ಮಂಗಳೂರು,ಸೆಪ್ಟೆಂಬರ್.16 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 2010ರ ಆಗಸ್ಟ್ ಮಾಹೆಗಿಂತ ಈ ವರ್ಷ 2011 ರ ಆಗಸ್ಟ್ ಮಾಹೆಯಲ್ಲಿ ಹೆಚ್ಚಿನ ಮಳೆಯಾಗಿದೆ. 2010ರ ಆಗಸ್ಟ್ ಮಾಹೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು 826.4 ಮಿಲಿಮೀಟರ್ ಮಳೆಯಾಗಿದ್ದರೆ,ಈ ವರ್ಷ ಆಗಸ್ಟ್ ಮಾಹೆಯಲ್ಲಿ 916.5 ಮಿಲಿಮೀಟರ್ ದಾಖಲೆ ಮಳೆಯಾಗಿದೆ.
ಸುಳ್ಯ ತಾಲೂಕಿನಲ್ಲಿ 2010 ರ ಆಗಸ್ಟ್ ಮಾಹೆಯಲ್ಲಿ 802.8 ಮಿಲಿ ಮೀಟರ್ ಮಳೆಯಾಗಿತ್ತು.ಪ್ರಸ್ತುತ ವರ್ಷ 807.8 ಮಳೆಯಾಗಿದೆ.
ಪುತ್ತೂರು ತಾಲೂಕಿನಲ್ಲಿ 2010ರ ಆಗಸ್ಟ್ ನಲ್ಲಿ 636.4 ಮಿಲಿಮೀಟರ್ ಮಳೆಯಾಗಿದ್ದರೆ 2011ರ ಆಗಸ್ಟ್ ಮಾಹೆಯಲ್ಲಿ 842.4 ಮಿಲಿಮೀಟರ್ ದಾಖಲೆ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನಲ್ಲಿ2010ರ ಆಗಸ್ಟ್ ತಿಂಗಳಲ್ಲಿ 631.4 ಮಿಲಿಮೀಟರ್ ಮಳೆಯಾಗಿತ್ತು.ಆದರೆ ಈ ವರ್ಷದ ಆಗಸ್ಟ್ ಮಹೆಯಲ್ಲಿ 912.5 ಮಿಲಿಮೀಟರ್ ಮಳೆ ದಾಖಲಾಗಿದೆ.
ಸುಳ್ಯ ತಾಲೂಕಿನಲ್ಲಿ ಕಳೆದ ವರ್ಷ 802.4 ಮಿಲಿಮೀಟರ್ ಮಳೆಯಾಗಿದ್ದು,ಈ ವರ್ಷ 807.8 ಮಿಲಿಮೀಟರ್ ಮಳೆ ದಾಖಲಾಗಿದ್ದು 5.4 ಮಿಲಿಮೀಟರ್ ಹೆಚ್ಚುವರಿ ಮಳೆಯಾಗಿದೆ.
2011 ರ ಸೆಪ್ಟೆಂಬರ್ 15 ರ ತನಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು 495.7 ಮಿಲಿಮೀಟರ್ ಮಳೆಯಾಗಿದ್ದರೆ,ಅತೀ ಕಡಿಮೆ 360.2 ಮಿಲಿಮೀಟರ್ ಸುಳ್ಯ ತಾಲೂಕಿನಲ್ಲಿ ದಾಖಲಾಗಿದೆ.ಉಳಿದಂತೆ ಮಂಗಳೂರು ತಾಲೂಕಿನಲ್ಲಿ 460.4 ಮಿಲಿಮೀಟರ್ ಪುತ್ತೂರಿನಲ್ಲಿ 426.0 ಮಿಲಿಮೀಟರ್ ಹಾಗೂ ಬಂಟ್ವಾಳದಲ್ಲಿ 404.6 ಮಿಲಿಮೀಟರ್ ಮಳೆಯಾಗಿದೆ.
ಈ ವರ್ಷದ ಮಳೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ 7 ಜನರ ಪ್ರಾಣ ಹಾನಿಯಾಗಿದೆ. ಇವರಿಗೆ ತಲಾ 1 ಲಕ್ಷದಂತೆ 7 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಇದೇ ರೀತಿ 7 ಹಸುಗಳು ಪ್ರಾಣ ಕಳಕೊಂಡಿದ್ದು,ಇದಕ್ಕಾಗಿ ವಾರಿಸುದಾರರಿಗೆ ರೂ.20,000/-ಪರಿಹಾರ ದೊರಕಿದೆ. ಇದಲ್ಲದೆ 493 ವಾಸದ ಮನೆಗಳು ನಾಶವಾಗಿದ್ದು,ಇದರಿಂದ 47.82 ಲಕ್ಷ ನಷ್ಠವುಂಟಾಗಿದೆ.ಮನೆಗಳನ್ನು ಕಳಕೊಂಡವರಿಗೆ ಇಲ್ಲಿಯವರೆಗೆ ರೂ.12.21 ಲಕ್ಷ ಜಿಲ್ಲಾಡಳಿತದ ವತಿಯಿಂದ ಪರಿಹಾರ ವಿತರಿಸಲಾಗಿದೆ.
ಮಳೆ ಕಾರಣದಿಂದ ಗಾಯಗೊಂಡ ಇಬ್ಬರಿಗೆ ರೂ.5000/- ಪರಿಹಾರ ಧನ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 116 ಎಕರೆ ಪ್ರದೇಶದಲ್ಲಿದ್ದ ವಿವಿಧ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಕೇಂದ್ರ ಸರ್ಕಾರದ ನಿಯಾಮಾವಳಿಯಂತೆ 5000/- ಪರಿಹಾರ ದೊರಕಿಸಲಾಗಿದೆ.