Tuesday, September 6, 2011

ಜಿಪಿಎಸ್ ಅಳವಡಿಸದ ಮರಳು ಲಾರಿಗೆ ಒಂದು ಲಕ್ಷ ರೂ. ದಂಡ

ಮಂಗಳೂರು,ಸೆಪ್ಟೆಂಬರ್.06 :ಜಿಪಿಎಸ್ ಇಲ್ಲದ ಹಾಗೂ ಜಿಪಿಎಸ್ ಚಾಲನೆ (ಆಕ್ಟಿವೇಟ್) ಮಾಡದ ಮರಳು ಸಾಗಾಣಿಕೆ ವಾಹನ ಗಳಿಗೆ ಒಂದು ಲಕ್ಷ ರೂ. ದಂಡ ವಿಧಿಸ ಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ. ಎನ್. ಎಸ್ ಚನ್ನಪ್ಪ ಗೌಡ ಅವರು ತಿಳಿಸಿ ದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಈ ಸಂಬಂಧ ಹೊರಡಿಸಿರುವ ಪ್ರಕಟಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಅಂತರ್ ರಾಜ್ಯ ಮರಳು ಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮರಳು ಸಾಗಾಣಿಕೆ ಮಾಡುವ ಎಲ್ಲ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಮತ್ತು ವಾಹನದ ಮುಂಭಾಗದಲ್ಲಿ ಬಿಳಿ ಬಣ್ಣ ಬಳಿಯುವುದು ಕಡ್ಡಾಯವಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜಿಪಿಎಸ್ ಇಲ್ಲದ ವಾಹನಗಳು ಹಾಗೂ ಇನ್ನು ಕೆಲವು ಜಿ ಪಿ ಎಸ್ ಚಾಲನೆ ಮಾಡದೆ ಮರಳು ಸಾಗಾಣಿಕೆಯನ್ನು ಮಾಡುತ್ತಿರುವುದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿದೆ. ಮರಳು ಸಾಗಾಣಿಕೆ ಮಾಡುವ ವಾಹನಗಳು ಕಡ್ಡಾಯವಾಗಿ ಕಾನೂನು ಪಾಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.