ಮಂಗಳೂರು,ಸೆಪ್ಟೆಂಬರ್.06: ಜಿಲ್ಲೆಯಲ್ಲಿ ಜನರ ಅನುಕೂಲಕ್ಕಾಗಿ ವಿಶೇಷ ಪೋಡಿ ಆಂದೋಲನವನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ಭೂಮಾಪಕರು ಆಂದೋಲನವನ್ನು ತ್ವರಿತಗೊಳಿಸಿ ಎಂದು ಜಿಲ್ಲಾಧಿಕಾರಿ ಎನ್. ಎಸ್. ಚನ್ನಪ್ಪಗೌಡ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಂದಾಯಭವನದಲ್ಲಿ ಆರಂಭಿಸಿದ ಪೋಡಿ ಆಂದೋಲನ ಶಿಬಿರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿಗಾಗಿ ಸರ್ಕಾರಿ ಜಮೀನು ಗುರುತಿಸುವಿಕೆ ಅಗತ್ಯವಾಗಿ ಆಗಬೇಕಾಗಿದೆ ಎಂದರು. ಪೋಡಿ ಆಂದೋಲನದ ವಿವರವನ್ನು ಭೂಮಾಪನ ಉಪನಿರ್ದೇಶಕ ಬಿ ಕೆ ಕುಸುಮಾಧರ ನೀಡಿದರು. ಉಪವಿಭಾಗಾಧಿಕಾರಿ ಎಂ ವಿ ವೆಂಕಟೇಶ, ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ರವಿಚಂದ್ರ ನಾಯಕ್ , ಗ್ರಾಮ ಲೆಕ್ಕಾಧಿಕಾರಿ ಶಂಕರ್, ತಾಲೂಕು ಸರ್ವೇ ಅಧಿಕಾರಿ ಎಚ್. ಸಂಜೀವ್ ಉಪಸ್ಥಿತರಿದ್ದರು.