Tuesday, April 9, 2013

ದ್ವಿತೀಯ ಹಂತ ಸ್ವೀಪ್: ನೈತಿಕ ಮತದಾನಕ್ಕೆ ಪ್ರೇರಪಣೆ


ಮಂಗಳೂರು, ಏಪ್ರಿಲ್.09 : ಪ್ರಥಮ ಹಂತದ ಸ್ವೀಪ್ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ದ್ವಿತೀಯ ಹಂತವನ್ನು ಯಶಸ್ವಿಯಾಗಿಸಲು ಎಲ್ಲ ಅಧಿಕಾರಿಗಳು ಇದೇ ಹುಮ್ಮಸ್ಸಿನಲ್ಲಿ ಮುಂದುವರಿಯಬೇಕೆಂದು ಸ್ವೀಪ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಿರುವ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
      ಅವರು ಇಂದು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಗಳ ಅಧ್ಯಕ್ಷ ತೆಯಲ್ಲಿ ನಡೆದ ಸ್ವೀಪ್ ಸಭೆ ಯಲ್ಲಿ ನೈತಿಕ ಮತ ದಾನ ಹಾಗೂ ಮತ ದಾನಕ್ಕೆ ಪ್ರೇರೆ ಪಿಸು ವಂತಹ ಕ್ರಮ ಗಳ ಬಗ್ಗೆ ಸಭೆ ಯಲ್ಲಿ ಚರ್ಚೆ ನಡೆಯಿತು.
ಒಂದೊಂದು ಪರ್ಸೆಂಟೇಜ್ ಜಾಸ್ತಿ ಮಾಡುವುದು ನಮ್ಮ ಗುರಿ. ಪ್ರಥಮ ಹಂತದ ಸ್ವೀಪ್ ಕಾರ್ಯಕ್ರಮದಲ್ಲಿ ಸ್ವೀಪ್ ನಿಂದಾಗಿ ಸುಮಾರು 70,000 ಅರ್ಜಿಗಳು ಸ್ವೀಕೃತವಾಗಿವೆ.
ಇದೇ ಮಾದರಿಯಲ್ಲಿ ನೈತಿಕ ಮತದಾನ, ಮತದಾನ ಹೆಚ್ಚಿಸುವ ಬಗ್ಗೆ ಗಂಭೀರ ಚಿಂತನೆ ಜಿಲ್ಲಾ ಪಂಚಾಯತ್ ನಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳೆಯರನ್ನು ತಲುಪುವ ಬಗ್ಗೆ, ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರನ್ನು ಗುರಿಯಾಗಿರಿಸಿ, ಕೃಷಿ ಇಲಾಖೆ ಕೃಷಿಕರನ್ನು ಗುರಿಯಾಗಿರಿಸಿಕೊಂಡು ಮತದಾನದ ಬಗ್ಗೆ ಮಾಹಿತಿ ನೀಡುವ ಕುರಿತು ಸಭೆಯಲ್ಲಿ ಸವಿವರ ಚರ್ಚೆ ನಡೆಸಲಾಯಿತು.
ಎಪಿಕ್ ಮತದಾನಕ್ಕೆ ಕಡ್ಡಾಯವಲ್ಲ; ಚುನಾವಣಾ ಆಯೋಗ ಬಿ ಎಲ್ ಒ ಗಳ ಮುಖಾಂತರ ನೀಡುವ ವೋಟರ್ ಸ್ಲಿಪ್ ಮುಖ್ಯ ಎಂದು ಪ್ರತಿಯೊಬ್ಬರಿಗೂ ಮಾಹಿತಿ ನೀಡಿ.  ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸ್ವೀಪ್ ಬಗ್ಗೆ ಪ್ರದರ್ಶನ ಏರ್ಪಡಿಸಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ಹಂತ ಸವಾಲಿನ ಹಂತವಾಗಿದ್ದು, ಸಮೂಹವನ್ನು ನಾವು ಉದ್ದೇಶಿಸಿ ಮಾತನಾಡುವುದಕ್ಕಿಂತಲೂ, ಪ್ರತಿಯೊಂದು ಮನವನ್ನು, ಮನೆಯನ್ನು ತಲುಪುವ ಕೆಲಸವಾಗಬೇಕಿದೆ ಎಂದು ಪಾಲಿಕೆ ಆಯುಕ್ತ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ನಗರದ ಯುವ ಖಾಸಗಿ ಉದ್ಯೋಗಿಗಳನ್ನು ಗುರಿಯಾಗಿರಿಸಿ ಯುವಕರ ಮತದಾನ ಮಾಡುವಂತೆ ಪ್ರೇರೆಪಿಸುವುದಾಗಬೇಕು. ಇದಕ್ಕಾಗಿ ಕಾರ್ಮಿಕ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಯುವಕರನ್ನು ತಲುಪಬೇಕು.
ಪೋಸ್ಟಲ್ ಬ್ಯಾಲೆಟ್ ಬಗ್ಗೆ ಜಿಲ್ಲಾಪಂಚಾಯತ್ ಮುಖ್ಯ ಯೋಜನಾಧಿಕಾರಿ ನಝೀರ್ ಅವರು ಸಮಗ್ರ ಮಾಹಿತಿ ನೀಡಿದರು. ಚುನಾವಣಾ ಕೆಲಸದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯದ ಆದೇಶದ ಜೊತೆಗೆ ಫಾರ್ಮ ನಂಬರ್ 12 ನ್ನು ಭರ್ತಿ ಮಾಡಿ ನೀಡಬೇಕು. ಈ ಫಾರ್ಮನ್ನು ಭರ್ತಿ ಮಾಡದೆ ಹಿಂದಿರುಗಿಸ ತಕ್ಕದ್ದಲ್ಲ ಎಂದರು.
ಅಂಚೆ ಮೂಲಕ ಸರ್ವಿಸ್ ವೋಟಿಂಗ್ ಮಾಡಲು ಪೋಸ್ಟಲ್ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ಅಂಚೆ ಇಲಾಖೆ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಸಿಇಒ ಹೇಳಿದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, ಕೊರಗರು, ಮಲೆ ಕುಡಿಯರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 12ರಂದು ಮದ್ಯಪದವಿನಿಂದ ಆರಂಭಿಸಿ 17ರವರೆಗೆ ಮೇಲಂತಬೆಟ್ಟುವರೆಗೆ ಐಟಿಡಿಪಿ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಐ ಟಿ ಡಿ ಪಿ ಮ್ಯಾನೇಜರ್ ಹೇಳಿದರು. ಅರಣ್ಯ ಇಲಾಖೆಯವರ ಸಹಕಾರ ಸ್ವೀಪ್ ಕಾರ್ಯಕ್ರಮಕ್ಕೆ ಅಗತ್ಯವಿದ್ದು, ಎಪಿಎಂಸಿ, ಬೇಸಿಗೆ ಶಿಬಿರಗಳಲ್ಲಿ, ಕೋಚಿಂಗ್ ಕ್ಲಾಸ್ ಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಎನ್ ವೈ ಕೆಯಿಂದ ಕ್ಯಾಂಡಲ್ ಲೈಟ್ ಆಂದೋಲನ ಆಯೋಜಿಸುವ ಬಗ್ಗೆಯೂ ಚರ್ಚೆಯಾಯಿತು.
1627 ಪೋಲಿಂಗ್ ಬೂತ್ ನ ಗ್ರಾಸ್ ರೂಟ್ ಲೆವಲ್ ಅಧಿಕಾರಿಗಳ ಜೊತೆ ವನ್ ಟು ವನ್ ವೋಟಿಂಗ್ ಬಗ್ಗೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಉತ್ತಮ ಪ್ರೇರೇಪಕರು.
ಎನ್ ಜಿ ಒ ಗಳ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ಸ್ವಯಂಪ್ರೇರಿತವಾಗಿ ಶೇಕಡವಾರು ಮತದಾನ ಹೆಚ್ಷಿಸಲು ಮುಖ್ಯ. ಹಾಗಾಗಿ ಅವರ ನೆರವನ್ನು ಪಡೆಯಬಹುದು. 
ಇಲಾಖಾ ಮುಖ್ಯಸ್ಥರು ಚುನಾವಣಾ ಪ್ರಕ್ರಿಯೆಯಲ್ಲಿ ನಿರತವಾಗಿದ್ದರೆ ಅವರ ನಂತರದ ಅಧಿಕಾರಿಗಳು ಸ್ವೀಪ್ ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಧಿಕಾರಿಗಳು ಸಭೆಗೆ ಗೈರಾದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೀನುಗಾರಿಕೆ ಇಲಾಖೆ ಬೀಚ್ಗಳಲ್ಲಿ, ಬಂದರುಗಳಲ್ಲಿ ಮತದಾನಕ್ಕೆ ಪ್ರೇರೆಪಿಸಬೇಕು. ಯುವ, ಖಾಸಗಿ ಮತದಾರರಿಗೆ ಒಂದು ನೈತಿಕ ಮತದಾನದ ಬಗ್ಗೆ, ಮತದಾನ ಮಾಡುವ ಪ್ರಾಮ್ಯುಖತೆ ಬಗ್ಗೆ ಎಲ್ಲರಿಗೆ ಅವರು ಕೆಲಸ ಮಾಡುವ ಪ್ರದೇಶಗಳಲ್ಲಿ ಪ್ರಮಾಣವಚನ ನೀಡಿ ಮತದಾನ ಮಾಡಲು ಪ್ರೇರೆಪಿಸಿ. ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ಆದೇಶಿಸಬೇಕು ಎಂದು ಸಿಇಒ ಹೇಳಿದರು.
ನಗರದ ಪ್ರಮುಖ ಖಾಸಗಿ, ಟ್ಯೂಷನ್ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರಜೆ ನೀಡದಿರುವುದರಿಂದ ಮತದಾನ ಮಾಡದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಬರವಣಿಗೆಗಾರರು ಪತ್ರಿಕೆಗಳಿಗೆ ಮತದಾನದ ಬಗ್ಗೆ ಪ್ರೇರಪಣೆ ನೀಡುವ ಲೇಖನ ಬರೆಯುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಅಂಚೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು, ಪೋಸ್ಟಲ್ ಇಲಾಖೆಯಿಂದ 'ಮತದಾನದ ಮಾಡಿ' ಎಂಬ ಘೋಷಣೆಯು ಗ್ರಾಹಕರಿಗೆ ತಲುಪಬೇಕೆಂದು ಸೂಚಿಸಿದರು.
ಬ್ಯಾಂಕ್ ಗಳ ಸಕ್ರಿಯ ಪಾಲ್ಗೊಳ್ಳುವಿಕೆ ಬಗ್ಗೆಯೂ ಕೋರಲಾಯಿತು. ಸಭೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.