ಮಂಗಳೂರು,ಸೆಪ್ಟೆಂಬರ್.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11-12ನೇ ಸಾಲಿನಲ್ಲಿ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ 2,33,803 ರಾಸುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶುಪಾಲನಾ ಇಲಾಖಾ ಉಪ ನಿರ್ದೇಶಕರಾದ ಡಾ ಕೆ ವಿ ಹಲಗಪ್ಪ ಅವರು ತಿಳಿಸಿದ್ದಾರೆ.
ಪಲ್ಸ್ ಪೋಲಿಯೋ ಮಾದರಿಯಲ್ಲಿ 1.8.11ರಿಂದ ಆರಂಭಿಸಿದ ಲಸಿಕಾ ಕಾರ್ಯಕ್ರಮ ಕ್ಲಸ್ಟರ್/ಫಿರ್ಕವಾರು ಹಾಗೂ ಗ್ರಾಮವಾರು ನಿರ್ವಹಿಸಿದ್ದು 21.9.11ರವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಲಭ್ಯವಾದ ಅರ್ಹ ಜಾನುವಾರುಗಳ ಶೇ. 87ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಸಂದರ್ಭದಲ್ಲಿ ತಮ್ಮ ಮನೆಯ ಯಾವುದೇ ದನ/ಎಮ್ಮೆ ಲಸಿಕೆಗೊಳಪಡದೆ ಬಿಟ್ಟು ಹೋಗಿದ್ದಲ್ಲಿ ಹತ್ತಿರದ ಇಲಾಖಾ ಪಶುವೈದ್ಯಕೀಯ ಸಂಸ್ಥೆಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ, ಪಶುವೈದ್ಯರು -ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿಕೊಳ್ಳಬೇಕೆಂದು ಉಪನಿರ್ದೇಶಕರು ಕೋರಿದ್ದಾರೆ.