಲಿ ಆರಂಭಿಸಲಾಗುವ ಆಡು ಸಾಕಾಣಿಕೆ ವಲಯ ರಾಜ್ಯಕ್ಕೆ ಮಾದರಿಯಾಗಬೇಕೆಂದ ಸಿಇಒ ಅವರು, ಇದಕ್ಕೆ ಪಶುಪಾಲನಾ ಇಲಾಖೆಯ ಸಂಪೂರ್ಣ ಸಹಕಾರ ಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಗೋಸ್ಕರ ನಿರ್ಮಿತಿ ಇಲಾಖೆ ನಿರ್ಮಿಸುವ ಕಟ್ಟಡಗಳು ಸಮಯಮಿತಿಯೊಳಗೆ, ಗುಣಮಟ್ಟಕ್ಕೆ ಆದ್ಯತೆ ನೀಡಿ ನಿರ್ಮಾಣವಾಗಬೇಕೆಂದು ಸಿಇಒ ನಿರ್ಮಿತಿಯವರಿಗೆ ಸೂಚಿಸಿದರು.
12-13 ನೇ ಸಾಲಿನ ಜಿಲ್ಲಾ ಪಂಚಾಯತ್ ನ ಯೋಜನಾ ಕಾರ್ಯಕ್ರಮಗಳಿಗೆ 150.62 ಕೋಟಿ ರೂ. ಕ್ರಿಯಾಯೋಜನೆಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 84.64ಕೋಟಿ ರಾಜ್ಯದ ಪಾಲು, 65.98 ಕೋಟಿ ಕೇಂದ್ರದ ಪಾಲು. ಕಳೆದ ಸಾಲಿಗಿಂತ 39.95 ಕೋಟಿ ರೂ. ಹೆಚ್ಚಿನ ಕ್ರಿಯಾಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಲಭ್ಯವಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೇನಾಲ, ಮುಖ್ಯ ಯೋಜನಾಧಿಕಾರಿ ನಜೀರ್, ಯೋಜನಾ ನಿರ್ದೇಶಕರಾದ ಸೀತಮ್ಮ, ಉಪಕಾರ್ಯದರ್ಶಿ ಶಿವರಾಮೇಗೌಡ, ಮುಖ್ಯ ಲೆಕ್ಕಾಧಿಕಾರಿ ಶೇಕ್ ಲತೀಫ್ ಉಪಸ್ಥಿತರಿದ್ದರು.

Saturday, April 14, 2012
ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ತುರ್ತಾಗಿ ರೂ.197 ಲಕ್ಷ ರೂ.
ಮಂಗಳೂರು,ಏಪ್ರಿಲ್.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವನ್ನು ನಿರ್ವಹಿಸಲು ತುರ್ತಾಗಿ ರೂ. 197 ಲಕ್ಷ ರೂ.ಗಳ ಅಗತ್ಯ ಇದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.
ಅವರು ಇಂದು ದ.ಕ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸನ್ಮಾನ್ಯ ವಿಧಾನಸಭಾ ಉಪಾಧ್ಯಕ್ಷರಾದ ಎನ್..ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಭೆಯಲ್ಲಿ ಈ ವಿಷಯ ತಿಳಿಸಿದರು.ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪ ಸ್ಥಿತಿ ಯಲ್ಲಿ ಜಿಲ್ಲಾ ಮಟ್ಟದ ಅಧಿಕಾ ರಿಗಳ ಸಭೆಯಲ್ಲಿ ನಗರ ಮತ್ತು ಗ್ರಾ ಮೀಣ ಪ್ರದೇಶ ಗಳಲ್ಲಿ ಕುಡಿ ಯುವ ನೀರಿನ ಕುರಿತ ಸಭೆ ಯಲ್ಲಿ ಸಮಸ್ಯೆ ನಿರ್ವ ಹಣೆ ಕುರಿತು ಸವಿ ವರ ಸಭೆ ನಡೆ ಸಲಾ ಯಿತು. ಈಗಾ ಗಲೇ ಸಮಸ್ಯೆ ಗಳಿಗೆ ಸ್ಪಂ ದಿಸಲು ತುರ್ತು ಕ್ರಮ ಗಳನ್ನು ಕೈ ಗೊಂಡ ಬಗ್ಗೆ ಜಿಲ್ಲಾ ಧಿಕಾ ರಿಗಳು ಉಪ ಸಭಾ ಧ್ಯಕ್ಷರ ಗಮನ ಸೆಳೆದರು.
ಜಿಲ್ಲೆಯ 275 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿದ್ದು, ಮಂಗಳೂರು ತಾಲ್ಲೂಕಿನಲ್ಲಿ 90 ಗ್ರಾಮಗಳಲ್ಲಿ ಸಮಸ್ಯೆ ಇದೆ ಇವುಗಳಲ್ಲಿ 31 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿ ನಿತ್ಯ 1.12ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ, ಅಂತೆಯೇ ಬಂಟ್ವಾಳ ತಾಲ್ಲೂಕಿನಲ್ಲಿ 74 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿದಿನ 30ಸಾವಿರ ಲೀಟರ್ ನೀರನ್ನು ಒದಗಿಸಲಾಗುತ್ತಿದೆ.ಜಿಲ್ಲೆಯ 275 ಕುಡಿ ಯುವ ನೀರಿನ ಸಮಸ್ಯೆ ಇರುವ ಗ್ರಾಮ ಗಳಿಗೆ ನೀರು ಒದಗಿ ಸಲು ಟಾಸ್ಕ ಫೋರ್ಸ್ ನಿಂದ ರೂ.60 ಲಕ್ಷ, ಹಾಗೂ ಜಿಲ್ಲಾ ಪಂಚಾ ಯತ್ ನಿಂದ ರೂ.20 ಲಕ್ಷ ಹಣ ಬಿಡು ಗಡೆ ಯಾಗಿದೆ. ಕುಡಿ ಯುವ ನೀರಿನ ಸಂಕಷ್ಟ ಎದು ರಿಸುವ ಗ್ರಾಮ ಗಳಿಗೆ ಟ್ಯಾಂ ಕರ್ ಮೂಲಕ ನೀರು ಒದ ಗಿಸಲು ಪ್ರತಿ ಗ್ರಾಮ ಪಂಚಾ ಯತ್ ಗೆ ತಲಾ ರೂ2ಲಕ್ಷ ದಂತೆ ವಿನಿಯೋಗಿಸಲು ಅವಕಾಶ ನೀಡಲಾಗಿದೆ ಎಂದು ಸಿಇಓ ಅವರು ತಿಳಿಸಿದರು..
ಜಿಲ್ಲೆಯ ಮಳವೂರು ಮತ್ತು ಕಿನ್ನಿಗೋಳಿ ಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತಂದು 26 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯ ಇತರೆ ಗ್ರಾಮಗಳಿಗೂ ಬಹುಗ್ರಾಮ ಕುಡಿಯುವನೀರು ಯೋಜನೆ ತರುವ ಉದ್ದೇಶದಿಂದ ಈಗಾಗಲೇ ಇಂತಹ 32 ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ರೂ. 541ಕೋಟಿ ವೆಚ್ಚದಲ್ಲಿ ಅನುಷ್ಟಾನಕ್ಕೆ ತರುವ ಮೂಲಕ 176 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಬಹುದಾಗಿದೆ ಎಂದೂ ಸಿಇಒ ಅವರು ಹೇಳಿದರು. ಇದರಿಂದ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರು ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ವಿನಂತಿಸಿದರು.
ಜಿಲ್ಲೆಯಲ್ಲಿ ತುರ್ತಾಗಿ ಕುಡಿಯುವ ನೀರು ಕಾಮಗಾರಿಗಳನ್ನು ಕೈಗೊಳ್ಳಲು ರೂ.6 ಕೋಟಿಗಳ ಅನುದಾನವನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಮಾನ್ಯ ಮುಖ್ಯಮಂತ್ರಿಗಳನ್ನು ವಿನಂತಿಸಿದ್ದಾರೆ ಎಂದು ಸಿಇಓ ಅವರು ಸಭೆಗೆ ತಿಳಿಸಿದರು.ಹೀಗೆ ಮಳೆ ಬಾರ ದಿದ್ದಲ್ಲಿ ಮುಂದಿನ ದಿನ ಗಳಲ್ಲಿ ಜಿಲ್ಲೆ ಯಲ್ಲಿ ಕುಡಿ ಯುವ ನೀರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾ ಗಲಿದೆ ಆದರಿಂದ ತುರ್ತಾ ಗಿ ರೂ.2 ಕೋಟಿ ಗಳ ಅನು ದಾನ ವನ್ನು ಜಿಲ್ಲೆಗೆ ಬಿಡು ಗಡೆ ಮಾಡಿ ಸುವಂತೆ ಜಿಲ್ಲಾ ಧಿಕಾರಿ ಡಾ|ಎನ್.ಎಸ್. ಚನ್ನಪ್ಪ ಗೌಡ ಅವರು ಯೋ ಗೀಶ್ ಭಟ್ ಹಾಗೂ ಸಂಸದ ರಾದ ನಳಿನ್ ಕುಮಾರ್ ಕಟೀಲ್ ಅವ ರಲ್ಲಿ ಮನವಿ ಮಾಡಿ ದರು.
ತಾಲೂಕುಗಳಲ್ಲಿ ನೀರು ನಿರ್ವಹಣೆಗೆ ಹಾಗೂ ಜನರ ಸಮಸ್ಯೆ ಆಲಿಸಲು ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇಒ ಮತ್ತು ಪಿಡಿಒ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳು ನೇರ ಜವಾಬ್ದಾರರು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ 38ಎಮ್,ಜಿ.ಡಿ. ನೀರನ್ನು ನಾಗರಿಕರಿಗೆ ಒದಗಿಸಲಾಗುತ್ತಿತ್ತು, ಆದರೆ ಈಗ ನೀರಿನ ಅಭಾವ ಇರುವುದರಿಂದ ಪ್ರತಿನಿತ್ಯ 24 ಎಮ್.ಜಿ.ಡಿಗಳಷ್ಟು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ, ನಗರದಲ್ಲಿ ವಿಶೇಷವಾಗಿ ಎತ್ತರದ ಗುಡ್ಡೆ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ತೊಂದರೆ ಆಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಅವರು ಸಭೆಯ ಅಧ್ಯಕ್ಷರಿಗೆ ತಿಳಿಸಿದರು.
ಮುಲ್ಕಿ, ಸುರತ್ಕಲ್ ಪ್ರದೇಶಗಳಿಗೆ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಯೋಗೀಶ್ ಭಟ್ ಅವರು ಆಯುಕ್ತರ ಗಮನ ಸೆಳೆದಾಗ ಆಯುಕ್ತರು ಇದಕ್ಕೆ ಉತ್ತರಿಸಿ ಈಗಾಗಲೇ ಕೆಐಒಸಿಎಲ್ ನಿಂದ ನೀರನ್ನು ಮಹಾನಗರ ಪಾಲಿಕೆ ನೀರು ಸರಬರಾಜು ಕೊಳವೆಗೆ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮಂಗಳವಾರದಿಂದ ಆ ಭಾಗಗಳ ಜನರಿಗೆ ಸಮರ್ಪಕವಾಗಿ ನೀರನ್ನು ಒದಗಿಸುವುದಾಗಿ ತಿಳಿಸಿದರು. ಅತ್ಯಗತ್ಯ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ ಎಂದೂ ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ದಯಾನಂದ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಶ್ರೇಷ್ಟ ಪ್ರಜಾಪ್ರಭುತ್ವ ಡಾ|ಅಂಬೇಡ್ಕರ್ ಕೊಡುಗೆ:ನಳಿನ್ ಕುಮಾರ್ ಕಟೀಲ್
ಮಂಗಳೂರು,ಏಪ್ರಿಲ್.14:ಇಂದು ಭಾರತ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟವಾದ ಪ್ರಜಾಪ್ರಭುತ್ವ ಹೊಂದಲು ಸಾಧ್ಯವಾಗಿದ್ದರೆ ಅದು ಡಾ|ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಡಾ|ಬಿ.ಆರ್.ಅಂಬೇಡ್ಕರ್ ಅವರ 121 ಜನ್ಮ ದಿನಾಚರಣೆಯನ್ನು ಡಾ|ಅಂಬೇಡ್ಕರ್ ಅವರ ಪುತ್ಥಳಿಗೆ ವಿಧಾನಸಭೆಯ ಉಪಾಧ್ಯಕ್ಷರೊಂದಿಗೆ ಮಾಲಾರ್ಪಣೆ ಮಾಡಿದ ನಂತರ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಡಾ|ಅಂಬೇಡ್ಕರ್ ಅವರಿಗೆ ಹುಟ್ಟು ಹಬ್ಬದ ನಮನ ಸಲ್ಲಿಸುವುದೆಂದರೆ ಅವರ ತತ್ವ ಆದರ್ಶಗಳನ್ನು ಪಾಲಿಸುವುದೇ ಅಗಿದೆ, ಕೇವಲ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದಕ್ಕಿಂತ ಅವರು ತೋರಿದ ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಿದ್ದಾಂತವನ್ನು ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಅಂಬೇಡ್ಕರ್ ಅವರೊಬ್ಬ ಮಹಾನ್ ಮಾನವತಾವಾದಿ ಅವರು ತಮಗೆ ಸಂವಿಧಾನ ರಚಿಸಲು ಅವಕಾಶ ದೊರೆತಾಗ ಅದನ್ನು ತಮಗೆ ನೋವುಂಟು ಮಾಡಿದವರ ವಿರುದ್ದ ಬಳಸಿಕೊಳ್ಳದೇ ಸಮಾಜದ ಎಲ್ಲಾ ವರ್ಗಗಳ ಜನರಿಗೂ ಒಳಿತಾಗುವಂತೆ ಸಂವಿಧಾನ ರಚಿಸಿದ ಒಬ್ಬ ಧೀಮಂತ ರಾಷ್ಟ್ರನಾಯಕರೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಮಾತನಾಡಿ, ಎಲ್ಲಿಯವರೆಗೆ ನಮ್ಮಲ್ಲಿ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಡಾ|ಅಂಬೇಡ್ಕರ್ ಅವರಿಗೆ ಸಲ್ಲಿಸುವ ಪ್ರಣಾಮಗಳು ಅರ್ಥಹೀನವಾಗಿರುತ್ತವೆ. ಆದ್ದರಿಂದ ನಮ್ಮ ಸಮಾಜದಲ್ಲಿರುವ ಎಲ್ಲರಿಗೂ ಶಿಕ್ಷಣ, ಸಮಾನತೆ ದೊರಕಿಸಿದಾಗ ಮಾತ್ರ ಶೋಷಣೆ ಮುಕ್ತ ಸಮಾಜ ಕಾಣಲು ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದ್ಮುಲ್ ರಂಗರಾವ್ ಹಾಗೂ ಡಾ|ಅಂಬೇಡ್ಕರ್ ಅವರ ಆದರ್ಶಗಳು ಸಾಮಾಜಿಕ ಪರಿವರ್ತನೆಗೆ ನಾಂದಿಯಾಯಿತು ಎಂದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಅವರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಇಚ್ಚಾಶಕ್ತಿಯನ್ನು ಅಧಿಕಾರಿ ವರ್ಗ ಬೆಳೆಸಿಕೊಳ್ಳದ ಹೊರತು ಸಮಾನ ಸಮಾಜ ದುರ್ಲಭ ಎಂದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಇಚ್ಚಾಶಕ್ತಿಯನ್ನು ಹೊಂದಿ ಕೆಳವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕೆಂದರು.ಶಾಸಕರಾದ ಶ್ರೀ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ, ಉಪ ಮೇಯರ್ ಶ್ರೀಮತಿ ಅಮಿತಕಲಾ, ರಾಜ್ಯ ಬಾಲ ಭವನ ಅಧ್ಯಕ್ಚರಾದ ಶ್ರೀಮತಿ ಸುಲೋಚನಾ ಭಟ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಿ, ನಾಗರಾಜಶೆಟ್ಟಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್,ಬಿ.ಅಬೂಬಕರ್, ಮಂಗಳೂರು ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ,ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ.ಎನ್.ವಿಜಯಪ್ರಕಾಶ್ , ಪಶ್ಚಿಮ ವಲಯ ಐಜಿಪಿ ಪ್ರತಾಪರೆಡ್ಡಿ, ಪೋಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ ಅಭಿಷೇಕ್ ಗೋಯೆಲ್, ಮತ್ತಿರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|ಅಭಯ ಕುಮಾರ್ ಕೌಕ್ರಾಡಿ ಅವರು ಡಾ|ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟರಿಗೆ ವಾದ್ಯಪರಿಕರಗಳು, ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಚೆಕ್ ಗಳನ್ನು,ಸಮಾಜಕಲ್ಯಾಣ ಇಲಾಖೆಯಿಂದ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣ್ ಫುಟ್ರಾಡೊ ಸ್ವಾಗತಿಸಿದರು. ಅಗ್ನಿ ಶಾಮಕ ದಳದಿಂದ ಪುರಭವನದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.

Wednesday, April 11, 2012
ಭೂ ಕಂಪನ,ಭಯಭೀತರಾಗದಿರಿ: ಜಿಲ್ಲಾಧಿಕಾರಿ
ಮಂಗಳೂರು,ಏಪ್ರಿಲ್.11:ಇಂಡೋನೇಷ್ಯಾದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಗೋಚರಿಸುತ್ತಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ವಹಿಸಿದ್ದು ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ಇತ್ತೀ ಚಿಗೆ ಬಂದ ವರದಿ ಗಳ ಪ್ರಕಾರ ಭೂ ಕಂಪ ತೀವ್ರತೆ ಕಡಿಮೆ ಇದ್ದು, ಪೊಲೀಸ್, ಅಗ್ನಿ ಶಾಮಕ ಪಡೆ, ಕಂದಾ ಯ ಇಲಾಖೆ, ಹೋಮ್ ಗಾರ್ಡ್, ರವರಿಗೆ ಸೂಕ್ತ ಕ್ರಮ ಕೈ ಗೊಳ್ಳಲು ಸೂಚನೆ ನೀಡ ಲಾಗಿದ್ದು, ಸಮುದ್ರ ತೀರ ಪ್ರದೇಶ ಗಳಾದ ಬೆಂಗ್ರೆ, ಉಳ್ಳಾಲ, ಸಸಿ ಹಿತ್ಲು, ಸುಲ್ತಾನ ಬತ್ತೇರಿಯ ಉಸ್ತು ವಾರಿಗೆ ಮೂರು ತಂಡ ಗಳನ್ನು ರಚಿ ಸಲಾ ಗಿದೆ. ವಾಹನ ಹಾಗೂ ಸಿಬ್ಬಂ ದಿಯೊಂ ದಿಗೆ ಗುರುತಿ ಸಲಾದ ಪ್ರದೇಶ ಗಳಲ್ಲಿ ಸೂಕ್ತ ಮೂಲಸೌಕರ್ಯ ಹತ್ತಿರದ ಶಾಲೆಗಳಲ್ಲಿ ಕಲ್ಪಿಸಿ ಸಭೆ ನಡೆದ ಒಂದು ಗಂಟೆಯೊಳಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಕುತೂ ಹಲಿ ಗಳು ಸಮುದ್ರ ತೀರಕ್ಕೆ ಹೋಗಿ ಜಮಾ ಯಿಸು ವುದನ್ನು ತಡೆ ಯುವಂ ತೆಯೂ ಜಿಲ್ಲಾ ಧಿಕಾ ರಿಗಳು ಸೂಚಿ ಸಿದ್ದು, ಸ್ಥಳಾಂ ತರಕ್ಕೆ ಪೂರಕ ವಾಗಿ ಕೆ ಎಸ್ ಆರ್ ಟಿಸಿ ಯಿಂದ ಬಸ್ಸು ಗಳು, ವಾಹನ ಗಳನ್ನು, ಅಡುಗೆ ಮಾಡು ವವ ರನ್ನು ಗುರು ತಿಸಿ ಸಜ್ಜಾ ಗಿರು ವಂತೆ ಸೂಚಿ ಸಲಾಗಿದೆ. ಎನ್ ಎಂ ಪಿಟಿಯಲ್ಲಿ 3 ಬೋಟ್ ಗಳು, ಮೀನುಗಾರಿಕಾ ಇಲಾಖೆಯ ಬಳಿ ಇರುವ ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಅಪರ ಜಿಲ್ಲಾಧಿಕಾರಿ ದಯಾನಂದ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಉಪ ವಿಭಾಗಧಿಕಾರಿ ಡಾ ವೆಂಕಟೇಶ್, ಅಗ್ನಿಶಾಮಕದ ಮುಖ್ಯ ಅಧಿಕಾರಿ ಎಚ್ ಎಸ್ ವರದರಾಜ್, ಡಿಸಿಪಿ ಮುತ್ತುರಾಯರು, ಡಿಸಿಪಿ ಅಪರಾಧ ಧರ್ಮಯ್ಯ, ತಹಸೀಲ್ದಾರ್ ರವಿಚಂದ್ರ ನಾಯಕ್, ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.
ಮೀನುಗಾರರಿಗೆ ಮುನ್ನೆಚ್ಚರಿಕೆ:
ಇಂದು ಬೆಳಗ್ಗೆ ಇಂಡೋನೇಷ್ಯದ ಉತ್ತರ ಸುಮಾರ್ತದಲ್ಲಿ ಭೂಕಂಪನವಾಗಿದ್ದು 8.9 ರಿಕ್ಟರ್ ಮಾಪಕದಲ್ಲಿ ಭೂಕಂಪ ದಾಖಲಾಗಿರುವುದರಿಂದ ಇದರ ಪರಿಣಾಮ ಕರಾವಳಿ ಜಿಲ್ಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದೆಂದು, ತೆರಳಿದವರು ತಕ್ಷಣವೇ ಹಿಂದಿರುಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Tuesday, April 10, 2012
ಸುಳ್ಯಕ್ಕೆ ಟಯರ್ ಫ್ಯಾಕ್ಟರಿ:ಉನ್ನತ ಅಧಿಕಾರಿಗಳ ಸಭೆ
ಮಂಗಳೂರು,ಏಪ್ರಿಲ್.10:ರಾಜ್ಯ ಬಜೆಟ್ ನಲ್ಲಿ ಘೋಷಿಸಿದಂತೆ ರೈತರ ಹಿತವನ್ನು ಗಮನದಲ್ಲಿರಿಸಿ 300 ರಿಂದ 400 ಕೋಟಿ ರೂ. ವೆಚ್ಚ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಂಡೆಕೋಲಿನಲ್ಲಿ ಟಯರ್ ಫ್ಯಾಕ್ಟರಿ ಆರಂಭಿಸುವ ನಿಟ್ಟಿನಲ್ಲಿ ಇಂದೇ ತಹಸೀಲ್ದಾರ್ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯದರ್ಶಿಗಳಾದ ರಾಜ್ ಕುಮಾರ್ ಕತ್ರಿ ಅವರು ತೆರಳಿ ಸ್ಥಳಪರಿಶೀಲನೆ ನಡೆಸುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದಗೌಡ ಸೂಚಿಸಿದರು.
ಈ ಸಂ ಬಂಧ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂ ಕಿನ ಮಂಡೆ ಕೋಲಿನ ಗ್ರಾಮ ಪಂಚಾ ಯಿತಿ ಕಟ್ಟಡ ದಲ್ಲಿ ನಡೆ ಸಿದ ಉನ್ನತ ಮಟ್ಟದ ಅಧಿ ಕಾರಿ ಗಳ ಸಭೆ ಯಲ್ಲಿ ಟಯರ್ ಉತ್ಪಾ ದನಾ ಘಟಕ ಆರಂ ಭಿಸಲು ಅಗತ್ಯ ವಿರುವ ಕ್ರಮ ಗಳನ್ನು ಕೈ ಗೊಳ್ಳಲು ಎಲ್ಲ ಅಧಿ ಕಾರಿ ಗಳಿಗೆ ಸೂಚಿಸಿ ದರ ಲ್ಲದೆ, 15 ಎಕರೆ ಯಷ್ಟು ಕಂದಾಯ ಇಲಾ ಖೆಯ ಜಮೀನು ಮತ್ತು 45 ಎಕರೆಯಷ್ಟು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಭೂಮಿ ಅಜ್ಜಾವರದಲ್ಲಿ ಲಭ್ಯವಿದ್ದು ಸ್ಥಳಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದರಿಂದ ಇಲ್ಲಿ ಶೇಕಡ 80ರಷ್ಟು ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆಯಲ್ಲದೆ, ದಕ್ಷಿಣ ಕನ್ನಡದಲ್ಲೇ 8000ದಿಂದ 12,000 ಟನ್ ರಬ್ಬರ್ ಲಭ್ಯವಿದ್ದು,ಸುಳ್ಯ, ಪುತ್ತೂರು, ಕೊಡಗು, ಚಿಕ್ಕಮಗಳೂರು ಹಾಗೂ ನೆರೆಯ ಕಾಸರಗೋಡಿನ ರಬ್ಬರ್ ಬೆಳೆಗಾರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದರು. ಜಿಲ್ಲಾಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಂಡು ಇತರರಿಗೆ ಮಾದರಿಯಾಗುವಂತೆ ಕಾರ್ಖಾನೆಯ ಪೇಪರ್ ವರ್ಕ್ ಗಳು ನಡೆಯಬೇಕೆಂದರು. ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಈ ಸಂಬಂಧ ಎಲ್ಲ ಪೂರಕ ನೆರವುಗಳನ್ನು ಸರ್ಕಾರ ನೀಡಲಿದೆ ಎಂದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಈ ಘಟಕ ಸ್ಥಾಪನೆ ಸಂಬಂಧ ಉಳಿದ ಕೆಲಸ ನಿರ್ವಹಿಸಲಿರುವರು ಎಂದರು. ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮತ್ತೆ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗುವುದು ಎಂದ ಮುಖ್ಯಮಂತ್ರಿಗಳು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೇದಾಂತ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

'ಕುಗ್ರಾಮವನ್ನು ಸುಗ್ರಾಮವಾಗಿಸಲು ಅಗತ್ಯ ಅನುದಾನ'
ಮಂಗಳೂರು, ಏಪ್ರಿಲ್.10:ಕುಗ್ರಾಮವೆಂದು ಗುರುತಿಸಲ್ಪಟ್ಟ ತನ್ನ ಸ್ವಗ್ರಾಮವನ್ನು ಸುಗ್ರಾಮವನ್ನಾಗಿಸುವ ಕನಸು ಇಂದು ನನಸಾಗಿದೆ ಎಂದು ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಹೇಳಿದರು.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂ ಕಿನ ಮಂಡೆ ಕೋಲಿನ ಶಾಲಾ ವಠಾ ರದಲ್ಲಿ 9.25 ಕೋಟಿ ರೂ.ಗಳ ವೆಚ್ಚ ದಲ್ಲಿ ವಿವಿಧ ಕಾಮ ಗಾರಿ ಗಳ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡಿ ದರು. ಸುಳ್ಯ ತಾಲೂಕಿನ ಸುಳ್ಯ -ಅಜ್ಜಾ ವರ-ಮಂಡೆ ಕೋಲು-ಅಡೂರು ಅಂತರ್ ರಾಜ್ಯ ರಸ್ತೆ ಅಭಿ ವೃದ್ಧಿಗೆ, ಜಾಲ್ಸೂರು-ಮುರೂರು-ಮಂಡೆ ಕೋಲು ರಸ್ತೆ ಯಲ್ಲಿ ಮುರೂರು ಎಂಬಲ್ಲಿ ಪಯ ಸ್ವಿನಿ ನದಿಗೆ ಸೇತುವೆ ನಿರ್ಮಾಣ,ಸುಳ್ಯ ತಾಲೂಕಿನ ಬೈತಡ್ಕ-ಮಂಡೆಕೋಲು ರಸ್ತೆ ಕಿ.ಮೀ 7ರಿಂದ 10.40 ಕಿ.ಮೀ ವರೆಗೆ ಅಭಿವೃದ್ಧಿ, ಸುಳ್ಯ ತಾಲೂಕಿನ ಬೈತಡ್ಕ -ಮಂಡೆಕೋಲು ರಸ್ತೆಯ ಮಾವಿನಪಳ್ಳ ಎಂಬಲ್ಲಿ ಸೇತುವೆ ರಚನೆ ಸೇರಿದಂತೆ ಎಲ್ಲ ಕಾಮಗಾರಿಗಳಿಗೆ ಸಮಯಮಿತಿ ನಿಗದಿಪಡಿಸಿರುವ ಮುಖ್ಯಮಂತ್ರಿಗಳು, 'ಸಕಾಲ' ನಾಗರೀಕ ಸೇವಾ ಖಾತರಿ ಯೋಜನೆ ಜಾರಿಗೊಂಡಿದ್ದು ರಾಷ್ಟ್ರಕ್ಕೇ ಮಾದರಿ ಎಂದರು.ರಾಜ ಕೀಯ ಇಚ್ಛಾ ಶಕ್ತಿಗಳು ಕೆಲ ಸದ ಮೂಲಕ ಗೋಚರ ವಾಗ ಬೇಕು ಎಂದ ಮುಖ್ಯ ಮಂತ್ರಿ ಗಳು, ಮಂಡೆ ಕೋಲಿ ನಲ್ಲಿ 7 ವೆಂಟೆಡ್ ಡ್ಯಾಮ್ 35 ಲಕ್ಷ ರೂ. ವೆಚ್ಚದಲ್ಲಿ, 25 ಲಕ್ಷ ರೂ., ವೆಚ್ಚದಲ್ಲಿ ಎಲ್ಲ ಕಚ್ಚಾ ರಸ್ತೆ ಗಳನ್ನು ಮೋಟ ರೇಬಲ್ ಮಾಡು ವುದಾ ಗಿಯೂ ಹೇಳಿ ದರು. ಇದ ಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನಿಯೋಗಕ್ಕೆ ಮೂಲಭೂತ ಸೌಕರ್ಯಕ್ಕೆ ಈಗಾಗಲೇ ಅನುದಾನ ಒದಗಿಸಲಾಗಿದೆ ಎಂದರು.
ಕಳೆದ ಎಂಟು ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪಾರದರ್ಶಕ ಆಡಳಿತ ನೀಡಲು, ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಲಾಗಿದ್ದು, ಇದನ್ನು ನನ್ನ ಕಚೇರಿಯಿಂದಲೇ ಆರಂಭಿಸಲು ಕ್ರಮಕೈಗೊಂಡಿದ್ದೇನೆ. ಪ್ರತಿನಿತ್ಯ 500ಕ್ಕೂ ಹೆಚ್ಚು ಕಡತಗಳನ್ನು ವಿಲೇ ಮಾಡುತ್ತಿದ್ದು, ಕಳೆದ 60 ವರ್ಷಗಳಲ್ಲಿ ಆಗದ ಜನಸ್ನೇಹಿ ಆಡಳಿತವನ್ನು ನೀಡಲಾಗಿದೆ. ಮುಂದಿನ 3 ತಿಂಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಕಾಲದಿಂದಾಗಿ ಆಡಳಿತದಲ್ಲಾಗಲಿದೆ ಎಂದರು.
ಹಿಂದುಳಿದ ವರ್ಗದವರಿಗೆ ಅಭೂತಪೂರ್ವ ನೆರವನ್ನು ಘೋಷಿಸಲಾಗಿದ್ದು, ತಮ್ಮ ಅವಧಿಯಲ್ಲಿ ಸ್ವಚ್ಛ ಆಡಳಿತಕ್ಕೆ ಆದ್ಯತೆ ಎಂದು ಪುನರುಚ್ಚರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದರು. ಶಾಸಕರಾದ ಅಂಗಾರ ಪ್ರಾಸ್ತಾವಿಕ ಹಾಗೂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಳಿಯ ಕೇಶವ ಭಟ್, ಮಂಡೆಕೋಲು ಗ್ರಾಮಪಂಚಾಯತ್ ಅಧ್ಯಕ್ಷರಾದ ಮಮತಾ, ಅಜ್ಜಾವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಕರುಣಾಕರ ಅಡಪಂಗಾಯ ಅವರನ್ನೊಳಗೊಂಡಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರಾಜ್ಯ ಬರ ಪರಿಸ್ಥಿತಿಯನ್ನೆದುರಿಸುವ ಸಂದರ್ಭದಲ್ಲಿ ಮಂಡೆಕೋಲು ವ್ಯವಸಾಯ ಸಹಕಾರಿ ಸಂಘದ ವತಿಯಿಂದ ಬರಪರಿಹಾರ ನಿಧಿಗೆ ಚೆಕ್ ನೀಡಿದರು. ಇದೇ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ಸಿಡಿಲು ಬಡಿದು ಮೃತಪಟ್ಟ ಗಿರಿಜಾ ಅವರ ಪತಿಗೆ 1 ಲಕ್ಷ ಹಾಗೂ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಹೋದ ಬಳಪದ ಲಿಂಗಪ್ಪ ಅವರ ಕುಟುಂಬಕ್ಕೆ 1.5 ಲಕ್ಷ ನೆರವಿನ ಚೆಕ್ಕನ್ನು ಮುಖ್ಯಮಂತ್ರಿಗಳು ನೀಡಿದರು.

ಕರಾವಳಿ ಅಭಿವೃದ್ಧಿಗೆ ಸೌಭಾಗ್ಯ ಸಂಜೀವಿನಿ, ಪ್ರವಾಸೋದ್ಯಮ ಸಂಪರ್ಕ ಯೋಜನೆ
ಮಂಗಳೂರು,ಏಪ್ರಿಲ್.10:ಕರಾವಳಿ ಜಿಲ್ಲೆಗಳಲ್ಲಿ ಸೌಭಾಗ್ಯ ಸಂಜೀವಿನಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಪ್ರವಾಸಿ ಸಂಪರ್ಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದಗೌಡ ಅವರು ಹೇಳಿದ್ದಾರೆ.ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಮಹಾ ಲಿಂಗೇ ಶ್ವರ ದೇವ ಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯ ಮದೊಂ ದಿಗೆ ಮಾತ ನಾಡಿದ ಅವರು, ಸೌಭಾಗ್ಯ ಸಂಜೀ ವಿನಿ ಯೋಜನೆ ಯಡಿ ಕರಾ ವಳಿ ಭಾಗದ 3 ಜಿಲ್ಲೆ ಗಳಲ್ಲಿ ಕಿಂಡಿ ಅಣೆ ಕಟ್ಟು ಮತ್ತು ಕಾಲು ಸೇತುವೆ ನಿರ್ಮಾಣ ಮಾಡ ಲಾಗು ವುದು ಎಂದರು.ಕೊಲ್ಲೂ ರಿನಿಂದ ಸುಬ್ರ ಹ್ಮಣ್ಯ ದವ ರೆಗೆ ಕರಾ ವಳಿಯ 320 ಕಿ.ಮೀ ರಸ್ತೆ ಯನ್ನು ಪ್ರವಾಸಿ ಸಂಪರ್ಕ ರಸ್ತೆ ಯನ್ನಾಗಿ ಅಭಿ ವೃದ್ಧಿ ಪಡಿ ಸಲಾಗು ವುದು ಎಂದ ಅವರು ದೇಶದ ಅತಿ ದೊಡ್ಡ ರಾಜ್ಯ ಗಳ ಬಜೆಟ್ ಗಾತ್ರ ವನ್ನೇ ರಾಜ್ಯವು ಮಂಡಿ ಸಿದ್ದು, ರಾಜ್ಯದ ಸರ್ವ ತೋಮುಖ ಅಭಿ ವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಶಾಸಕರಾದ ಶ್ರೀಮತಿ ಮಲ್ಲಿಕಾಪ್ರಸಾದ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಡಿ ಶಂಭು ಭಟ್, ಪುರಸಭಾ ಅಧ್ಯಕ್ಷರಾದ ಶ್ರೀಮತಿ ಕಮಲಾ ಆನಂದ್ ಉಪಸ್ಥಿತರಿದ್ದರು.

Monday, April 9, 2012
ಪಾರದರ್ಶಕ ಆಡಳಿತಕ್ಕೆ ಬದ್ದ:ಮುಖ್ಯಮಂತ್ರಿ ಡಿ.ವಿ.ಸದಾನ0ದ ಗೌಡ
ಮಂಗಳೂರು,ಏಪ್ರಿಲ್,09: ರಾಜ್ಯದ ಸಮಗ್ರ ಅಭಿವೃದ್ದಿಗೆ ಪಾರದರ್ಶಕ ಆಡಳಿತ ನೀಡುತ್ತಿದ್ದು, ಈ ಬಾರಿ ಮಂಡಿಸಿದ ಬಜೆಟನ್ನು ಎಲ್ಲರೂ ಪ್ರಶಂಸಿಸಿದ್ದಾರೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ. ಸದಾನ0ದ ಗೌಡ ಹೇಳಿದರು. ಇಂದು ಸಾರ್ವಜನಿಕ ಮತ್ತು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಅವರು ಸುಳ್ಯದ ಮಲೆನಾಡು ಹೈಸ್ಕೂಲ್ ಮೈದಾನಿನಲ್ಲಿ ಸುದ್ದಿಗಾರರೊ0ದಿಗೆ ಮಾತನಾಡಿದರು.ರಾಜ್ಯ ದಲ್ಲಿನ ಬರ ಪೀಡಿತ ಪ್ರದೇ ಶಗಳ ಪರಿ ಸ್ಥಿತಿ ಯನ್ನು ಅಧ್ಯಾ ಯನ ಮಾಡಲು ಇ0ದಿ ನಿ0ದ 17 ಸಚಿ ವರ ಮೂರು ತ0ಡ ಗಳು ಬರ ಪೀಡಿತ ಪ್ರದೇ ಶಗ ಳಿಗೆ ಭೇಟಿ ನೀಡು ತ್ತಿದ್ದು,ಸಮಗ್ರ ವಾಗಿ ಸಮೀಕ್ಷೆ ನಡೆ ಸಲಾ ಗುತ್ತಿದೆ.ಗುಲ್ಬರ್ಗಾ,ಬಿಜಾ ಪುರ, ಬೆಳ ಗಾವಿ,ಚಿತ್ರ ದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಾನೇ ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಥಿಯನ್ನು ಅವಲೋಕಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ನುಡಿದರು.ಮಂಗ ಳೂರಿಗೆ ಕುಡಿ ಯುವ ನೀರು ಅಭಾ ವದ ಬಗ್ಗೆ ಗಮ ನಕ್ಕೆ ಬ0 ದಿದ್ದು, ನಗ ರಕ್ಕೆ ನೀರು ಸರಬ ರಾಜು ಮಾಡಲು ತುಂಬೆ ಯಲ್ಲಿ ನೂತನ ವಾಗಿ ನಿರ್ಮಾ ಣವಾ ಗುತ್ತಿ ರುವ ಅಣೆಕ ಟ್ಟಿನ ಕಾಮಾ ಗಾರಿಗೆ ವೇಗ ವನ್ನು ನೀಡಲು ಜಿಲ್ಲಾ ಡಳಿ ತಕ್ಕೆ ಸೂಚನೆ ನೀಡ ಲಾಗಿದೆ ಎಂದರು.
ಇ0ಧನ ಬೆಲೆ ಕುರಿತಾಗಿ ಪ್ರತಿಕ್ರೀಯಿಸಿದ ಮುಖ್ಯಮಂತ್ರಿಗಳು ಸಾರ್ವಜನಿಕರ ಕೋರಿಕೆಯಂತೆ ಇ0ಧನದಲ್ಲಿ ಶೇಕಡ 1.25 ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಡಿ ಕಾನ ಮಲ್ಲಿ ಕಾರ್ಜುನ ದೇವಾ ಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಬಳಿಕ ಮಾತ ನಾಡಿದ ಮುಖ್ಯ ಮಂತ್ರಿ ಗಳು ಸುಳ್ಯ, ಪುತ್ತೂರು ಪ್ರದೇಶ ಗಳ ಅಭಿ ವೃದ್ದಿಗೆ ಒಟ್ಟು 79 ಕೋಟಿ ರೂಪಾ ಯಿಗಳ ಅನು ದಾನ ವನ್ನು ಈ ಬಾರಿಯ ಬಜೆಟಿ ನಲ್ಲಿ ಮೀಸ ಲಿಡ ಲಾಗಿದೆ. ಅದರಲ್ಲಿ ಅರ0ತೋಡು- ತೋಡಿಕಾನ ರಸ್ತೆಗೆ 4 ಕೋಟಿ ರೂ.ಸೇತುವೆಗೆ 3 ಕೋಟಿ,ಸುಳ್ಯ-ಮಂಡೆಕೋಲು ರಸ್ತೆಗೆ 4 ಕೋಟಿ, ಸುಬ್ರಹ್ಮಣ್ಯ ರಸ್ತೆಗೆ 26 ಲಕ್ಷ ರೂಪಾಯಿಗಳು,ಶಾಂತಿ ಮೊಗರು ರಸ್ತೆಗೆ 9 ಕೋಟಿ ರೂಪಾಯಿಗಳನ್ನು ರಸ್ತೆಗಳ ಅಭಿವೃದ್ದಿಗೆ ಮೀಸಲಿಡಲಾಗಿದೆ ಎಂದರು.
ಹಳದಿ ರೋಗಕ್ಕೆ ತುತ್ತಾದ ಅಡಿಕೆ ತೋಟಗಳ ಬೆಳೆಗಾರರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ವಿಶೇಷ ಪ್ಯಾಕೆಜನ್ನು ನೀಡಲಾಗುವುದು. ಅಡಿಕೆ ಮತ್ತು ಬರಪರಿಸ್ಥಿಯ ಸಮಗ್ರ ವರದಿ ಸಿದ್ದವಾದ ಬಳಿಕ ಇದೇ ತಿ0ಗಳ ಮೂರನೇ ವಾರದಲ್ಲಿ ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊ0ಡು ಹೋಗಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು. ಸುಳ್ಯ ಶಾಸಕರಾದ ಅಂಗಾರ,ಸ್ಥಳಿಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು,ಜಿ.ಪಂ.ಸಿಇಓ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು, ಮತ್ತು ಪಕ್ಷದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಸ್ವಾಗತಿಸಿದರು.

Saturday, April 7, 2012
ಲಾಯಿಲಾಕ್ಕೆ ರಾಷ್ಟ್ರೀಯ ಗೌರವ್ ಗ್ರಾಮಸಭಾ ಪ್ರಶಸ್ತಿ 2012
ಮಂಗಳೂರು,ಏಪ್ರಿಲ್.07:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮಪಂಚಾಯತ್ ಗೆ ರಾಷ್ಟ್ರೀಯ ಗೌರವ್ ಗ್ರಾಮಸಭಾ ಪ್ರಶಸ್ತಿ-2012 ಲಭಿಸಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾಕರ ವಿ ಎನ್ ಅವರು ಏಪ್ರಿಲ್ 24ರಂದು ದೆಹಲಿಯ ವಿಜ್ಞಾನ್ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದು, ಕಳೆದ ಎರಡು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.
ಪ್ರಶಸ್ತಿಯ ಮೊತ್ತ ರೂ. 5ಲಕ್ಷ. ಪಂಚಾಯತ್ ಪಿಡಿಒ ಪ್ರಕಾಶ್ ಶೆಟ್ಟಿ. ಸಮಗ್ರವಾಗಿ ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಿಕೊಂಡ ಬಂದ ಹೆಗ್ಗಳಿಕೆಗೆ ಈ ಪ್ರಶಸ್ತಿ ಲಭ್ಯವಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ವಿಜಯಪ್ರಕಾಶ್ ಪ್ರಶಸ್ತಿ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿಗೆ ಜಿ.ಪಂ.ಗೆ 50ಲಕ್ಷ
ಮಂಗಳೂರು,ಏಪ್ರಿಲ್.07:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಎಸ್ ಡಿ ಆರ್ ಎಫ್ ಪಿಡಿ ಖಾತೆಯಿಂದ 50 ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ ಮೂರು ಸುತ್ತಿನ ಸಭೆ ನಡೆಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲು ಈ ಅನುದಾನ ಬಿಡುಗಡೆ ಮಾಡಲಾಗಿದೆ.

Friday, April 6, 2012
ಕೊರಗರ ಅಭಿವೃದ್ಧಿಗೆ 2 ಕೋಟಿಗೂ ಅಧಿಕ ವೆಚ್ಚ
ಮಂಗಳೂರು,ಏಪ್ರಿಲ್.06:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2684 ಕೊರಗರ ಕುಟುಂಬಗಳ ಅಭಿವೃದ್ಧಿಗಾಗಿ 2008-09ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 380 ಲಕ್ಷ ರೂ ಅನುದಾನವನ್ನು ನಿಗದಿಪಡಿಸಲಾಗಿ 31.3.12ರ ಅಂತ್ಯಕ್ಕೆ 674 ಕುಟುಂಬಗಳ ಅಭಿವೃದ್ಧಿಗಾಗಿ ರೂ. 2.1 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಇದರಲ್ಲಿ 3 ಸಮುದಾಯಭವನ ನಿರ್ಮಾಣಕ್ಕಾಗಿ ರೂ. 30 ಲಕ್ಷ, ಕುಡಿಯುವ ನೀರು ಸರಬರಾಜಿಗಾಗಿ ರೂ. 31 ಲಕ್ಷ, 24 ಕೊರಗರ ಕುಟುಂಗಳಿಗೆ ಕೃಷಿ ಅಭಿವೃದ್ಧಿ, ನೀರಾವರಿ ಸೌಲಭ್ಯಗಳ ಕಲ್ಪಿಸಲು ರೂ. 82 ಲಕ್ಷ, 28 ಕುಟುಂಬಗಳಿಗೆ ಮನೆ ನಿರ್ಮಿಸಲು ರೂ. 22.64 ಲಕ್ಷ ಕೊರಗರಿಗೆ ಆರೋಗ್ಯ ಭಾಗ್ಯ ಒದಗಿಸಲು ಜನಜಾಗೃತಿ ಬೀದಿ ನಾಟಕ, ಆರೋಗ್ಯ ಶಿಬಿರ, ವೈದ್ಯಕೀಯ ವೆಚ್ಚ ಮರುಪಾವತಿ ಇನ್ನಿತರೆ ವೆಚ್ಚಗಳಿಗಾಗಿ ರೂ. 10.32 ಲಕ್ಷ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೊರಗ ವಿದ್ಯಾರ್ಥಿಗಳಿಗೆ ರಜಾ ಶಿಬಿರ, ಚಿಣ್ಣರ ಜಿಲ್ಲಾದರ್ಶನ, ವಿದ್ಯಾಭ್ಯಾಸ ವೆಚ್ಚ, ಟ್ಯೂಷನ್ ವೆಚ್ಚ ಹಾಗೂ ಇತ್ಯಾದಿಗಳ ವೆಚ್ಚಕ್ಕಾಗಿ ರೂ. 3.82 ಲಕ್ಷ ವೆಚ್ಚ ಮಾಡಲಾಗಿದೆ.
ಸ್ವ ಉದ್ಯೋಗ ಯೋಜನೆಯನ್ವಯ 30 ಕೊರಗರಿಗೆ ಕೈಮಗ್ಗ ಜವಳಿ ಇಲಾಖೆಯಿಂದ ತರಬೇತಿ, ಹೊಲಿಗೆ ಯಂತ್ರಗಳ ಉಚಿತ ವಿತರಣೆಗೆ 30 ಫಲಾನುಭವಿಗಳಿಗೆ 8.38 ಲಕ್ಷ, ಪಶುಸಂಗೋಪನಾ ಇಲಾಖೆಯಿಂದ 60 ಜನವರಿಗೆ ಹಟ್ಟಿ ನಿರ್ಮಾಣ, ಹಸು ಖರೀದಿ, ಕೋಳಿ, ಆಡು ಸಾಕಾಣಿಕೆಗಳಿಗಾಗಿ ಒಟ್ಟು 14.25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮಾಹಿತಿ ನೀಡಲಾಗಿದೆ.
ಮಂಗಳೂರು ತಾಲೂಕಿನ ಗುತ್ತಕಾಡ್ ಕೊರಗರ ಕಾಲೊನಿ, ಪುತ್ತೂರು ತಾಲೂಕಿನ ಕೊರಗರ ಕಾಲೊನಿ, ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಕೊರಗರ ಕಾಲೊನಿಗಳಲ್ಲಿ ಸಮುದಾಯಭವನಗಳನ್ನು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

Subscribe to:
Posts (Atom)