Friday, April 19, 2013

ಸ್ಥಳೀಯ ಸುದ್ದಿ ಚಾನೆಲ್ ಗಳ ಗಮನಕ್ಕೆ

ಮಂಗಳೂರು, ಏಪ್ರಿಲ್. 19 : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲೆಯ ಎಂ ಸಿ ಎಂಸಿ ಸಮಿತಿಯು ಗಮನಿಸಿದಂತೆ ಸ್ಥಳೀಯ ಕೇಬಲ್ ಟಿ ವಿ ಮತ್ತು ಚಾನೆಲ್ ಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಪರೋಕ್ಷ ಚುನಾವಣಾ ಜಾಹೀರಾತು/ ಪ್ರಚಾರಗಳು ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದೆ.
           
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಎಸ್ ಎಲ್ ಪಿ (ಸಿ) ನಂ. 6679/2004 ತೀರ್ಪಿನ ಅನ್ವಯ ಸ್ಥಳೀಯ ಕೇಬಲ್ ಮತ್ತು ಟಿವಿ ಚಾನೆಲ್ ಗಳು ಚುನಾವಣಾ ಪ್ರಚಾರ /ಜಾಹೀರಾತು ಪ್ರಸಾರಕ್ಕೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯಬೇಕಿದೆ. ಒಂದು ವೇಳೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದಿದ್ದಲ್ಲಿ  ಕೇಬಲ್ ಅಂಡ್ ಟಿವಿ ನೆಟ್ ವರ್ಕ್ ರೆಗ್ಯುಲೇಷನ್ ಆಕ್ಟ್ 1995 ಹಾಗೂ ಸುಪ್ರೀಂ ಕೋರ್ಟ್ ನ ಆದೇಶದ ಉಲ್ಲಂಘನೆಗೆ ಒಳಪಡುವುದರಿಂದ ಅದರಂತೆ ಕ್ರಮ ಜರುಗಿಸುವುದು ಅನಿವಾರ್ಯ ವಾಗಿರುತ್ತದೆ.
ಆದುದರಿಂದ ಜಿಲ್ಲೆಯ ಎಲ್ಲ ಕೇಬಲ್ ಟಿವಿ ಮತ್ತು ಚಾನೆಲ್ಗಳಲ್ಲಿ ಚುನಾವಣಾ ಪ್ರಚಾರ ಪ್ರಸಾರ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.