ಮಂಗಳೂರು,ಏಪ್ರಿಲ್.25: ಮುಂಬರುವ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23,414 ಮತದಾರರನ್ನು ಕೈಬಿಟ್ಟು 62,140 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದ್ದು, ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 15,00,385 ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹರ್ಷ ಗುಪ್ತ ತಿಳಿಸಿದ್ದಾರೆ.
ಇಂದು ತಮ್ಮ ಜಿಲ್ಲಾ ಧಿಕಾರಿ ಕಚೇ ರಿಯಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲೆ ಯಲ್ಲಿ ಸ್ವೀಪ್ ಕಾರ್ಯ ಕ್ರಮ ಯಶಸ್ವಿ ಯಾಗಿದೆ. ಬೆಳ್ತಂ ಗಡಿ ಯಲ್ಲಿ 6,885 (1,93,723), ಮೂಡು ಬಿದರೆಯಲ್ಲಿ 8,743 (1,73,125), ಮಂಗ ಳೂರು ನಗರ ಉತ್ತರ 8,055 (2,04,29099), ಮಂಗಳೂರು ನಗರ ದಕ್ಷಿಣ 9,085 (2,04,949), ಮಂಗ ಳೂರು 6,677(1,68,266), ಬಂಟ್ವಾಳ 8,730(1,96,944), ಪುತ್ತೂರು 7,744(1,79,170) ಮತ್ತು ಸುಳ್ಯದಲ್ಲಿ 6,221(1,79,918) ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ವಿವರಿಸಿದರು.
ಹೊಸದಾಗಿ ಸೇರ್ಪಡೆಯಾದ ಮತದಾರಿಗೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ ವಿತರಿಸಲಾಗುವುದು. ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 1,715 ಮತಗಟ್ಟೆಗಳಿವೆ. ಇವುಗಳ ಪೈಕಿ 88 ಹೆಚ್ಚುವರಿ ಮತಗಟ್ಟೆಗಳಾಗಿವೆ. ಗ್ರಾಮಾಂತರ ಪ್ರದೇಶಗಳಲ್ಲಿ 1200ಕ್ಕಿಂತ ಹೆಚ್ಚು ಮತದಾರರಿರುವಲ್ಲಿ ಮತ್ತು ನಗರ ಪ್ರದೇಶಗಳಲ್ಲಿ 1500ಕ್ಕಿಂತ ಹೆಚ್ಚು ಮತದಾರರಿರುವಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಹರ್ಷ ಗುಪ್ತ ವಿವರಿಸಿದರು.
ಜಿಲ್ಲೆಯಲ್ಲಿ ಶೇ.99.85 ಭಾವಚಿತ್ರ ಇರುವ ಮತದಾರ ಪಟ್ಟಿ ಇದೆ. ಒಟ್ಟು 15,00,385 ಮತದಾರರ ಪೈಕಿ 14,98,089 ಮಂದಿಯ ಭಾವಚಿತ್ರಗಳು ಮತದಾರರ ಪಟ್ಟಿಯಲ್ಲಿ ಮುದ್ರಣಗೊಂಡಿವೆ. ಕೇವಲ 2,296 ಮಂದಿಯ ಭಾವಚಿತ್ರಗಳು ಪಟ್ಟಿಯಲ್ಲಿ ಮುದ್ರಣಗೊಂಡಿಲ್ಲ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಈ ಬಾರಿ ಚುನಾವಣಾ ಆಯೋಗದಿಂದಲೇ ಮತದಾರರ ಚೀಟಿ ವಿತರಿಸಲಾಗುತ್ತಿದೆ. ಬೂತು ಮಟ್ಟದ ಅಧಿಕಾರಿಗಳು ವಿತರಿಸುವ ಮತದಾರರ ಚೀಟಿಯನ್ನು ಅಧಿಕೃತ ಗುರುತು ಪತ್ರವಾಗಿಯೂ ಮಾನ್ಯ ಮಾಡಲಾಗುವುದು ಎಂದರು.
ರಾಜಕೀಯ ಪಕ್ಷಗಳು ಮತದಾರರ ಚೀಟಿಯನ್ನು ವಿತರಿಸ ಬಹುದಾಗಿದ್ದು, ಅದು ಗುರುತಿನ ಚೀಟಿಯ ಮಾನ್ಯತೆ ಹೊಂದಿರುವುದಿಲ್ಲ. ಬೂತ್ ಮಟ್ಟದ ಅಧಿಕಾರಿಗಳು ಈ ತಿಂಗಳ ಕೊನೆಯಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವರು. ಅವರು ಮನೆ ಮನೆಗೆ ತೆರಳಿ ಮತದಾರರ ಇರುವಿಕೆಯನ್ನು ಖಚಿತ ಪಡಿಸಿಕೊಡು ಚೀಟಿ ವಿತರಿಸಲಿದ್ದಾರೆ. ಮತದಾರರು ಚುನಾವಣೆಯ ದಿನ ಅದನ್ನು ಮರೆತು ಮತಗಟ್ಟೆಗೆ ಹೋಗಿದ್ದರೆ ಅಲ್ಲೂ ಇನ್ನೊಂದು ಚೀಟಿ ಪಡೆದುಕೊಳ್ಳುವ ಅವಕಾಶವಿದೆ ಎಂದು ಹರ್ಷ ಗುಪ್ತ ನುಡಿದರು.
ಮತದಾರರ ಸ್ಲಿಪ್ ನಲ್ಲಿ ಭಾವಚಿತ್ರವಿಲ್ಲದ ಮತದಾರರು ಆಯೋಗವು ನಿಗದಿ ಪಡಿಸಿದ ಇತರ 23 ಭಾವಚಿತ್ರ ಇರುವ ಗುರುತಿನ ಚೀಟಿ ಹಾಜರು ಪಡಿಸಿ ಮತದಾನ ಮಾಡ ಬಹುದಾಗಿದೆ.
ಅಭ್ಯರ್ಥಿಯ ಚುನಾವಣಾ ಖರ್ಚು ದಾಖಲೀಕರಣ ಕಡ್ಡಾಯ:
ಒಂದು ರಾಜಕೀಯ ಪಕ್ಷಕ್ಕೆ 40 ಮಂದಿ ಸ್ಟಾರ್ ಪ್ರಚಾರಕರನ್ನು ಹೊಂದುವ ಅವಕಾಶವಿದೆ. ಅವರು ಭಾಗವಹಿಸುವ ಪ್ರಚಾರ ಸಭೆಗಳ ಖರ್ಚಿನಲ್ಲಿ ಪ್ರತಿಶತ 50 ಪಕ್ಷಕ್ಕೆ ಮತ್ತು ಉಳಿದ ಭಾಗ ಅಭ್ಯರ್ಥಿಗಳ ಖರ್ಚಿಗೆ ಸೇರ್ಪಡೆಯಾಗುತ್ತದೆ. ಒಂದರಿಂದ ಹೆಚ್ಚು ಅಭ್ಯರ್ಥಿಗಳು ಆ ಸಮಾರಂಭದ ವೇದಿಕೆಯಲ್ಲಿ ಕಾಣಿಸಿಕೊಂಡರೆ ಅಥವಾ ಹೆಸರು ಪ್ರಕಟವಾದರೆ ಅರ್ಧ ಖರ್ಚನ್ನು ಎಲ್ಲಾ ಅಭ್ಯರ್ಥಿಗಳಿಗೂ ಹಂಚಿ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಚುನಾ ವಣಾ ಪ್ರಚಾ ರಕ್ಕಾಗಿ ಅಭ್ಯರ್ಥಿ ಯು ಉಪ ಯೋಗಿ ಸುವ ವಾಹ ನಕ್ಕೆ ಸಂಬಂಧ ಪಟ್ಟ ಚುನಾ ವಣಾ ಧಿಕಾರಿ ಯಿಂದ ಅನು ಮತಿ ಪಡೆಯ ಬೇಕು ಮತ್ತು ಅನು ಮತಿ ಪತ್ರವನ್ನು ವಾಹ ನದಲ್ಲಿ ಪ್ರದ ರ್ಶಿಸ ಬೇಕು. ಅದೇ ರೀತಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಸ್ಟಾರ್ ಪ್ರಚಾರಕರು ಉಪಯೋಗಿಸುವ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಅನುಮತಿಗೆ ಕೋರಿಕೆ ಸಲ್ಲಿಸ ಬೇಕು ಎಂದು ಗುಪ್ತ ಹೇಳಿದರು.
ಈ ವಾಹನವನ್ನು ರಥವಾಗಿ ಬದಲಿಸ ಬಳಸಲು ಅನುಮತಿ ಇರುವುದಿಲ್ಲ. ಮಾತ್ರವಲ್ಲದೆ ವಾಹನಕ್ಕೆ ಧ್ವನಿವರ್ಧಕ ಅಳವಡಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ನುಡಿದರು. ಈ ತನಕ ಜಿಲ್ಲೆಯಲ್ಲಿ ಪ್ರಚಾರಕ್ಕೆ ಅನುಮತಿ ನೀಡಿದ ವಾಹನಗಳ ಸಂಖ್ಯೆ 91. ಬೆಳ್ತಂಗಡಿ 21, ಮೂಡುಬಿದರೆ 7, ಮಂಗಳೂರು ನಗರ ಉತ್ತರ 9, ಮಂಗಳೂರು ನಗರ ದಕ್ಷಿಣ 13, ಮಂಗಳೂರು 10, ಬಂಟ್ವಾಲ 14, ಪುತ್ತೂರು 11 ಮತ್ತು ಸುಳ್ಯದಲ್ಲಿ 6 ವಾಹನಗಳಿಗೆ ಅನುಮತಿ ನೀಡಲಾಗಿದೆ. ಅದೇ ರೀತಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ವಾಹನಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 76 ಪ್ರಚಾರ ಸಭೆ ಸಮಾರಂಭಗಳನ್ನು ನಡೆಸಲು ಈ ತನಕ ಅನುಮತಿ ನೀಡಲಾಗಿದೆ. ಅದರಂತೆ ಮೂಡುಬಿದರೆಯಲ್ಲಿ 8, ಮಂಗಳೂರು ನಗರ ಉತ್ತರದಲ್ಲಿ 6, ಮಂಗಳೂರು ನಗರ ದಕ್ಷಿಣದಲ್ಲಿ 10, ಮಂಗಳೂರಿನಲ್ಲಿ 8, ಬಂಟ್ವಾಳದಲ್ಲಿ 19, ಪುತ್ತೂರಿನಲ್ಲಿ 14 ಮತ್ತು ಸುಳ್ಯದಲ್ಲಿ 11 ಸಭೆ ಸಮಾರಂಭಗಳನ್ನು ನಡೆಸಲು ಪರವಾನಗಿ ನೀಡಲಾಗಿದೆ. ಶೆಕೆಯ ಹಿನ್ನೆಲೆಯಲ್ಲಿ ನೀರು ಅಥವಾ ಮಜ್ಜಿಗೆ ವಿತರಿಸಲು ಅವಕಾಶವಿದೆ. ಆದರೆ ಇತರ ಯಾವುದೇ ಆಹಾರ ಒದಗಿಸಲು ಅವಕಾಶವಿಲ್ಲ. ಪಾನೀಯ ವಿತರಣೆಯ ಖರ್ಚನ್ನು ಕೂಡಾ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದರು.
ಕೌಟುಂಬಿಕ ಮತ್ತು ಧಾರ್ಮಿಕ ಸಮಾರಂಭಗಳಿಗೆ ಅನುಮತಿ ಪಡೆಯ ಬೇಕಾಗಿಲ್ಲ. ಆದರೆ ಕೆಲವೊಮ್ಮೆ ಚುನಾವಣಾ ಸಿಬ್ಬಂದಿ ಅಂತಹ ಸಮಾರಂಭಗಳಿಗೂ ತೆರಳಿ ದಾಖಲೀಕರಣ ಮಾಡಿಕೊಳ್ಳುವ ಸಂಭವ ಇಲ್ಲದಿಲ್ಲ. ಹಾಗಾಗಿ ಸಮಾರಂಭ ಹಮ್ಮಿ ಕೊಳ್ಳುವವರು ಚುನಾವಣಾ ನೀತಿ ಸಂಹಿತೆಗೆ ಧಕ್ಕೆ ಬರದಂತೆ ನೋಡಿ ಕೊಳ್ಳುವುದು ಸೂಕ್ತ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಿದರು.
ಮಾಧ್ಯಮ ದೃಢೀಕರಣ:ಜಿಲ್ಲೆಯ ಕ್ಷೇತ್ರಗಳ ಚುನಾವಣೆ ಕುರಿತ ಮುದ್ರಣ ಮತ್ತು ಸ್ಥಳೀಯ ದೃಶ್ಯ ಮಾಧ್ಯಮಗಳ ಸುದ್ದಿಗಳನ್ನು ನಿರಂತರವಾಗಿ ವೀಕ್ಷಿಸಲಾಗುತ್ತಿದೆ. ಮಾಧ್ಯಮ ದೃಢೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣಾ ಸಮಿತಿ(ಎಂಸಿಎಂಸಿ ಸೆಲ್) ಬರುವ ದೂರುಗಳನ್ನು ದಿನನಿತ್ಯ ಸಮಿತಿಯಲ್ಲಿಟ್ಟು ತೀರ್ಮಾನ ಕೈಗೊಳ್ಳುತ್ತದೆ. ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರವಾಗುವ ಚುನಾವಣಾ ಸಂಬಂಧಿ ಜಾಹೀರಾತುಗಳಿಗೆ ಸಮಿತಿಯಿಂದ ಮುಂಗಡ ಒಪ್ಪಿಗೆ ಪಡೆಯ ಬೇಕಾಗುತ್ತದೆ. ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳನ್ನು ಮೂರು ದಿನಗಳೊಳಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಜರು ಪಡಿಸ ಬೇಕು ಎಂದರು.
ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿರುವ ಎಂಸಿಎಂಸಿ ಸೆಲ್ ಕೆಲವು ಸುದ್ದಿಗಳನ್ನು ಕಾಸಿಗಾಗಿ ಸುದ್ದಿಗಳು ಎಂದು ಪರಿಗಣಿಸಿದೆ. ಈ ಸಂಬಂಧ ಅಭ್ಯರ್ಥಿಗಳಿಗೆ 7 ನೋಟೀಸು ಜಾರಿ ಮಾಡಿದೆ. ಒಂದು ಸ್ಥಳಿಯ ಚಾನೆಲ್ ಗೂ ಕಾರಣ ಕೇಳಿ ನೋಟೀಸು ಜಾರಿ ಮಾಡಿದೆ. ಈ ತೀರ್ಮಾನದ ವಿರುದ್ಧ ಅವರು ರಾಜ್ಯ ಸಮಿತಿಗೆ ಮೇಲ್ಮನವಿ ಮಾಡಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿವರಿಸಿದರು.
ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕುರಿತಾದ ಆರು ದೂರುಗಳು ಸ್ವೀಕರಿಸಲ್ಪಟ್ಟಿವೆ. ಎರಡು ದೂರುಗಳನ್ನು ಮುಖ್ಯ ಚುನಾವಣಾಧಿಕಾರಿಯವರಿಗೆ ಕಳುಹಿಸಿ ಕೊಡಲಾಗಿದೆ. ಒಂದು ದೂರಿನಲ್ಲಿ ಮುದ್ರಕರಿಗೆ ನೋಟೀಸು ನೀಡಲಾಗಿದೆ. ಮಿಕ್ಕ ದೂರುಗಳು ಪರಿಶೀಲನೆಯ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ವೆಚ್ಚಕ್ಕೆ ಕಡಿವಾಣ:ಪ್ರತಿಯೊಬ್ಬ ಅಭ್ಯರ್ಥಿ ರೂ.16 ಲಕ್ಷ ವ್ಯಯಿಸಲು ಆಯೋಗದ ಸಮ್ಮತಿ ಇದೆ. ನಮ್ಮ ತಂಡಗಳು ಛಾಯಾ ಲೆಕ್ಕಪತ್ರಗಳ ರಿಜಿಸ್ಟರ್ ನಿರ್ವಹಣೆ ಮಾಡುತ್ತವೆ. ಅಭ್ಯರ್ಥಿ ನೀಡುವ ಲೆಕ್ಕವನ್ನು ಅದರೊಂದಿಗೆ ಹೋಲಿಕೆ ಮಾಡಲಾಗುವುದು. ಚುನಾವಣೆ ಮುಗಿದು ಒಂದು ತಿಂಗಳ ಒಳಗೆ ಎಲ್ಲಾ ಅಭ್ಯರ್ಥಿಗಳು ಖರ್ಚುವೆಚ್ಚದ ವಿವರಗಳನ್ನು ಒಪ್ಪಿಸುವುದು ಕಡ್ಡಾಯವಾಗಿದೆ. ಮತ ಎಣಿಕೆ ದಿನಾಂಕದವರೆಗೆ ಖರ್ಚು ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅಭ್ಯರ್ಥಿಗಳು ಅಧಿಕ ವೆಚ್ಚ ಮಾಡಿದರೆ ಆ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನೇ ಆಯೋಗ ರದ್ದು ಪಡಿಸ ಬಹುದು. ಆರು ವರ್ಷ ಅಂತಹ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರ ಬಹುದಾಗಿದೆ. ಈ ನಿರ್ಧಾರಗಳನ್ನು ಚುನಾವಣಾ ಆಯೋಗವೇ ಕೈಗೊಳ್ಳುತ್ತದೆ ಎಂದರು.
ಚುನಾವಣಾ ಸಿಬ್ಬಂದಿ:ಚುನಾವಣಾ ಕರ್ತವ್ಯಕ್ಕಾಗಿ 11 ಸಾವಿರ ಸಿಬ್ಬಂದಿಯನ್ನು ಎಚ್ಆರ್ಎಂಎಸ್ ದತ್ತಾಂಶ ಬಳಸಿ ಗುರುತಿಸಲಾಗಿದೆ. ನಿವೃತ್ತಿ ಹೊಂದುವವರನ್ನು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಕೈಬಿಡಲಾಗಿದೆ. ಸರಕಾರಿ ವೇತನ ಪಡೆಯುವವರು ಮಾತ್ರ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಖಾಸಗಿ ಸಿಬ್ಬಂದಿಗಳು ಇರುವುದಿಲ್ಲ. 8,500 ಸಿಬ್ಬಂದಿಗೆ ಏ.24 ಮತ್ತು 29ರಂದು ತರಬೇತಿ ನಿಗದಿಯಾಗಿದೆ ಎಂದರು.
8,500 ಚುನಾವಣಾ ಸಿಬ್ಬಂದಿ, 1800 ಪೊಲೀಸ್ ಸಿಬ್ಬಂದಿ ಮತ್ತು ಸುಮಾರು 520 ಬಸ್ಸುಗಳ ಚಾಲಕರು ಮತ್ತು ಕ್ಲೀನರ್ಗಳ ಅಂಚೆ ಮತಕ್ಕೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. 8ರಿಂದ 10 ಸಾವಿರ ಅಂಚೆ ಮತಗಳ ಗುರಿ ಹೊಂದಲಾಗಿದೆ. ಅಂಚೆ ಮತಪತ್ರಗಳ ಗೊಂದಲಗಳನ್ನು ಕಡಿಮೆ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಗುಪ್ತ ವಿವರಿಸಿದರು.
ವಿದ್ಯುನ್ಮಾನ ಮತ ಯಂತ್ರಗಳು:ಜಿಲ್ಲೆಯಲ್ಲಿ ಒಟ್ಟು 1,715 ಮತಗಟ್ಟೆಗಳಿದ್ದು; ಅಷ್ಟೇ ವಿದ್ಯುನ್ಮಾನ ಮತ ಯಂತ್ರಗಳನ್ನು ಸಿದ್ಧ ಪಡಿಸಲಾಗಿದೆ. ಜತೆಗೆ 175 ಹೆಚ್ಚುವರಿ ಮತ ಯಂತ್ರಗಳನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಬೆಳ್ತಂಗಡಿಗೆ 24, ಮೂಡುಬಿದರೆಗೆ 20, ಮಂಗಳೂರು ನಗರ ಉತ್ತರಕ್ಕೆ 23, ಮಂಗಳೂರು ನಗರ ದಕ್ಷಿಣಕ್ಕೆ 21, ಮಂಗಳೂರಿಗೆ 20, ಬಂಟ್ವಾಳಕ್ಕೆ 24, ಪುತ್ತೂರಿಗೆ 21 ಮತ್ತು ಸುಳ್ಯಕ್ಕೆ 22 ಹೆಚ್ಚುವರಿ ಮತ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹೇಳಿದರು.
ಚುನಾವಣಾ ಸಿಬ್ಬಂದಿಗಳಿಗೆ ಮತಯಂತ್ರ ನಿರ್ವಹಣೆಯ ಕುರಿತು ತರಬೇತಿ ನೀಡಲಾಗುವುದು. ಚುನಾವಣೆಯ ಬೆಳಿಗ್ಗೆ ಏಜೆಂಟರ ಸಮ್ಮುಖದಲ್ಲಿ ಮತದಾನ ಪ್ರಾತ್ಯಕ್ಷತೆ ಮೂಲಕ ಯಂತ್ರವನ್ನು ಪರೀಕ್ಷಿಸಿದ ಬಳಿಕ ಯಂತ್ರವನ್ನು ಮರು ಸೆಟ್ ಮಾಡುವಂತೆ ಸೂಚಿಸಲಾಗುವುದು ಗುಪ್ತ ಹೇಳಿದರು. ಚುನಾವಣೆ ಸಂದರ್ಭದಲ್ಲಿ ಯಂತ್ರ ಕೈಕೊಟ್ಟರೆ ಕೂಡಲೆ ಸೆಕ್ಟರ್ ಅಧಿಕಾರಿಗಳು ಅಲ್ಲಿಗೆ ಧಾವಿಸಿ ಸಮಸ್ಯೆಯನ್ನು ನಿವಾರಿಸಲಿರವರು. ಸೆಕ್ಟರ್ ಅಧಿಕಾರಿಗಳು 10 ಮತಗಟ್ಟೆಗಳಿಗೆ ಒಬ್ಬರಂತೆ ಕರ್ತವ್ಯದಲ್ಲಿರುತ್ತಾರೆ ಎಂದು ಜಿಲ್ಲಾಧಿಕಾರಿ ನುಡಿದರು.
ಬಿಗು ಬಂದೋಬಸ್ತ್:ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಇರುತ್ತದೆ. ಗಡಿಭಾಗಗಳಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಉಪಸ್ಥಿತಿಯಲ್ಲಿ ತಪಾಸಣಾ ಠಾಣೆಗಳನ್ನು ರಚಿಸಲಾಗಿದೆ. ಈ ಠಾಣೆಗಳು ದಿನ 24 ಗಂಟೆಗಳ ಕಾಲ ಕಾರ್ಯನಿರತವಾಗಿವೆ. ಹಣ, ಮದ್ಯ, ಆಯುದ, ವಸ್ತುಗಳ ಅಕ್ರಮ ಸಾಗಾಟ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕಾಯರ್ಾಚರಣೆಯ ವಿಡೀಯೋ ಚಿತ್ರೀಕರಣವನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಮಲ್ಲಾ ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ, ವೀಡಿಯೋ ಚಿತ್ರೀಕರಣ, ವೆಬ್ ಕ್ಯಾಮರಾ ಅಥವಾ ಮೈಕ್ರೋ ವೀಕ್ಷಕರನ್ನು ನಿಯುಕ್ತಿ ಮಾಡುತ್ತಿರುವುದರಿಂದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.