ಮಂಗಳೂರು, ಏಪ್ರಿಲ್. 10 : ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ದುರಂತಕ್ಕೆ ಸಂಬಂಧಿಸಿದಂತೆ ಎಚ್ ಪಿ ಸಿ ಎಲ್ ಕಂಪೆನಿ ಅಧಿಕಾರಿ ನೀಡಿದ ಪ್ರತಿಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕಾನೂನು ಪ್ರಕಾರ ಕಂಪೆನಿಯನ್ನೇ ದುರ್ಘಟನೆಗೆ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಂಪೆನಿ ಗಳು ಟ್ಯಾಂಕರ್ ಗಳಲ್ಲಿ ಅನಿಲ ತುಂಬಿ ಸಾಗಿಸು ವಾಗ ಜವಾ ಬ್ದಾರಿ ಇಲ್ಲದೆ ವರ್ತಿ ಸುವು ದನ್ನು ಯಾವುದೇ ಕಾರ ಣಕ್ಕೆ ಕ್ಷಮಿ ಸುವು ದಿಲ್ಲ. ಕಾನೂನು ಉಲ್ಲಂ ಘನೆಗೆ ಇಲ್ಲಿ ತಾನು ಅವ ಕಾಶ ನೀಡು ವುದಿಲ್ಲ ಎಂದು ತಮ್ಮ ಕಚೇರಿ ಯಲ್ಲಿ ಈ ಸಂಬಂಧ ಇಂದು ನಡೆಸಿದ ಸಭೆಯಲ್ಲಿ ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಹರ್ಷಗುಪ್ತ, ನಿಮ್ಮನ್ನು ಈ ಘಟನೆಯಲ್ಲಿ ಆರೋಪಿಗಳನ್ನಾಗಿ ಮಾಡಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ ಎಂದರು.
ದುರ್ಘಟನೆ ಬಗ್ಗೆ ಅನಿಲ ಕಂಪೆನಿಗಳು ಹೊಣೆ ಹೊರಲು ವಿಫಲರಾಗಿದ್ದಾರೆ. ಮುಗ್ಧ ಜನರ ಜೀವನದ ಜೊತೆ ಆಟವಾಡಿದ್ದಾರೆ.ಇವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಟ್ಯಾಂಕರ್ ಗಳನ್ನು ನಿಲ್ಲಿಸಿ, ಇಬ್ಬರು ಚಾಲಕರು ಮತ್ತು ಕ್ಲೀನರ್ ಇದ್ದಾರೆಯೇ ಎಂದು ಪರಿಶೀಲಿಸುವುದಲ್ಲದೆ, ಅವರ ಎಲ್ಲ ದಾಖಲೆ ಪತ್ರಗಳನ್ನು ಪರಿಶೀಲಿಸಬೇಕು. ಕಾನೂನು ಉಲ್ಲಂಘಿಸಿದರೆ ಟ್ಯಾಂಕರ್ ಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದರು. ಟ್ಯಾಂಕರ್ ಗಳಿಗೆ ಸ್ಪೀಡ್ ಲಿಮಿಟ್ ಮೀರಲು ಅವಕಾಶ ನೀಡದಂತೆ ಕ್ರಮಕೈಗೊಳ್ಳಿ ಎಂದರು.
ರಾಷ್ಟ್ರೀ ಯ ಹೆದ್ದಾ ರಿಯ ಅಪಾ ಯಕಾರಿ ತಿರುವು ಗಳನ್ನು ಸುಧಾ ರಿಸಲು ಇರುವ ಕ್ರಮ ಗಳೇನು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾ ರಿಗಳ ಅಭಿ ಪ್ರಾಯ ಪಡೆ ದರು. ತಹ ಸೀಲ್ದಾರ್ ಅವ ರಿಂದ ಸಮಗ್ರ ನಷ್ಟದ ಅಂದಾಜು ವಿವರ ಪಡೆದು ಮೃತ ಪಟ್ಟ ಕುಟುಂಬ ಗಳಿಗೆ ಸೂಕ್ತ ಪರಿ ಹಾರ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು. ಉಪ್ಪಿನಂಗಡಿಯಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಲು ಸೂಚನೆ ನೀಡಿದರು.
ಸ್ಫೋಟಕ ವಸ್ತುಗಳನ್ನು ಸಾಗಿಸಲು ಇರುವ ಕಾನೂನು ಹಾಗೂ ನಿರ್ಬಂಧಗಳನ್ನು ಪರಿಶೀಲಿಸಿ ಈ ಸಂಬಂಧ ಚೀಫ್ ಕಂಟ್ರೋಲರ್ ಆಫ್ ಎಕ್ಸ್ಪ್ಲೋಸಿವ್ ಅವರನ್ನು ಸಂಪರ್ಕಿಸಿ ಇರುವ ಗೈಡ್ ಲೈನ್ಸ್ ಬಗ್ಗೆ ಮಾಹಿತಿ ಪಡೆಯಲು ಫ್ಯಾಕ್ಟರಿಸ್ ಅಂಡ್ ಬಾಯ್ಲರ್ಸ್ನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂತ್ರಜ್ಞಾನ ಯುಗದಲ್ಲಿ ಇಂತಹ ಕಂಪೆನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ತಂತ್ರಜ್ಞಾನದ ನೆರವಿನಿಂದ ಭೀಕರ ಅವಘಡಗಳನ್ನು ತಡೆಯಲು ಸಾಧ್ಯವಿದೆ. ಕಂಪೆನಿಯ ಆಫ್ ಸೈಟ್ ಎಮರ್ಜೆನ್ಸಿ ಪ್ಲಾನ್ ಕರ್ತವ್ಯ ನಿರ್ವಹಿಸಿದ ರೀತಿ ಸರಿ ಇಲ್ಲ. ಎಸ್ ಒ ಪಿ(ಸ್ಟ್ಯಾಂಡಡ್ರ್ ಆಪರೇಟಿಂಗ್ ಪ್ರೊಸಿಜರ್) ಪಾಲನೆಯಾಗಿರುವುದಿಲ್ಲ. ಘಟನೆಯ ನಂತರ ಸಾರ್ವಜನಿಕ ಸಂಸ್ಥೆ ಎಚ್ ಪಿ ಸಿ ಎಲ್ ಕಂಪೆನಿ ಸ್ಪಂದಿಸಿದ ರೀತಿ ದುರದೃಷ್ಟಕರ ಎಂದರು.
ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಘಟನೆಯ ಬಗ್ಗೆ ಹಾಗೂ ಇಂತಹ ದುರ್ಘಟನೆಗಳನ್ನು ತಡೆಯುವ ಬಗ್ಗೆ ತಮ್ಮ ಅನುಭವ ಹಾಗೂ ಯೋಜನೆಗಳನ್ನು ಸಭೆಯ ಮುಂದಿಟ್ಟರು. ಅಗ್ನಿಶಾಮಕ ಪಡೆಯ ಜಿಲ್ಲಾ ಮುಖ್ಯಸ್ಥ ವರದರಾಜನ್ ಅವರು, ಕಂಪೆನಿಯು ದುರ್ಘಟನೆಯ ವೇಳೆ ಬೇಜವ್ದಾರಿಯುತವಾಗಿ ವರ್ತಿಸಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
48 ಗಂಟೆಗಳ ಒಳಗೆ ತಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಹಿತ ಬರುವಂತೆ ಎಚ್ ಪಿ ಸಿ ಎಲ್ ಅಧಿಕಾರಿಗೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ಬಿಪಿಸಿಎಲ್, ಐಒಸಿ ಕಂಪೆನಿಯ ಪ್ರತಿನಿಧಿಗಳು, ಎಂ ಆರ್ ಪಿ ಎಲ್ ಅಧಿಕಾರಿಗಳು ಸಭೆಯಲ್ಲಿದ್ದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ, ಮಹಾನಗರಪಾಲಿಕೆ ಆಯುಕ್ತ ಡಾ ಹರೀಶ್, ಡಿಸಿಪಿ ಮುತ್ತುರಾಯ ಅವರು ಉಪಸ್ಥಿತರಿದ್ದರು.