ಮಂಗಳೂರು,ಸೆಪ್ಟೆಂಬರ್.06:ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕ್ಷೇತ್ರದ ಮಂಗಳೂರು ವಿಧಾನಸಭಾ ಕ್ಷೇತ್ರ ಹಾಗೂ ಬಂಟ್ವಾಳಗಳ ವ್ಯಾಪ್ತಿಯಲ್ಲಿ 2009-10 ಹಾಗೂ 2010-11 ರ ಸಾಲಿನಲ್ಲಿ ಕಾಮಗಾರಿಗಳಿಗೆ ಮಂಜೂರಾಗಿದ್ದ ಒಟ್ಟು 19.50 ಲಕ್ಷ ರೂ.ಗಳ ಶೇಕಡಾ 50 ಮುಂಗಡ ರೂ.9.75 ಲಕ್ಷ ಅನುದಾನವನ್ನು ಸಂಬಂಧಿಸಿದ ಇಲಾಖೆಗಳಿಗೆ ಚಿಕ್ ಮೂಲಕ ಬಿಡುಗಡೆ ಮಾಡಲಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ 10ನೇ ತೋಕೂರು ಕುಲಾಲ ಸಂಘ(ರಿ) ಇದರ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ.2.00 ಲಕ್ಷ ಮಂಜೂರಾಗಿದ್ದು ಇದೀಗ ರೂ.1.00 ಲಕ್ಷ ಬಿಡುಗಡೆಯಾಗಿದೆ. ಮಂಗಳೂರು ಈಡನ್ ಕ್ಲಬ್ ರಸ್ತೆ ಶ್ರೀ ಭಾರತಿ ಕಾಲೇಜು ಕೊಠಡಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ 2.00 ಲಕ್ಷ ದಲ್ಲಿ 1.00 ಲಕ್ಷ ಬಿಡುಗಡೆ ಯಾಗಿದೆ.
ಬಿಜೈನ ಕದ್ರಿ ಕಂಬಳ ಮಹಿಳಾ ಮಂಡಲಗಳ ಒಕ್ಕೂಟ(ರಿ) ಇದರ ಕಟ್ಟಡ ನಿರ್ಮಾಣಕ್ಕೆ 1.00 ಲಕ್ಷ ಮಂಜೂರಾಗಿದ್ದು,ಮುಂಗಡ ರೂ.50,000 ಬಿಡುಗಡೆಯಾಗಿದೆ.
ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದಲ್ಲಿ ಶಿವಳ್ಳಿ ಸಮಾಜ ಮಂದಿರ ನಿರ್ಮಾಣಕ್ಕಾಗಿ ಮಂಜೂರಾತಿಯ ರೂ.2.00 ಲಕ್ಷದಲ್ಲಿ ಮುಂಗಡ ರೂ.1.00 ಲಕ್ಷ,ವಿಟ್ಲ ಕಸಬಾ ಗ್ರಾಮದ ಗೌಡ ಸಮಾಜದ ಸಮುದಾಯಭವನ ಕಾಮಗಾರಿಗೆ ರೂ.2.50 ಲಕ್ಷದಲ್ಲಿ ಮುಂಗಡ ರೂ.1.25 ಲಕ್ಷ ಬಿಡುಗಡೆಯಾಗಿದೆ.
ಮಂಗಳೂರು ತಾಲೂಕು ಬೈಕಂಪಾಡಿ ಮೊಗವೀರ ಮಹಾಸಭಾದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ದೊರಕಿರುವ ರೂ.5.00 ಲಕ್ಷದಲ್ಲಿ ಮುಂಗಡವಾಗಿ ರೂ.2.50 ಲಕ್ಷ ,ಕುಳಾಯಿ ಭಾರತಿ ವಿದ್ಯಾ ಸಂಸ್ಥೆಯ ರಜತ ಮಹೋತ್ಸವ ಕಟ್ಟಡ ಕಾಮಗಾರಿಯ ಸಲುವಾಗಿ ರೂ.2.00 ಲಕ್ಷಕ್ಕೆ ಮುಂಗಡ ರೂ.1.00 ಲಕ್ಷ ಬಿಡುಗಡೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.