ಮಂಗಳೂರು, ಏಪ್ರಿಲ್. 30:ಚುನಾವಣಾ ಪ್ರಚಾರ ತಂತ್ರಗಳ ಮೇಲೆ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದ್ದು ಮೇ 5ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಮೇ 3ರಂದು 5ಗಂಟೆಯ ನಂತರ ಎಲ್ಲ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮೇ 3ರ ಐದು ಗಂಟೆಯ ನಂತರದೃಶ್ಯ ಮತ್ತು ಮುದ್ರಣ ಮಾದ್ಯಮದ ಮೂಲಕ ಜಾಹೀರಾತು ಪ್ರಕಟಣೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್ನ ಪ್ರಸಾರ ಹಾಗೂ ವಿಶ್ಲೇಷಣೆಗಳ ಮೇಲೆ ಈ ಅವಧಿಯಲ್ಲಿ ನಿರ್ಬಂಧ ಹೇರಲಾಗಿದೆ. ಅಭ್ಯರ್ಥಿಗಳ ಅಥವಾ ಪಕ್ಷದ ಸಂದರ್ಶನಗಳು ಮತ್ತು ಸುದ್ದಿ ಪ್ರಕಟಣೆಯನ್ನು ಈ ಅವಧಿಯಲ್ಲಿ ಪ್ರಸಾರ ಮಾಡಬಾರದಾಗಿ ಕೋರಲಾಗಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಯಾವುದೇ ಸಮೀಕ್ಷೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಹರ್ಷಗುಪ್ತ ಅವರು ಸ್ಪಷ್ಟ ಪಡಿಸಿದ್ದಾರೆ.ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಸೂಚಿಸಿದ್ದಾರೆ.