ಮಂಗಳೂರು,ಏಪ್ರಿಲ್.12: ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳೇ ನಮ್ಮ ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅವರ ಹೊಣೆಯನ್ನು ನಿರ್ವಹಿಸಲಿದ್ದು, ನಿಮ್ಮ ಆದೇಶಗಳನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 ನಡಿ ಕ್ರಮ ತೆಗೆದುಕೊಳ್ಳಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಹೇಳಿದರು.
ಇಂದು ಮಂಗಳೂರು ಮಹಾನಗರಪಾಲಿಕೆಯ ಮಂಗಳ ಸಭಾಂಗಣದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ರಿಟರ್ನಿಂಗ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಮೇಲಿನಿಂದ ಕೆಳಹಂತದವರೆಗೆ ಸಂವಹನ ಕೊರತೆ ಸಂಭವಿಸಬಾರದು ಎಂದು ಸ್ಪಷ್ಟಪಡಿಸಿದರು. ವಾಹನಗಳನ್ನು ಬಳಸುವ ಬಗ್ಗೆ, ಹೋಟೆಲ್ ಅಥವಾ ಕೇಟರಿಂಗ್ ಗಳಿಂದ ಊಟ ಸರಬರಾಜು ಮಾಡುವ ಬಗ್ಗೆ, ಶಾಮಿಯಾನ ಹಾಕಲೂ ಸಹಿತ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಯಾವುದೇ ರ್ಯಾಲಿಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಮನಿಶ್ ಕರ್ಬಿಕರ್ ಅವರು ಸ್ಟ್ಯಾಟಿಕ್ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಹಾಗೂ ಯಾವುದೇ ರೀತಿಯ ಸಂಶಯಾಸ್ಪದ ಘಟನೆಗಳು ನಡೆಯುವ ಬಗ್ಗೆ ಮಾಹಿತಿ ಲಭ್ಯವಾದರೆ ಅದನ್ನು ವಿಡಿಯೋ ಚಿತ್ರೀಕರಣ ಮಾಡುವ ಬಗ್ಗ ನಿರ್ದೇಶನ ನೀಡಿದರು.
ರಿಟರ್ನಿಂಗ್ ಅಧಿಕಾರಿಗಳು, ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳು ತಮ್ಮ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳ ಜೊತೆ ಸಂಪರ್ಕವಿರಿಸಿ ಚುನಾವಣಾ ನೀತಿ ಸಂಹಿತ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಉದಾಸೀನ ಮಾಡದೆ ಕಾರ್ಯೋನ್ಮುಖರಾಗಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಗೆ ಚುನಾವಣಾ ಖರ್ಚು ವೆಚ್ಚ ವೀಕ್ಷಕರ ಆಗಮನ
ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಖರ್ಚು ವೆಚ್ಚ ವೀಕ್ಷಕರಾಗಿ ಬೆಳ್ತಂಗಡಿ, ಮೂಡಬಿದರೆ, ಪುತ್ತೂರು, ಸುಳ್ಯ ಕ್ಷೇತ್ರಗಳಿಗೆ ವಿನೀಷ್ ಚೌಧರಿ (9483506411),
vinish.chaudhary@gmail.com ಮಂಗಳೂರು -204, 205 ಬಂಟ್ವಾಳಕ್ಕೆ ಆರ್. ಕೆ ಅಗರ್ವಾಲ್,
(agrawalRK@cag.gov.in). . 202 ಮಂಗಳೂರು ಸಿಟಿ ನಾರ್ತ್, 203 ಮಂಗಳೂರು ಸಿಟಿ ಸೌತ್ ಮೊಹಮ್ಮದ್ ಶಂಶಾದ್ ಆಲಂ (9483506399)
shamshadirs@gmail.com ಇವರು ಆಗಮಿಸಿರುತ್ತಾರೆ.