ಮಂಗಳೂರು, ಏಪ್ರಿಲ್.19 : ಭಾರತ ಚುನಾವಣಾ ಆಯೋಗವು ಪ್ರಜಾಪ್ರಾತಿನಿಧ್ಯ ಕಾಯಿದೆ. 1951ರ
ಪ್ರಕರಣ 127ಎ ಅನ್ವಯ ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸಲ್ಪಡುವ ಕರಪತ್ರ,ಪೋಸ್ಟರ್
ಇತ್ಯಾದಿಗಳ ವಿವರಗಳನ್ನು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಯವರಿಗೆ 3 ದಿನಗಳೊಳಗಾಗಿ
ಪ್ರಕಾಶಕರ/ಮುದ್ರಕರ ಎ ಮತ್ತು ಬಿ ಘೋಷಣೆಯೊಂದಿಗೆ ಸಲ್ಲಿಸಿ ಅನುಮೋದನೆ ಪಡೆದು
ಪ್ರಕಟಪಡಿಸುವ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಮಾಧ್ಯಮದ ಮೂಲಕ ತಿಳಿಸಲಾಗಿದೆ.
ಆದರೂ ಪತ್ರಿಕೆಗಳಲ್ಲಿ 127ಎ ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿ ಜಾಹೀರಾತು ಹಾಗೂ ಪ್ರಚಾರ ಪ್ರಕಟಣೆಗಳು ಮುದ್ರಿಸಲ್ಪಡುತ್ತಿರುವುದು ಕಂಡು ಬರುತ್ತಿದೆ. ಪ್ರಜಾಪ್ರಾತಿನಿಧ್ಯ ಕಾಯಿದೆಯನ್ವಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳು ಹಾಗೂ ಪೇಯ್ಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಇತರೆ ದಾಖಲೆಗಳು (other documents) ವ್ಯಾಪ್ತಿಗೆ ಒಳಪಡುತ್ತಿದ್ದು, ಅದರನ್ವಯ ಪ್ರಕರನ 127ಎ ರಲ್ಲಿನ ನಿರ್ದೇಶನಗಳನ್ನು ಇಂತಹ ಜಾಹೀರಾತುಗಳು ಹಾಗೂ ಕಾಸಿಗಾಗಿ ಸುದ್ದಿ ಗಳ ಸಂದರ್ಭದಲ್ಲಿಯೂ ಪರಿಗಣಿಸಬೇಕಾಗುತ್ತದೆ..
ಆದುದರಿಂದ ಯಾವುದೇ ದೃಢೀಕೃತ ಉಲ್ಲಂಘನೆಯ ಜಾಹೀರಾತು/ ಕಾಸಿಗಾಗಿ ಸುದ್ದಿ ಗಳಿಗೆ ಸಂಬಂಧಪಟ್ಟಂತೆ ಪ್ರಕರಣ 127ಎ ಅನ್ವಯ ಕ್ರಮ ಜರುಗಿಸಲು ಅವಕಾಶವಿರುವುದನ್ನು ಪುನಹ ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಸೂಚನೆಗಳನ್ನು ಗಮನದಲ್ಲಿರಿಸಿ ಜಿಲ್ಲೆಯ ಎಲ್ಲ ಪ್ರಕಾಶಕರು/ ಮುದ್ರಕರು ಯಾವುದೇ ನಿಯಮ ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿದ್ದಾರೆ. ಜಿಲ್ಲೆಯ ಎಲ್ಲ ಸಂಬಂಧಪಟ್ಟ ಎಲ್ಲ ಚುನಾವಣಾಧಿಕಾರಿಗಳು 127 ಎ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ನಿಯಮಾನುಸಾರ ಕ್ರಮ ಜರುಗಿಸಲು ನಿರ್ದೇಶಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.