Monday, April 1, 2013

ನಾವು ಮತದಾನ ಮಾಡುತ್ತೇವೆ ನೀವು?


ಮಂಗಳೂರು,ಏಪ್ರಿಲ್.01:ಜಿಲ್ಲೆಯ ಎಲ್ಲ ಅಧಿಕಾರಿಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳು ಮತದಾನ ಮಾಡಬೇಕು. ಇದಕ್ಕಾಗಿ ಪೋಸ್ಟಲ್ ಮತದಾನದ ಬಗ್ಗೆ ಅಧಿಕಾರಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್  ನಲ್ಲಿ ನಡೆ ಯಿತು.
ಸ್ವೀಪ್  ಕಾರ್ಯ ಕ್ರಮ ದಡಿ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾ ರಿಗಳ ಅಧ್ಯಕ್ಷ ತೆಯಲ್ಲಿ ನಡೆದ ಸಭೆ ಯಲ್ಲಿ ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ. ಹರೀಶ್  ಕುಮಾರ್ ಅವರು ಅಧಿ ಕಾರಿ ಗಳಿಗೆ ಮಾರ್ಗ ದರ್ಶನ ಮಾಡಿ  ಫಾರ್ಮ್ ನಂಬರ್ 6ನ್ನು ಎಲ್ಲ ಅಧಿಕಾ ರಿಗಳು ಪಡೆದು ಕೊಂಡು ಹೆಸರು ನೋಂದಾಯಿಸಿ ಎಂದು ಸೂಚಿಸಿದರು.
ಸ್ವೀಪ್ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ ಎಥಿಕಲ್ ವೋಟಿಂಗ್ ಬಗ್ಗೆ ಮತದಾನ ಮಾಡುವಾಗ 'ಮನದ ಮಾತಿಗೆ ಮನ್ನಣೆಯಿರಲಿ' ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸವಿವರ ಚರ್ಚೆನಡೆಯಿತು.
ಎಲ್ಲ ಇಲಾಖೆಗಳು ರಿಸಿಪ್ಟ್ ನೀಡುವಾಗ. ಮತದಾನದ ಬಗ್ಗೆ ಮಾಹಿತಿ ನೀಡುವ ಸ್ಲೋಗನ್ ಗಳನ್ನು ಸೀಲ್ ಮಾಡಿ ನೀಡಿ ಎಂದು ಸಲಹೆ ಮಾಡಿದರು. ಸಹಕಾರಿ ಸಂಘಗಳು ಮತ್ತು ಕೆ ಎಂ ಎಫ್ ನವರು ತಮ್ಮ ತಳಮಟ್ಟದ ಗುಂಪುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು.
ಮತ ಖರೀದಿಸಲು ಸಾಧ್ಯವಿಲ್ಲ; ಹಾಗೂ ಯಾವುದೇ ಆಮಿಷಕ್ಕೆ ಒಳಗಾಗದೆ ನಾನು ಮತದಾನ ಮಾಡುತ್ತೇನೆ ಎಂಬ ಅರಿವು ಮೂಡಿಸಲು ಸಾಧ್ಯವಾದರೆ ನಮ್ಮ ಚುನಾವಣಾ ಪ್ರಕ್ರಿಯೆ ಯಶಸ್ವಿಯಾದಂತೆ ಎಂದು ಪಾಲಿಕೆ ಆಯುಕ್ತರು ಹೇಳಿದರು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗೆ 1077 ನಂಬರ್ ಗೆ ದೂರವಾಣಿ ಕರೆ ಮಾಡಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಾಲಭವನದಲ್ಲಿ ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಒಕ್ಕೂಟದ ಮಹಿಳೆಯರಿಗೆ ಅರಿವು ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.