ಮಂಗಳೂರು, ಎಪ್ರಿಲ್. 19 :-ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಚುನಾವಣೆಗೆ
ವೀಕ್ಷಕರನ್ನಾಗಿ ಈ ಕೆಳಕಂಡ ವೀಕ್ಷಕರುಗಳನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.
ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ
ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಮೂಡಬಿದ್ರೆ ಮತ್ತು ಪುತ್ತೂರು
ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ
ಸಂಖ್ಯೆಗಳು ಹಾಗೂ ವಾಸ್ತವ್ಯದ ವಿಳಾಸ ಈ ಕೆಳಗಿನಂತಿವೆ.
ಮೂಡಬಿದ್ರೆ ವಿಧಾನಸಭಾ ಚುನಾವಣಾ ಕ್ಷೇತ್ರದ ವೀಕ್ಷಕರಾಗಿ ಮುಕೇಶ್ ಕುಮಾರ್ ಐ.ಎ.ಎಸ್. ದೂರವಾಣಿ ಸಂಖ್ಯೆ 9483506401 ಇವರು ಮೂಡಬಿದ್ರಿ ಪುರಸಭೆ ಕಚೇರಿಯಲ್ಲಿ ಸಂಜೆ 3.00 ಗಂಟೆಯಿಂದ 4.00 ಗಂಟೆ ವರೆಗೆ, ಪುತ್ತೂರು ವಿಧಾನಸಭಾ ಚುನಾವಣಾ ಕ್ಷೇತ್ರದ ವೀಕ್ಷಕರಾಗಿ ರಾಮ್ ಕುಮಾರ್ ಐ.ಎಫ್.ಎಸ್. ದೂರವಾಣಿ ಸಂಖ್ಯೆ 9483506406 ಇವರು ಪುತ್ತೂರು ಪ್ರವಾಸಿ ಬಂಗ್ಲೆಯಲ್ಲಿ ಸಂಜೆ 4.00 ಗಂಟೆಯಿಂದ 5.00 ಗಂಟೆ ವರೆಗೆ ಸಾರ್ವಜನಿಕರ ಭೇಟಿಗಾಗಿ ವಾಸ್ತವ್ಯವಿರುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು,ರಾಜಕೀಯ ಪಕ್ಷದ ಪ್ರತಿನಿಧಿಯವರು ಮತ್ತು ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ನಿಗಧಿಪಡಿಸಿದ ಅವಧಿಯಲ್ಲಿ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.