ಮಂಗಳೂರು,ಸೆಪ್ಟೆಂಬರ್ 28: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಯೋಜನೆಗಳನ್ನು ಮಾದರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಹೇಳಿದ್ದಾರೆ. ಅವರು ಬುಧವಾರ ಲಾಯಿಲದ ಗ್ರಾಮ ಪಂಚಾಯತ್ ವಠಾರದಲ್ಲಿ ಮಹಿಳೆಯರು ತಯಾರಿಸುವ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ `ಸೇಫ್ಟಿ'ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಮಹಿಳೆ ಯರಲ್ಲಿ ಆರೋಗ್ಯದ ಮಹತ್ವ ವನ್ನು ತಿಳಿಸ ಬೇಕು; ಸ್ವಯಂ ಉದ್ಯೋಗ ಹಾಗೂ ಸ್ವಾವ ಲಂಬಿ ಗಳಾ ಗುವ ಕುರಿತು ಗ್ರಾಮ ಪಂಚಾ ಯತ್ ಗಳು ಜಾಗೃತಿ ಮೂಡಿಸುವ ಕಾರ್ಯ ವನ್ನು ಕೈ ಗೆತ್ತಿ ಕೊಳ್ಳ ಬೇಕು ಎಂದವರು ನುಡಿದರು.ಮಹಿಳೆ ಯರಲ್ಲಿ ಉತ್ಪನ್ನಗಳ ಕುರಿತು ಜಾಗೃತಿ, ಬಳಕೆ ಪ್ರಮಾಣ ಹೆಚ್ಚಾದಂತೆ, ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದನಾ ಘಟಕ ಉದ್ದಿಮೆಯಾಗಿ ಬೆಳೆಯಬಲ್ಲುದು. ಮಾರುಕಟ್ಟೆಯಲ್ಲಿ ತನ್ನ ಗುಣಮಟ್ಟದಿಂದ ಸ್ಪರ್ಧೆಯನ್ನು ಎದುರಿಸಬಲ್ಲದು ಎಂದು ಅಭಿಪ್ರಾಯಪಟ್ಟ ಜಿಪಂ ಅಧ್ಯಕ್ಷರು, ಲಾಯಿಲ ಗ್ರಾಮ ಪಂಚಾಯತ್ ಸ್ಯಾನಿಟರಿ ನ್ಯಾಪ್ಕಿನ್ ಘಟಕ ಹಾಗೂ ಉತ್ತಮ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮೂಲಕ ಜಿಲ್ಲೆಯ ಇತರ ಗ್ರಾಮ ಪಂಚಾಯತ್ಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಪ್ಕಿನ್ನ ಮೊದಲ ಉತ್ಪನ್ನವನ್ನು ಧರ್ಮಸ್ಥಳ ಸಿರಿ ಗ್ರಾಮೋ ದ್ಯೋಗ ಸಂಸ್ಥೆ ಹಾಗೂ ಸ್ಥಳೀಯ ಗ್ರಾಮೀಣ ಸೂಪರ್ ಮಾರ್ಕೆಟ್ ಗೆ ಹಸ್ತಾಂತರ ಗೊಳಿಸುವ ಮೂಲಕ ಮಾರುಕಟ್ಟೆಗೆ ಮುಕ್ತಗೊಳಿಸಿದರು.ಅತಿಥಿ ಯಾಗಿ ಮಾತ ನಾಡಿದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ವಿಜಯ ಪ್ರಕಾಶ್, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿನಿ ನಿಲಯ ಗಳಲ್ಲಿ ನಮ್ಮದೇ ಮಹಿಳೆ ಯರು ಮಾಡುವ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸು ವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ, ನ್ಯಾಪ್ಕಿನ್ ಉಪಯೋಗದ ಬಗ್ಗೆ ಗ್ರಾಮ ಪಂಚಾಯತ್ ಗಳು ಮಹಿಳೆ ಯರನ್ನು ಮತ್ತು ಶಾಲಾ ವಿದ್ಯಾರ್ಥಿನಿ ಯರನ್ನು ಒಂದೆಡೆ ಸೇರಿಸಿ ಮಾಹಿತಿ ಕೊಡುವ ಕಾರ್ಯಕ್ರಮ ನಡೆಸ ಬೇಕು. ಲಾಯಿಲಾ ಗ್ರಾಪಂ ಉತ್ತಮ ಅಭಿವೃದ್ಧಿ ಮಾದರಿ ನೀಡಿರುವುದು ಸ್ಥಳೀಯ ಶಾಸಕನಾದ ನನಗೆ ಹೆಮ್ಮೆ ತಂದಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ಸದಸ್ಯ ಶೈಲೇಶ್ ಕುಮಾರ್, ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಯೋಜನಾಧಿಕಾರಿ ಗೀತಾ, ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್, ಪಿರಿಯಾಪಟ್ಟಣ ಕಾವೇರಿ ಮಾತಾ ಟ್ರಸ್ಟ್ ನಿರ್ದೇಶಕ ಪಿ.ಸಲ್ದಾನ, ಲಾಯಿಲ ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಾಯಿಲ ಗ್ರಾಪಂ ಅಧ್ಯಕ್ಷ ಸುಧಾಕರ ಬಿ.ಎಲ್ ಸ್ವಾಗತಿಸಿದರು. ದ.ಕ. ಜಿಲ್ಲಾ ನೆರವು ಘಟಕದ ಮಂಜುಳಾ ಪ್ರಸ್ತಾವಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಪಡಿಸಿದ ಲಾಯಿಲ ಗೋಲ್ಡ್ ಎಂಬ ಎರೆಹುಳ ಗೊಬ್ಬರದ ಸಾಂಕೇತಿಕ ಬಿಡುಗಡೆಯನ್ನು ಡಾ.ಕೆ ಎನ್ ವಿಜಯ ಪ್ರಕಾಶ್ ನೆರವೇರಿಸಿದರು.ಸಭೆಯಲ್ಲಿದ್ದ ಮಹಿಳೆಯರಿಗೆ ಉಚಿತವಾಗಿ ನ್ಯಾಪ್ಕಿನ್ ಪ್ಯಾಡ್ನ್ನು ಹಾಗೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಕರಪತ್ರವನ್ನು ವಿತರಿಸಲಾಯಿತು. ಅತಿಥಿಗಳಿಗೆ ಪುಸ್ತಕಗಳನ್ನು ನೀಡಿ ಸ್ವಾಗತಿಸಬೇಕು ಎಂಬ ಸರಕಾರದ ಆದೇಶವನ್ನು ಇಲ್ಲಿ ಪಾಲಿಸಲಾಯಿತು.
ನಬಾರ್ಡ್ ಸಹಕಾರದಿಂದ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಆರಂಭಗೊಂಡಿರುವ ಐಸಿರಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸುವ `ಸೇಫ್ಟಿ' ಸ್ಯಾನಿಟರಿ ನ್ಯಾಪ್ಕಿನ್ ಜಿಲ್ಲೆಯ ಪ್ರಥಮ ಘಟಕವಾಗಿದೆ. ಒಂದು ಪ್ಯಾಕ್ಗೆ ರೂ. 15ರಂತೆ ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಲಾಯಿಲ ಗ್ರಾಮದಲ್ಲಿನ ಕಾಲು ಇಲ್ಲದ ಕು.ಅಶ್ವಿನಿ ಎಂಬ ಬಾಲಕಿಗೆ ಗ್ರಾಮ ಪಂಚಾಯತ್ ವತಿಯಿಂದ ನೀಡಲಾದ ರೂ.5000ದ ನೆರವನ್ನು ಶಾಸಕರು ವಿತರಿಸಿದರು. ಇದೇ ಸಂದರ್ಭ ಅವರೂ ರೂ. ಒಂದು ಸಾವಿರ ವೈಯಕ್ತಿಕ ನೆರವು ನೀಡಿದರು.