ಮಂಗಳೂರು,
ಎಪ್ರಿಲ್. 29:-ದಕ್ಷಿಣಕನ್ನಡ ಜಿಲ್ಲೆಯಲ್ಲಿ(ಸುಳ್ಯ ಹೊರತುಪಡಿಸಿ) '
ಆಧಾರ್ ' ದ್ವಿತೀಯ ಹಂತದ ನೋಂದಣಿ ಕಾರ್ಯ ಯೋಜನೆಯನ್ನು ಅನುಷ್ಟಾನಗೊಳಿಸುವರೇ ಒಟ್ಟು 15
ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು,ಮಂಗಳೂರು ಮಹಾನಗರಪಾಲಿಕೆ ವಾಣಿಜ್ಯ
ಸಂಕೀರ್ಣ,ಲಾಲ್ಭಾಗ್ ,ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ ,ಸಮುದಾಯ
ಭವನ ಪೆರ್ಮನ್ನೂರು,ಸಮುದಾಯ ಭವನ ಉಳ್ಳಾಲ ಮತ್ತು ಕಾರ್ನಾಡ್ ಸದಾಶಿವ ರಾವ್ ಸ್ಮಾರಕ
ಕಟ್ಟಡ,ಲೈಟ್ ಹೌಸ್ ಹಿಲ್ ರಸ್ತೆ,ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್,ಐಬಿ ನಾಡ ಕಚೇರಿ
ಬಳಿ,ಮೂಡಬಿದ್ರೆ,ಹಳೆ ತಾಲೂಕು ಪಂಚಾಯತ್ ಕಚೇರಿ ಕಟ್ಟಡ,ಬಿ.ಸಿ ರೋಡ್,ಸಮುದಾಯ ಭವನ
ಪುತ್ತೂರು,ಎಂಆರ್ ಪಿ ಎಲ್ ಕುತ್ತೆತ್ತೂರು,ಸುರತ್ಕಲ್ ಮತ್ತು ಪಂಚಾಯತ್ ಕಚೇರಿ ವಿಟ್ಲ
ಗ್ರಾಮ ಪಂಚಾಯತ್ ಕಚೇರಿ ಪುದು,ಗ್ರಾಮ ಪಂಚಾಯತ್ ಉಪ್ಪಿನಂಗಡಿ,ಪಟ್ಟಣ ಪಂಚಾಯತ್
ಬೆಳ್ತಂಗಡಿ ಮತ್ತು ಧರ್ಮಸ್ಥಳ ಪಂಚಾಯತ್ ಗಳಲ್ಲಿ ದ್ವಿತೀಯ ಹಂತದ ಆಧಾರ್ ನೋಂದಣಿ ಕಾರ್ಯ
ಪ್ರಗತಿಯಲ್ಲಿದೆ.
ದಿನಾಂಕ 1-5-13 ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮತ್ತು 5-5-13 ರಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಆಧಾರ್ ಕೇಂದ್ರಗಳಿಗೆ ರಜೆ ಇರುತ್ತದೆ. ಆದ್ದರಿಂದ ಆಧಾರ್ ಕೇಂದ್ರಗಳು ಕಾರ್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ. ಇತರ ದಿನಗಳಲ್ಲಿ ಸಾರ್ವಜನಿಕರು ಎಂದಿನಂತೆ ಆಯಾಯ ಕೇಂದ್ರಗಳಲ್ಲಿ ಹಾಜರಾಗಿ ನೋಂದಣಿ ಮಾಡಿಸಿಕೊಳ್ಳಬಹುದೆಂದು ದಕ್ಷಿಣಕನ್ನಡ ಅಪರ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.