Wednesday, September 7, 2011

ಹೆಚ್ ಐ ವಿ ಕಳಂಕಿತ ತಾರತಮ್ಯ ಬೇಡ ; ಡಾ.ವಿಜಯ ಪ್ರಕಾಶ್

ಮಂಗಳೂರು,ಸೆಪ್ಟೆಂಬರ್.07:ಹೆಚ್ಐವಿ ಸೋಂಕಿತರು ಸಹ ಎಲ್ಲರಂತೆ ಮನುಷ್ಯರೇ ಅವರಿಗೂ ಬದುಕುವ ಹಕ್ಕಿದೆ.ಆದ್ದರಿಂದ ಅವರನ್ನು ಕಳಂಕಿತರೆಂದು ತಾರತಮ್ಯ ಮಾಡದೇ ಮಾನವೀಯ ಅನುಕಂಪ ತೋರಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಜನತೆಗೆ ಮನವಿ ಮಾಡಿದ್ದಾರೆ.
ಅವರು ಇಂದು ನಗ ರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಯಲ್ಲಿ ಕರ್ನಾ ಟಕ ರಾಜ್ಯ ಏಡ್ಸ್ ನಿಯಂ ತ್ರಣ ಸಂಸ್ಥೆ,ಜಿಲ್ಲಾ ಆ ರೋಗ್ಯ ಇಲಾಖೆ, ವಾರ್ತಾ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ನಿಯಂ ತ್ರಣ ಮತ್ತು ಪ್ರತಿ ಬಂಧಕ ಘಟಕ ಮಂಗ ಳೂರು ಇವರ ಸಂಯುಕ್ತಾ ಶ್ರಯ ದಲ್ಲಿ ಏರ್ಪ ಡಿಸಿದ್ದ ಏಚ್ಐವಿ-ಏಡ್ಸ್ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಲೈಂಗಿಕ ಕಾರ್ಯ ಕರ್ತೆ ಯರ ಪುನ ರ್ವಸ ತಿಗೆ ಜಿಲ್ಲಾ ಪಂಚಾ ಯತ್,ಮಹಾ ನಗರ ಪಾಲಿಕೆ ಯಿಂದ ಆಗ ಬೇಕಾದ ಕೆಲಸ ವನ್ನು ಮಾಡಿ ಕೊಡು ವುದಾಗಿ ತಿಳಿ ಸಿದ ವಿಜಯ ಪ್ರಕಾಶ್ ,ಲೈಂಗಿಕ ಕಾರ್ಯ ಕರ್ತರು ಹೊಟ್ಟೆ ಪಾಡಿಗೆ ಲೈಂಗಿ ಕತೆಗೆ ತೊಡಗು ವುದನ್ನು ತಡೆ ಯುವುದು ನಮ್ಮೆಲ್ಲರ ಗುರಿ ಯಾಗ ಬೇಕೆಂದರು.ಅವರು ಸ್ವಾವಲಂಬಿ ಜೀವನ ನಡೆಸಲು ಸಮಾಜ, ಸರ್ಕಾರಗಳು ವಾತಾವರಣ ಕಲ್ಪಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ .ಶ್ರೀರಂಗಪ್ಪ,ಜಿಲ್ಲಾ ಏಡ್ಸ್ ನಿಯಂತ್ರಣ ಸಂಸ್ಥೆಯ ಡಾ.ಕಿಶೋರ ಕುಮಾರ್,ಡಾ ಸೌಮ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ ಹರೀಶ್ ರೈ ಅವರುಗಳು ಉಪಸ್ಥಿತರಿದ್ದರು.ಜಿಲ್ಲೆ ಯಲ್ಲಿ ಈ ಹಿಂದಿ ಗಿಂತ ಇಂದು ಲೈಂಗಿಕ ಕಾರ್ಯ ಕರ್ತೆ ಯರಿಗೆ ಶೋಷಣೆ ತಕ್ಕ ಮಟ್ಟಿಗೆ ಕಡಿಮೆ ಯಾಗಿದೆ,ಪೊಲೀ ಸರ ಕಿರು ಕುಳ ಸಹ ಕಡಿಮೆ ಯಾಗಿದೆ.ಸರ್ಕಾರ ಲೈಂಗಿಕ ಅಲ್ಪ ಸಂಖ್ಯಾ ತರಿಗೆ ಪಡಿ ತರ ಚೀಟಿ,ಮತ ದಾನದ ಹಕ್ಕು ಹಾಗೂ ಸರ್ಕಾರಿ ವಸತಿ ಯೋಜನೆ ಗಳಲ್ಲಿ ವಸತಿ ಕಲ್ಪಿ ಸುವಿಕೆ ಮಾಸಾ ಶನ ದೊರಕಿ ಸಲು ಮುಂದಾ ಗಿದೆ.ಆದರೆ ಸಮಾಜದಲ್ಲಿ ಅವರುಗಳು ಪರಿತ್ಯಕ್ತರಂತೆ ಜೀವಿಸಬೇಕಾಗಿದೆ.ತಂದೆ ತಾಯಿಗಳ ಆಶ್ರಯವಿಲ್ಲದೆ ಜೀವಿಸಬೇಕಾಗಿದೆ.ಮನೆ ಬಾಡಿಗೆಗೆ ಸಿಗುವುದಿಲ್ಲ ಎಂದು ಎಚ್ಐವಿ ಬಾಧಿತರು ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಅಳಲು ತೋಡಿಕೊಂಡರು.ಕಾರ್ಯಾಗಾರದಲ್ಲಿ ಅಧಿವೇಶನ 1: - ಎಚ್ಐವಿ-ಏಡ್ಸ್ ತಡೆಗಟ್ಟುವಿಕೆ,ಆರೈಕೆ ಮತ್ತು ಚಿಕಿತ್ಸೆ-ಒಂದು ಪಕ್ಷಿನೋಟ,ಅಧಿವೇಶನ 2:- ಎಚ್ಐವಿ/ಏಡ್ಸ್ ನಿಯಂತ್ರಣ ಹಾಗೂ ಕಳಂಕ ಮತ್ತು ತಾರತಮ್ಯಗಳನ್ನು ಕಡಿಮೆಗೊಳಿಸುವ ಕುರಿತು ಸಮುದಾಯ ಸದಸ್ಯರಿಂದ ವಿಚಾರ ಹಂಚಿಕೆ,ಅಧಿವೇಶನ 3: ಎಚ್ಐವಿ ತಡೆಗಟ್ಟುವಿಕೆಯಲ್ಲಿ ಅಪಾಯದ ಅಂಚಿನಲ್ಲಿರುವ ಸಮುದಾಯಗಳ ಪಾತ್ರ,ಸಮುದಾಯದ ಸದಸ್ಯರಿಂದ ವಿಚಾರ ಹಂಚಿಕೆ ನಡೆಯಿತು.
ಲೈಂಗಿಕ ಕಾರ್ಯಕರ್ತೆಯರಲ್ಲಿ ಎಚ್ಐವಿ ತಡೆಗಟ್ಟುವಿಕೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತಂತೆ ಅರಿವು ಮೂಡಿಸುವ ಕಾರ್ಯದಲ್ಲಿ ಮಾಧ್ಯಮದವರ ಸಹಕಾರ ಕೋರಿದರು.