ಮಂಗಳೂರು,ಸೆಪ್ಟೆಂಬರ್.23:ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ,ಬೆಂಗಳೂರು,ಬಳ್ಳಾರಿ,ಮೈಸೂರು ಗುಲ್ಬರ್ಗಾ ಜಿಲ್ಲೆಗಳ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಜರ್ಮನ್ ತಾಂತ್ರಿಕ ಸಹಕಾರ {ಜರ್ಮನಿ} ಈ ಸಂಸ್ಥೆಯ ಸಹಯೋಗದೊಂದಿಗೆ ಪೈಲಟ್ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಈ ಪೈಲಟ್ ಯೋಜನೆಯು ಅಸಂಘಟಿತ ವರ್ಗದವರಾದ ಕೃಷಿ ಕಾರ್ಮಿಕರು,ನಿರ್ಮಾಣ ಕಾರ್ಮಿಕರು,ಗೃಹಕೃತ್ಯದ ಕಾರ್ಮಿಕರು,ವಸ್ತ್ರೋದ್ಯಮ ಕಾರ್ಮಿಕರು ಮತ್ತು ಅಗರ್ ಬತ್ತಿ ಕಾರ್ಮಿಕರನ್ನು ಒಳಗೊಂಡಿರುತ್ತದೆ. ಸದರಿ ಯೋಜನೆಯನ್ನು ದಕ್ಷಿಣಕನ್ನಡ ಜಿಲೆಯ ಮಂಗಳೂರು ತಾಲೂಕಿನ 25 ಗ್ರಾಮ ಗಳು ಬಂಟ್ವಾಳ ತಾಲೂಕಿನ 25 ಗ್ರಾಮ ಪಂಚಾಯತ್ ಮತ್ತು ವಾರ್ಡುಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.ಈ ಯೋಜನೆಯಡಿ ಗ್ರಾಮ ಪಂಚಾಯತಿ ಹಾಗೂ ವಾರ್ಡು ಮಟ್ಟದಲ್ಲಿ ಕಾರ್ಮಿಕರ ಸೇವಾ ಕೇಂದ್ರವನ್ನು ಪ್ರಾರಂಭಿಸಿ ಕಾರ್ಮಿಕರಿಗೆ ಸಮುದಾಯ ಸೌಲಭ್ಯೀಕರಣ ಒದಗಿಸಲಿದೆ.