ಮಂಗಳೂರು,ಸೆಪ್ಟೆಂಬರ್.14:ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ತಲಾ ರೂ. 10 ಲಕ್ಷ ನಿಗದಿಪಡಿಸಲಾಗಿದೆ ಹಾಗೂ ಇಲಾಖೆಗೆ ಆ ಜಾಗವನ್ನು ಹಸ್ತಾಂತರಿಸಲು ಸಮ್ಮತಿಯಿದ್ದರೆ ಅರ್ಹ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ ಎಂದು ಯುವಜನ ಸೇವ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪಾಶ್ರ್ವನಾಥ ತಿಳಿಸಿದ್ದಾರೆ.ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾ ಸಂಸ್ಥೆಯ ಆಟದ ಮೈದಾನ ಅಭಿವೃದ್ಧಿ ಪಡಿಸಲುರೂ. 4.86 ಲಕ್ಷ ನಿಗದಿ ಪಡಿಸಲಾಗಿದೆ.ಶಾಲೆಗೆ ಪಹಣಿ ಪತ್ರವನ್ನು ಹೊಂದಿರುವವರು ಪ್ರಸ್ತಾವನೆಗಳನ್ನು ಸಹಿಸಲು ಅರ್ಹರಿರುತ್ತಾರೆ.
ಪರಿಶಿಷ್ಟ ಜಾತಿ/ಪಂಗಡದ ಸಂಘಗಳಿಗೆ ಸಲಕರಣೆ ವಿತರಣೆಗೆಯುವಜನ ಸೇವಾ ಮತ್ತುಕ್ರೀಡಾಇಲಾಖೆಯಲ್ಲಿ ನೊಂದಾಯಿತ ಪರಿಶಿಷ್ಟ ಜಾತಿ/ಪಂಗಡದಜಿಲ್ಲೆಯ 10ಯುವಕ ಸಂಘಗಳಿಗೆ ತಲಾರೂ. 10,000 ದಂತೆ ಕ್ರೀಡಾ ಸಾಮಗ್ರಿಗಳ ಖರೀದಿಗೆ, 10 ಭಜನಾ ತಂಡಗಳಿಗೆ ಸಾಮಗ್ರಿಗಳ ಖರೀದಿಗೆರೂ.10,000 ದಂತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಸಹಾಯಕ ನಿರ್ದೇಶಕರು, ಯುವಜನಸೇವಾ ಮತ್ತುಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಅಥವಾ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿರುವ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಿಂದ ಪಡೆಯಬಹುದಾಗಿದೆ.