Tuesday, April 23, 2013

ಸಮನ್ವಯ ಸಮಿತಿ ಸಭೆ

ಮಂಗಳೂರು ಏಪ್ರಿಲ್ 23:- ರಾಜ್ಯ ಸಾರ್ವತ್ರಿಕ ಚುನಾವಣೆ- 2013 ಚುನಾವಣೆ ಯಲ್ಲಿ ಸಮನ್ವಯ ತೆಯಿಂದ ಕಾರ್ಯ ಸಾಧಿಸಲು ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಅವರ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು. ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಚುನಾ ವಣಾ ವೀಕ್ಷ ಕರು ಮತ್ತು ಅಸಿ ಸ್ಟೆಂಟ್  ಎಕ್ಸ್ ಪೆಂಡಿ ಚರ್ ಅಧಿ ಕಾರಿ ಗಳು ಸಭೆ ಯಲ್ಲಿ ಉಪ ಸ್ಥಿತ ರಿದ್ದರು. ಚುನಾ ವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ತೆರಿಗೆ ಇಲಾಖೆ ಪ್ರಮುಖ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಚುನಾವಣೆ  ಸಮಯದಲ್ಲಿ  ತೆರಿಗೆ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹಾಗು ಕಾರ್ಯ ನಿರ್ವಹಿಸುವ ರೀತಿಯನ್ನು ಇನ್ಕಮ್ಟ್ಯಾಕ್ಸ್ ಅಧಿಕಾರಿ ಶ್ರೀಮತಿ ಲಕ್ಷ್ಮಿ ಹಂದೆ ಅವರು ಅಧಿಕಾರಿ ಗಳಿಗೆ ವಿವರಿಸಿದರು. ಹತ್ತು ಲಕ್ಷ ರೂಪಾಯಿ ಗಳಿ ಗಿಂತ ಹೆಚ್ಚಿನ ಮೊತ್ತವನ್ನು ಸೀಜ್ ಮಾಡಿದ ಸಂದರ್ಭದಲ್ಲಿ 50,000 ರೂಪಾಯಿಗಳಿಗಿಂತ ಹೆಚ್ಚಿನ ಸಂದರ್ಭದಲ್ಲಿ ಪೊಲೀಸ್ ನೆರವು ಪಡೆಯುವ ಬಗ್ಗೆಯೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಸಮುದ್ರದ ಮೂಲಕ, ವಿಮಾನನಿಲ್ದಾಣ ಮೂಲಕ, ರೈಲ್ವೇ ಮೂಲಕ ಯಾವುದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಡುಗೊರೆ, ಹಣ, ಬಂಗಾರ ಸಾಗಾಣಿಕೆಯನ್ನು ಪತ್ತೆ ಹಚ್ಚಲು ವಾಣಿಜ್ಯತೆರಿಗೆ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯಾವುದೇ ಕಾರ ಣಕ್ಕೂ ನೀತಿ ಸಂಹಿತೆ ಉಲ್ಲಂಘ ನೆಯಾ ಗಬಾ ರದು. ಹಾಗೂ ಎಲ್ಲ ಖರ್ಚು ವೆಚ್ಚ ಗಳು ಲೆಕ್ಕಕ್ಕೆ ಸಿಗ ಬೇಕೆಂಬ ಉದ್ದೇ ಶದಿಂದ ಸಮಗ್ರ ವ್ಯ ವಸ್ಥೆ ಮಾಡ ಲಾಗಿದೆ. ಚುನಾ ವಣಾ ಅಕ್ರಮ ತಡೆಗೆ ಎಲ್ಲ ಅಧಿ ಕಾರಿ ಗಳಿಗೆ ಪೂರಕ ಅಧಿ ಕಾರ ನೀಡ ಲಾಗಿದ್ದು, ಅಧಿಕಾರವನ್ನು ಸದ್ಬಳಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಡಿಷನಲ್ ಕಮಿಷನರ್ ಇನ್ ಕಾಮ್ ಟ್ಯಾಕ್ಸ್  ಡಿ. ಕೆ. ಝಾ, ಎನ್ಎಮ್ ಪಿ ಟಿ ಪೋರ್ಟ್ ಸೆಕ್ರೆಟರಿ ಕಸ್ಟಮ್ಸ್ ಅಧಿಕಾರಿಗಳು, ಏರ್ಪೋರ್ಟ್ ಡೈರೆಕ್ಟರ್ ರಾಧಾಕೃಷ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.